Amulya: ಚಂದನವನಕ್ಕೆ ರೀಎಂಟ್ರಿ ಕೊಡಲು ಸಜ್ಜಾದ ಚಿತ್ತಾರದ ಚೆಲುವೆ! ಅಭಿಮಾನಿಗಳಿಗೆ ಗುಡ್ ನ್ಯೂಸ್!

0 3

Amulya: ಚಂದನವನಕ್ಕೆ ಬಾಲಿನಟಿಯಾಗಿ ಎಂಟ್ರಿ ಕೊಟ್ಟು ಇಂದು ಅಭಿಮಾನಿಗಳ ಮನಸ್ಸಿನಲ್ಲಿ ಗೋಲ್ಡನ್ ಕ್ವೀನ್ ಆಗಿಯೇ ಸ್ಥಾನ ಗಳಿಸಿರುವವರು ನಟಿ ಅಮೂಲ್ಯ. ಚಿಕ್ಕವಯಸ್ಸಿನಿಂದಲೂ ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕಾರಣ ಎಲ್ಲರಿಗೂ ಇವರ ಮೇಲೆ ತುಂಬಾ ಪ್ರೀತಿ ಇದೆ. ಚಂದನವನದ ಬಹುತೇಕ ಎಲ್ಲಾ ಕಲಾವಿದರು ಅಮೂಲ್ಯ ಅವರನ್ನು ಇನ್ನು ಪುಟ್ಟ ಮಗುಗಿನ ಹಾಗೆ ಕಾಣುತ್ತಾರೆ. ಆದರೆ ಅಮೂಲ್ಯ ಅವರಿಗೆ ಈಗ ಇಬ್ಬರು ಅವಳಿ ಜವಳಿ ಮಕ್ಕಳಿದ್ದಾರೆ. ಚಿತ್ರರಂಗದಿಂದ ಬ್ರೇಕ್ ಪಡೆದಿದ್ದ ಅಮೂಲ್ಯ ಅವರು ರೀಎಂಟ್ರಿ ಕೊಡುವುದಕ್ಕೆ ಮುಂದಾಗಿದ್ದಾರೆ..

ನಟಿ ಅಮೂಲ್ಯ ಪರ್ವ ಸಿನಿಮಾ ಮೂಲಕ ಬಾಲನಟಿಯಾಗಿ ಮೊದಲ ಬಾರಿಗೆ ಅಭಿನಯ ಮಾಡಿದರು. ಮೊದಲ ಸಿನಿಮಾದಲ್ಲೇ ದಿಗ್ಗಜರಾದ ಸಾಹಸಸಿಂಹ ವಿಷ್ಣುವರ್ಧನ್ ಅವರ ಸಿನಿಮಾದಲ್ಲಿ ಅಭಿನಯಿಸಿದರು. ನಂತರ ಅಮೂಲ್ಯ ಅವರು ಕನ್ನಡದ ಸ್ಟಾರ್ ನಟರ ಸಿನಿಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡರು. ದರ್ಶನ್, ಸುದೀಪ್ ಎಲ್ಲರ ಸಿನಿಮಾಗಳಲ್ಲೂ ಅಮೂಲ್ಯ ನಟಿಸಿದ್ದಾರೆ. ಒಂದು ಸಮಯದ ನಂತರ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡ ನಟಿ ಅಮೂಲ್ಯ, ಮತ್ತೊಮ್ಮೆ ರೀ ಎಂಟ್ರಿ ಕೊಟ್ಟಿದ್ದು ಹೀರೋಯಿನ್ ಆಗಿ. ಅದು ಚೆಲುವಿನ ಚಿತ್ತಾರ ಸಿನಿಮಾ ಮೂಲಕ.

ಸ್ಯಾಂಡಲ್ ವುಡ್ ನಲ್ಲಿ ಈ ಸಿನಿಮಾ ಎಷ್ಟು ದೊಡ್ಡ ಕ್ರೇಜ್ ಸೃಷ್ಟಿ ಮಾಡಿತ್ತು ಎನ್ನುವುದು ನಮಗೆಲ್ಲ ಗೊತ್ತಿದೆ. ಎಷ್ಟೊಂದು ಆಟೋಗಳ ಮೇಲು ಅಮೂಲ್ಯ ಎಂದು ಅವರ ಹೆಸರನ್ನೇ ನೋಡುವ ಹಾಗಿತ್ತು. 8ನೇ ತರಗತಿ ಓದುವಾಗಲೇ, ಮೊದಲ ಸಿನಿಮಾ ಮೂಲಕ ಕರ್ನಾಟಕದ ಕ್ರಶ್ ಆಗಿ ದೊಡ್ಡ ಸೆನ್ಸೇಷನ್ ಆಗಿದ್ದರು ಅಮೂಲ್ಯ. ಚೆಲುವಿನ ಚಿತ್ತಾರ ನಂತರ, ಒಂದು ಬ್ರೇಕ್ ಪಡೆದು ಚೈತ್ರದ ಚಂದ್ರಮ ಸಿನಿಮಾದಲ್ಲಿ ಅಭಿನಯಿಸಿದರು. ನಂತರ 10ನೇ ತರಗತಿ ಮುಗಿಸಿ, ಸಿನಿಮಾಗಳಲ್ಲಿ ನಟಿಸುವುದನ್ನು ಮತ್ತೆ ಶುರು ಮಾಡಿದರು. ಕಾಲೇಜಿನಲ್ಲಿ ಓದುವುದರ ಜೊತೆಗೆ ಸಿನಿಮಾವನ್ನು ಮಾಡುತ್ತಿದ್ದರು ಅಮೂಲ್ಯ.

ಹೀರೋಯಿನ್ ಆಗಿ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡರು. ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಗೋಲ್ಡನ್ ಕ್ವೀನ್ ಆದ ಅಮೂಲ್ಯ, ಅವರ ಜೊತೆಯಲ್ಲಿ ಮೂರು ಸಿನಿಮಾಗಳಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಂಡರು. ಬಳಿಕ ಅಮೂಲ್ಯ ಅವರು ನಟ ಪ್ರೇಮ್, ಚಿರಂಜೀವಿ ಸರ್ಜಾ, ದುನಿಯಾ ವಿಜಯ್, ಯಶ್ ಹಾಗೂ ಇನ್ನೆಲ್ಲ ಕನ್ನಡದ ಸ್ಟಾರ್ ಕಲಾವಿದರ ಜೊತೆಗೆ ತೆರೆಹಂಚಿಕೊಂಡರು. ಬಹಳ ಬೇಗ 2017ರಲ್ಲಿ ದಾಂಪತ್ಯ ಜೀವನಕ್ಕೂ ಕಾಲಿಟ್ಟ ಅಮೂಲ್ಯ ಅವರು ಈಗ ಇಬ್ಬರು ಮಕ್ಕಳ ತಾಯಿ.

ಮದುವೆ, ಮಕ್ಕಳು ಜನಿಸಿದ ನಂತರ ಚಿತ್ರರಂಗದಿಂದ ದೂರ ಉಳಿದಿದ್ದ ಅಮೂಲ್ಯ ಅವರು, ಇದೀಗ ರೀಎಂಟ್ರಿ ಬಗ್ಗೆ ಸುಳಿವು ನೀಡಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಕಾಣಿಸಿಕೊಂಡಿದ್ದ ನಟಿ ಅಮೂಲ್ಯ ಎರಡು ಸ್ಕ್ರಿಪ್ಟ್ ಗಳನ್ನು ಕೇಳಿದ್ದು, ಇಷ್ಟವಾಗಿದೆ, ಶೀಘ್ರದಲ್ಲೇ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಮತ್ತೆ ಕಂಬ್ಯಾಕ್ ಬಗ್ಗೆ ಸುಳಿವು ನೀಡಿದ್ದು ಈ ವಿಚಾರದಿಂದ ಅಭಿಮಾನಿಗಳು ಸಂತೋಷ ಪಟ್ಟಿದ್ದಾರೆ.

Leave A Reply

Your email address will not be published.