Amruthadhare: ಅಮೃತಧಾರೆ ಸೀರಿಯಲ್ ಜೀವಾ ಅವರ ರಿಯಲ್ ಲೈಫ್ ಪತ್ನಿ ಯಾರು ಗೊತ್ತಾ? ಇವರು ಕೂಡ ಫೇಮಸ್ ನಟಿ?

0 18

Amruthadhare: ಕಿರುತೆರೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ಧಾರವಾಹಿಗಳಲ್ಲಿ ಒಂದು ಅಮೃತಧಾರೆ. ಈ ಧಾರವಾಹಿಯಲ್ಲಿ ನಟ ರಾಜೇಶ ನಟರಂಗ ನಾಯಕ ಗೌತಮ್ ಪಾತ್ರದಲ್ಲಿ ನಟಿ ಛಾಯಾ ಸಿಂಗ್ ನಾಯಕಿ ಭೂಮಿಕಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರಿಬ್ಬರಿಗೆ ಧಾರವಾಹಿಯಲ್ಲಿ ಬಹಳ ಲೇಟ್ ಆಗಿ ಮದುವೆ ಆಗುತ್ತದೆ. ಇಬ್ಬರಿಗೂ ನಾನಾ ಕಾರಣಕ್ಕೆ ಮದುವೆ ಆಗಿರುವುದಿಲ್ಲ. ವಿಧಿ ಎನ್ನುವ ಹಾಗೆ ಇಬ್ಬರ ಬಂಧ ಬೆಸೆಯುತ್ತದೆ.

ಅಮೃತಧಾರೆ ಧಾರವಾಹಿಯಲ್ಲಿ ಗೌತಮ್ ಭೂಮಿಕಾ ಮುಖ್ಯ ಪಾತ್ರವಾದರು ಈ ಧಾರಾವಾಹಿಯ ಮತ್ತೊಂದು ಪ್ರಮುಖ ಜೋಡಿ ಜೀವಾ ಮತ್ತು ಮಹಿಮಾ. ಜೀವ ಭೂಮಿಕಾ ತಮ್ಮ, ಮಹಿಮಾ ಗೌತಮ್ ತಂಗಿ. ಇವರಿಬ್ಬರ ಲವ್ ಸ್ಟೋರಿ ಕಾರಣಕ್ಕೆ ಗೌತಮ್ ಭೂಮಿಕಾ ತಮಗೆ ಇಷ್ಟವಿಲ್ಲದಿದ್ದರೂ ಮದುವೆಯಾಗುತ್ತಾರೆ. ಧಾರವಾಹಿಯಲ್ಲಿ ಇವರದ್ದು ಮುಖ್ಯಪಾತ್ರ. ಭೂಮಿಕಾ ತಮ್ಮ ಜೀವ ಪಾತ್ರದಲ್ಲಿ ನಟಿಸುತ್ತಿರುವುದು ಶಶಿ ಹೆಗ್ಡೆ.

ಇವರು ಕನ್ನಡ ಕಿರುತೆರೆಗೆ ಹೊಸಬರಲ್ಲ, ಈ ಮೊದಲೇ ಕೆಲವು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಈಗ ಜೀವ ಪಾತ್ರದ ಮೂಲಕ ಎಲ್ಲರಿಗೂ ಇಷ್ಟವಾಗಿದ್ದಾರೆ. ಶಶಿ ಹೆಗ್ಡೆ ಅವರ ಪತ್ನಿ ಯಾರು ಗೊತ್ತಾ? ಅವರು ಕೂಡ ಖ್ಯಾತ ಕಿರುತೆರೆ ನಟಿ, ಅವರ ಹೆಸರು ಲಾವಣ್ಯ ಭಾರದ್ವಾಜ್. ಇವರು ಕೂಡ ಈಗ ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಪೂರ್ಣಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

shashi lavanya
Source:Google

ಅದಕ್ಕಿಂತ ಮೊದಲು ದಾಸ ಪುರಂಧರ ಧಾರವಾಹಿಯಲ್ಲಿ ನೆಗಟಿವ್ ಶೇಡ್ ಪಾತ್ರ ನಿರ್ವಹಿಸಿದ್ದರು ಲಾವಣ್ಯ. ಅಷ್ಟೇ ಅಲ್ಲದೇ ಈ ಜೋಡಿ ಜೀಕನ್ನಡ ವಾಹಿನಿಯ ಜೋಡಿ ನಂಬರ್ 1 ಶೋನಲ್ಲಿ ಸ್ಪರ್ಧಿಗಳಾಗಿ ಭಾಗವಹಿಸುತ್ತಿದ್ದಾರೆ. ಈ ಮುದ್ದಾದ ಫ್ಯಾನ್ ಬೇಸ್ ಕೂಡ ಇದೆ. ಇವರನ್ನು ಕ್ಯೂಟ್ ಕಪಲ್ ಎಂದೇ ಎಲ್ಲರೂ ಕರೆಯುತ್ತಾರೆ.

Leave A Reply

Your email address will not be published.