Anasuya Bharadwaj: ‘ನನಗೆ ಬೇಕು, ಆದರೆ ನನ್ನ ಗಂಡ ಸಹಕರಿಸುತ್ತಿಲ್ಲ’: ಶಾಕಿಂಗ್ ಹೇಳಿಕೆ ಕೊಟ್ಟ ನಟಿ ಅನಸೂಯ ಭಾರದ್ವಾಜ್

Written by Pooja Siddaraj

Published on:

Anasuya Bharadwaj: ತೆಲುಗು ಕಿರುತೆರೆ ಮತ್ತು ಚಿತ್ರರಂಗ ಎರಡರ ಮೂಲಕವೂ ಹೆಚ್ಚು ಖ್ಯಾತಿ ಗಳಿಸಿ ಶೈನ್ ಆಗುತ್ತಿರುವ ಪ್ರತಿಭೆಗಳಲ್ಲಿ ಒಬ್ಬರು ಅನಸೂಯ ಭಾರದ್ವಾಜ್. ಪುಷ್ಪಾ ಹಾಗೂ ರಂಗಸ್ಥಳಮ್ ಸಿನಿಮಾದಲ್ಲಿ ಇವರ ಪಾತ್ರ ಜನಮನ ಸೆಳೆದಿತ್ತು. ಪುಷ್ಪ ಸಿನಿಮಾದ ಪಾತ್ರವನ್ನಂತೂ ಜನರು ಇನ್ನು ಮರೆತಿಲ್ಲ. ಇಂಥ ಅನಸೂಯ ಅವರು ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಇದೀಗ ಇವರು ಗಂಡನ ಬಗ್ಗೆ ನೀಡಿರುವ ಹೇಳಿಕೆ ವೈರಲ್ ಆಗಿದೆ.

ನಟಿ ಅನಸೂಯ ಭಾರದ್ವಾಜ್ ಅವರು ಹಲವು ವರ್ಷಗಳಿಂದ ತೆಲುಗು ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ರಿಯಾಲಿಟಿ ಶೋಗಳ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಅನಸೂಯ ಅವರು ನಿಧಾನವಾಗಿ ಬೆಳ್ಳಿ ತೆರೆಗೂ ಎಂಟ್ರಿ ಕೊಟ್ಟರು. ನಟನೆಯಲ್ಲಿ ನೆಗಟಿವ್, ಪಾಸಿಟಿವ್ ಬೋಲ್ಡ್ ಎಲ್ಲಾ ಥರದ ಪಾತ್ರಕ್ಕೂ ಸೈ ಅನ್ನುವ ಅನಸೂಯ ಹಲವು ವಿಭಿನ್ನ ಸಿನಿಮಾಗಳಲ್ಲಿ ನಟಿಸಿದ್ದಾರೆ..

ಒಳ್ಳೆಯ ಅವಕಾಶಗಳು ಇವರನ್ನು ಹುಡುಕಿ ಬರುತ್ತಿವೆ. ಅನಸೂಯ ಭಾರದ್ವಾಜ್ ಅವರು ಸೋಷಿಯಲ್ ಮೀಡಿಯಾದಲ್ಲಿ ಕೂಡ ಸಿಕ್ಕಾಪಟ್ಟೆ ಆಕ್ಟಿವ್, ಹೊಸ ಫೋಟೋಶೂಟ್ ಮಾಡಿಸಿ ಅವುಗಳನ್ನು ಶೇರ್ ಮಾಡುತ್ತಾರೆ. ಅಥವಾ ಟ್ವೀಟ್ ನಲ್ಲಿ ನೀಡುವ ಹೇಳಿಕೆ ಇಂದಲೂ ಸುದ್ದಿಯಾಗುತ್ತಾರೆ ಅನಸೂಯ. ಇತ್ತೀಚೆಗೆ ಇವರು ಇಂಟರ್ವ್ಯೂ ಒಂದರಲ್ಲಿ ನೀಡಿರುವ ಹೇಳಿಕೆ ವೈರಲ್ ಆಗಿದೆ. ಈ ಬಾರಿ ಮನೆ ವಿಷಯ ಮಾತನಾಡಿದ್ದಾರೆ ಅನಸೂಯ.

ಅನಸೂಯ ಭಾರದ್ವಾಜ್ ಅವರು ತಮ್ಮ ಫ್ಯಾಮಿಲಿ ಬಗ್ಗೆ ಮಾತನಾಡಿ, ಅವರ ಪತಿ ಬಿಹಾರ ಮೂಲದವರಾಗಿದ್ದು, ಅವರ ಮನೆಯಲ್ಲಿ ಅಲ್ಲಿನ ಪದ್ಧತಿ ಅನುಸರಿಸುವುದಾಗಿ ಹೇಳಿದ್ದಾರೆ, ಅತ್ತೆ ಮನೆಗೆ ಹೋದರೆ ಎಲ್ಲಾ ಸಂಪ್ರದಾಯಗಳನ್ನು ಪಾಲಿಸಬೇಕು ಅನ್ನುತ್ತಾರೆ ಅನಸೂಯ. ಹಾಗೆಯೇ ಅನಸೂಯ ಅವರು ಬಿಹಾರದಲ್ಲಿ ಗಂಡುಪ್ರಾಧಾನ ಸಮಾಜ ಎಂದು ಹೇಳಿದ್ದಾರೆ.

ಗಂಡುಮಕ್ಕಳಿಗೆ ಆದ್ಯತೆ ಇದ್ದು, ಮನೆಯಲ್ಲಿ ಹೆಣ್ಣುಮಗು ಜನಿಸುವುದನ್ನು ಇಷ್ಟ ಪಡುವುದಿಲ್ಲ ಆದರೆ ನನಗೆ ಹೆಣ್ಣುಮಗು ಇಷ್ಟ ಆದರೆ ನನ್ನ ಗಂಡನಿಗೆ ಇಷ್ಟವಿಲ್ಲದ ಕಾರಣ ಅವರು ಸಹಕರಿಸುವುದಿಲ್ಲ ಎಂದು ಹೇಳಿದ್ದಾರೆ ಅನಸೂಯ. ಈ ಹೇಳಿಕೆ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

Leave a Comment