Amulya Bharadwaj: ಬೃಂದಾವನ ಧಾರಾವಾಹಿ ನಟಿ ಅಮೂಲ್ಯ ಭಾರದ್ವಾಜ್ ನಿಜ ಜೀವನದಲ್ಲಿ ಎಷ್ಟು ಮಾಡರ್ನ್ ಗೊತ್ತಾ?

0 1

Amulya Bharadwaj: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿ ಧಾರವಾಹಿ ಮೂಲಕ ವಿಭಿನ್ನವಾದ ಕಥೆಗಳ ಜೊತೆಗೆ ಜನರಿಗೆ ತುಂಬಾ ಇಷ್ಟವಾಗುತ್ತದೆ. ಸ್ವಂತ ಕಥೆಗಳ ಧಾರವಾಹಿ ಮಾಡುತ್ತಾ, ಹೊಸತನ ಹೊಸಕಥೆಯ ಕಾರಣ ಕಲರ್ಸ್ ಕನ್ನಡ ವಾಹಿನಿ ಜನರಿಗೆ ತುಂಬಾ ಇಷ್ಟವಾಗುತ್ತದೆ. ಇತ್ತೀಚೆಗೆ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಶುರುವಾಗಿರುವ ಹೊಸ ಧಾರವಾಹಿ ಬೃಂದಾವನ.

ಈ ಧಾರವಾಹಿ ಒಂದು ತುಂಬು ಕುಟುಂಬದ ಕಥೆ ಆಗಿದೆ. 32 ಸದಸ್ಯರಿರುವ ಮನೆಯ ಕಥೆ. ಈ ಧಾರವಾಹಿಯಲ್ಲಿ ಹೀರೋ ಆಕಾಶ ಮತ್ತು ಹೀರೋಯಿನ್ ಪುಷ್ಪ ಮದುವೆ ಸಂಭ್ರಮ ಜೋರಾಗಿಯೇ ನಡೆದಿದೆ, ಆದರೆ ಆಕಾಶ್ ಫೋಟೋ ನೋಡಿ ಇಷ್ಟಪಟ್ಟ ಹುಡುಗಿಯೇ ಬೇರೆ, ಮದುವೆ ಆಗಿರುವ ಪುಷ್ಪ ಬೇರೆ. ಏನು ಮಾಡಬೇಕು ಎಂದು ಸರಿಯಾಗಿ ಗೊತ್ತಾಗದೇ ಗೊಂದಲದಲಿದ್ದಾನೆ ಆಕಾಶ್. ಈ ಧಾರವಾಹಿಯ ನಾಯಕಿ ಬಗ್ಗೆ ಹೇಳುವುದಾದರೆ..

ಮೊದಲಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲೇ ದಾಸಪುರಂಧರ ಧಾರವಾಹಿಯಲ್ಲಿ ಸರಸ್ವತಿ ಪಾತ್ರದಲ್ಲಿ ನಟಿಸಿದ್ದರು. ಈಗ ಬೃಂದಾವನ ಧಾರವಾಹಿಯ ಪುಷ್ಪ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಮೂಲ್ಯ ಮೂಲತಃ ಮೈಸೂರಿನ ಹುಡುಗಿ ಎನ್ನಲಾಗಿದೆ. ಬಿಕಾಂ ಓದಿದ್ದಾರೆ, ಆದರೆ ನಟನೆಯ ಮೇಲೆ ಆಸಕ್ತಿ ಇದ್ದ ಕಾರಣ ಇಂದು ನಟನೆಯಲ್ಲೇ ತೊಡಗಿಕೊಂಡಿದ್ದಾರೆ. ಅಮೂಲ್ಯ ಅವರು ಆಡಿಷನ್ ಗಾಗಿ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದರಂತೆ.

ಹಲವು ಸಾರಿ ಆಡಿಷನ್ ಗಳಲ್ಲಿ ರಿಜೆಕ್ಟ್ ಕೂಡ ಆಗಿದ್ದಾರೆ. ಮೊದಲಿಗೆ ಆಡಿಷನ್ ನಲ್ಲಿ ಸೆಲೆಕ್ಟ್ ಆಗಿ ಅವಕಾಶ ಸಿಕ್ಕಿದ್ದು ಕಲರ್ಸ್ ಕನ್ನಡದ ಶಾಂತಂ ಪಾಪಂ ಧಾರವಾಹಿಯಲ್ಲಿ, ಇದರಲ್ಲಿ ಮೂರು ಎಪಿಸೋಡ್ ನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಇವರಿಗೆ ದಾಸ ಪುರಂಧರ ಧಾರವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಈಗ ಬೃಂದಾವನ ಧಾರವಾಹಿಯಲ್ಲಿ ಪುಷ್ಪ ಆಗಿ ನಟಿಸುತ್ತಿದ್ದಾರೆ.

ಧಾರವಾಹಿಯಲ್ಲಿ ಯಾವಾಗಲೂ ಸೀರೆ ಧರಿಸಿರುವ ಪುಷ್ಪ ನಿಜ ಜೀವನದಲ್ಲಿ ಹಾಗಿಲ್ಲ, ಬಹಳ ಮಾಡರ್ನ್ ಆಗಿದ್ದಾರೆ. ಶಾರ್ಟ್ ಡ್ರೆಸ್ ಧರಿಸಿರುವ ಇವರ ಫೋಟೋಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜನರು ಕೂಡ ಅಮೂಲ್ಯ ಭಾರದ್ವಾಜ್ ಬಹಳ ಮಾಡರ್ನ್ ಆಗಿದ್ದಾರೆ ಎಂದು ಶಾಕ್ ಆಗಿದ್ದಾರೆ.

Leave A Reply

Your email address will not be published.