Anasuya Bharadwaj: ಅನಸೂಯ ಭಾರದ್ವಾಜ್ ಅವರ ಬಗ್ಗೆ ಈಗ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಅನಸೂಯ ಅವರು ಬಹಳ ವರ್ಷಗಳಿಂದ ತೆಲುಗು ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಸಕ್ರಿಯವಾಗಿದ್ದಾರೆ. ಅನಸೂಯ ಅವರು ಆಗಾಗ ನೀಡುವ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಾರೆ. ಇದೀಗ ಇವರು ಪಾರ್ಟಿಗಳ ವಿಷಯಕ್ಕೆ ನೀಡಿರುವ ಹೇಳಿಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಅನಸೂಯ ಅವರು ಹೇಳಿರೋದೇನು ಗೊತ್ತಾ?
ನಟಿ ಅನಸೂಯ ಭಾರದ್ವಾಜ್ ಬಣ್ಣದ ಪ್ರಪಂಚಕ್ಕೆ ಹೊಸಬರಲ್ಲ. ತೆಲುಗು ರಾಜ್ಯದಲ್ಲೇ ಹುಟ್ಟಿ ಬೆಳೆದಿರುವ ಅನಸೂಯ ಅವರು, ಮೊದಲಿಗೆ ಕೆರಿಯರ್ ಶುರು ಮಾಡಿದ್ದು, ನಿರೂಪಕಿಯಾಗಿ. ಹಲವು ತೆಲುಗು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿ, ಖ್ಯಾತ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಹಾಗೆಯೇ ಇವರು ಸಿನಿಮಾ ಮತ್ತು ವೆಬ್ ಸೀರೀಸ್ ನಲ್ಲಿ ಸಹ ನಟಿಸಿ ಹೆಸರು ಮಾಡಿದ್ದಾರೆ.
ಅನಸೂಯ ಅವರು ಮೊದಲಿಗೆ ನಟಿಸಿದ್ದು ಸುಕುಮಾರ್ ಅವರು ನಿರ್ದೇಶನ ಮಾಡಿದ ರಂಗಸ್ಥಳಮ್ ಸಿನಿಮಾದಲ್ಲಿ, ಈ ಸಿನಿಮಾದ ರಂಗಮ್ಮತ್ತೆ ಪಾತ್ರ ಇವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಬಳಿಕ ಅನಸೂಯ ಅವರು ಪುಷ್ಪ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿ, ಇನ್ನಷ್ಟು ಯಶಸ್ಸು ಗಳಿಸಿದರು. ಈಗ ಇವರು ನಿರೂಪಣೆಗಿಂತ ಹೆಚ್ಚಾಗಿ, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ.
ಇತ್ತೀಚೆಗೆ ಅನಸೂಯ ಅವರು ಸಮುದ್ರಖನಿ ಅವರು ನಾಯಕನಾಗಿ ನಟಿಸಿದ್ದ ವಿಮಾನಂ ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾದ ಅಭಿನಯಕ್ಕೆ ಇವರಿಗೆ ಒಳ್ಳೆಯ ಪ್ರಶಂಸೆಗಳು ಬಂದವು. ಸಿನಿಮಾ ಮತ್ತು ವೆಬ್ ಸೀರೀಸ್ ಗಳಲ್ಲಿ ಬ್ಯುಸಿ ಆಗಿರುವ ಅನಸೂಯ ಅವರು ಆಗಾಗ ತಾವು ನೀಡುವ ಹೇಳಿಕೆ ಇಂದಲೂ ಸುದ್ದಿಯಾಗುತ್ತಾರೆ. ಇತ್ತೀಚೆಗೆ ಇವರು ಒಂದು ಇಂಟರ್ವ್ಯೂನಲ್ಲಿ ನೀಡಿರುವ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅತ್ತಾರಿಂಟಿಕಿ ದಾರೆದಿ ಸಿನಿಮಾದ ಹಾಡೊಂದರಲ್ಲಿ ನಟಿಸುವ ಅವಕಾಶ ಅನಸೂಯ ಅವರಿಗೆ ಸಿಕ್ಕಿತ್ತು ಆದರೆ ಅವರು ಅದನ್ನು ಒಪ್ಪಿ ನಟಿಸಲಿಲ್ಲ. ಅದಕ್ಕೆ ಕಾರಣ ತಿಳಿಸಿರುವ ಅನಸೂಯ ಅವರು, ಆ ಹಾಡಿನಲ್ಲಿ ಸಾಕಷ್ಟು ನಟಿಯರಿದ್ದರು ಗುಂಪಲ್ಲಿ ಒಬ್ಬಳಾಗೋಕೆ ನನಗೆ ಇಷ್ಟವಿರಲಿಲ್ಲ ಎಂದು ಹೇಳಿದ್ದಾರೆ. ಮುಂದುವರೆದು ಮಾತನಾಡಿರುವ ಅನಸೂಯ ಅವರು, “ಶೂಟಿಂಗ್ ನಲ್ಲಿ ನನ್ನ ಕೆಲಸದ ಬಗ್ಗೆ ಮಾತ್ರ ನಾನು ಗಮನ ಕೊಡುತ್ತೇನೆ.
ಶೂಟಿಂಗ್ ಮುಗಿದ ಮೇಲೆ ಮನೆಗೆ ಹೋಗಿ ನನ್ನ ಕೆಲಸಗಳನ್ನು ನಾನು ಮಾಡಿಕೊಳ್ಳುತ್ತೇನೆ. ಶೂಟಿಂಗ್ ಮುಗಿದ ಮೇಲೆ ಪಾರ್ಟಿಗಳಿಗೆ ನಾನು ಹೋಗೋದಿಲ್ಲ. ಈ ಕಾರಣಕ್ಕೆ ಸಾಕಷ್ಟು ಅವಕಾಶಗಳು ಕೈತಪ್ಪಿ ಹೋಗಿವೆ. ಅಂಥ ಪಾರ್ಟಿಗಳಿಗೆ ಹೋಗಿದ್ರೆ ನಾನು ಹೀರೋಯಿನ್ ಆಗ್ತಿದ್ದೆ. ಅಂಥ ಅವಕಾಶಗಳು ನನಗೆ ಬರೋದು ಬೇಡ..” ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ ನಟಿ ಅನಸೂಯ ಭಾರದ್ವಾಜ್. ಇದೀಗ ಈ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ.