Aishwarya Rai: ಸೊಸೆಯನ್ನು ಅನ್ ಫಾಲೋ ಮಾಡಿದ ಬಿಗ್ ಬಿ! ಅಭಿಷೇಕ್ ಐಶ್ವರ್ಯ ವಿಚ್ಛೇದನ ವದಂತಿಗೆ ರೆಕ್ಕೆ ಪುಕ್ಕ!

Written by Pooja Siddaraj

Published on:

Aishwarya Rai: ನಮ್ಮ ಕರ್ನಾಟಕದ ಬೆಡಗಿ, ಮಂಗಳೂರಿನ ಹುಡುಗಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ. ಕರ್ನಾಟಕದ ಹೆಸರನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋದವರಲ್ಲಿ ಐಶ್ವರ್ಯ ರೈ ಕೂಡ ಒಬ್ಬರು. ಮೊದಲಿಗೆ ದಕ್ಷಿಣ ಭಾರತದಲ್ಲಿ ಹೆಸರು ಮಾಡಿದ್ದ ಐಶ್ವರ್ಯ ರೈ ಅವರು ಬಳಿಕ ಬಾಲಿವುಡ್ ನಲ್ಲಿ ಹೆಸರು ಮಾಡಿದರು. ಈಗಲೂ ಕೂಡ ಇವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ.

ಐಶ್ವರ್ಯ ರೈ ಅವರು ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಹೆಸರು ಮಾಡಿದ್ದಾರೆ. ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ, ಹಾಲಿವುಡ್ ನಲ್ಲಿ ಸಹ ಸಿನಿಮಾಗಳಲ್ಲಿ ನಟಿಸಿ, ವರ್ಲ್ಡ್ ಸಿನಿಮಾದಲ್ಲಿ ತಮ್ಮ ಹೆಸರು ಸ್ಥಾಪಿಸಿದ್ದಾರೆ. ವಿಶ್ವದಲ್ಲೇ ಅತ್ಯಂತ ಸುಂದರವಾದ ಮಹಿಳೆ ಎಂದು ಕೂಡ ಹೆಸರು ಪಡೆದಿದ್ದಾರೆ. ಕೆರಿಯರ್ ನಲ್ಲಿ ಪೀಕ್ ನಲ್ಲಿ ಇದ್ದಾಗಲೇ ಮದುವೆಯಾದರು. ಬಾಲಿವುಡ್ ನ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರೊಡನೆ ಮದುವೆಯಾದರು.

ಐಶ್ವರ್ಯ ರೈ ಅವರ ಅಭಿಷೇಕ್ ಬಚ್ಚನ್ ಅವರೊಡನೆ ಮದುವೆಯಾದ ಬಳಿಕ ಈ ಜೋಡಿಗೆ ಹೆಣ್ಣು ಮಗು ಜನಿಸಿತು, ಮಗಳಿಗೆ ಆರಾಧ್ಯ ಬಚ್ಚನ್ ಎಂದು ಹೆಸರಿಟ್ಟಿದ್ದಾರೆ. ಆರಾಧ್ಯ ಈಗ ಶಾಲೆಯಲ್ಲಿ ಓದುತ್ತಿದ್ದಾರೆ. 16 ವರ್ಷಗಳಿಂದ ಸುಂದರವಾಗಿದ್ದ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿರಬೇಕು ಎನ್ನುವ ವದಂತಿ ಕೇಳಿಬಂದಿದೆ. ಅಭಿಷೇಕ್ ಬಚ್ಚನ್ ಅವರು ವೆಡ್ಡಿಂಗ್ ರಿಂಗ್ ಇಲ್ಲದೆ ಕಾಣಿಸಿಕೊಂಡಿರುವುದು ಈ ವದಂತಿ ಕಾರಣವಾಗಿತ್ತು.

ಅದರ ಜೊತೆಗೆ ಈಗ ಮತ್ತೊಂದು ವಿಚಾರಕ್ಕೆ ಅನುಮಾನ ಶುರುವಾಗಿದೆ. ಐಶ್ವರ್ಯ ರೈ ಅವರ ಮಾವ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್, ಇದೀಗ ಇವರು ಇನ್ಸ್ಟಾಗ್ರಾಮ್ ನಲ್ಲಿ ಐಶ್ವರ್ಯ ರೈ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಇತ್ತ ಐಶ್ವರ್ಯ ರೈ ಅವರು ಫಾಲೋ ಮಾಡುತ್ತಿರುವುದು ಪತಿ ಅಭಿಶೇಕ್ ಬಚ್ಚನ್ ಅವರನ್ನು ಮಾತ್ರ, ಅವರಿಬ್ಬರು ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದಾರೆ.

ಈ ವಿಚಾರ ಕೂಡ ಇನ್ನಷ್ಟು ಗೊಂದಲ ಶುರು ಮಾಡಿದೆ, ಹಾಗೆಯೇ ಐಶ್ವರ್ಯ ರೈ ಅವರು ಈಗ ಹೆಚ್ಚಾಗಿ ತಾಯಿ ಮನೆಯಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ, ಇದೆಲ್ಲವೂ ವದಂತಿಗಳಿಗೆ ಕಾರಣವಾಗಿದೆ. ಆದರೆ ಐಶ್ವರ್ಯ ರೈ ಅವರಾಗಲಿ ಬಚ್ಚನ್ ಅವರ ಫ್ಯಾಮಿಲಿ ಆಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Leave a Comment