ಬಾಲಿವುಡ್ ನ ಸ್ಟಾರ್ ನಟ ರಣಬೀರ್ ಕಪೂರ್ (Ranbeer Kapoor) ಅವರಿಗೆ 2022 ಖುಷಿಯನ್ನು ನೀಡಿದ ವರ್ಷ ವಾಗಿದೆ. ಏಕೆಂದರೆ ರಣಬೀರ್ ಮತ್ತು ಆಲಿಯಾ(Alia) ಅಭಿನಯದ ಬ್ರಹ್ಮಾಸ್ತ್ರ (Brahmastra) ಸಿನಿಮಾ ಅವರಿಗೆ ಗೆಲುವನ್ನು ನೀಡಿದ್ದು, ಇನ್ನೊಂದೆಡೆ ಅವರು ವೈಯಕ್ತಿಕ ಜೀವನದಲ್ಲಿ ತಂದೆಯಾಗಿ ಪ್ರಮೋಷನ್ ಪಡೆದಿದ್ದಾರೆ. ಈಗ 2023ರ ಆರಂಭದಲ್ಲೇ ಅವರು ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾ ತಮ್ಮ ಹೊಸ ವರ್ಷವನ್ನು ಬಹಳ ಉತ್ಸಾಹದಿಂದ ಆರಂಭ ಮಾಡಿದ್ದಾರೆ. ಹೌದು, ನಟ ರಣಬೀರ್ ಕಪೂರ್ ಅವರು ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾ ಅನಿಮಲ್(Animal) ನ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಇದು ಎಲ್ಲೆಡೆ ವೈರಲ್ ಆಗುತ್ತಿದೆ.

ಅನಿಮಲ್(Animal First look) ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ನಲ್ಲಿ ರಣಬೀರ್ ಕಪೂರ್ ಲುಕ್ (Ranbeer Kapoor look) ನೋಡಿ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ನಟ ಸಿಕ್ಕಾಪಟ್ಟೆ ಖಡಕ್ ಮತ್ತು ರಗಡ್ ಲುಕ್ ನಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಹೊಸ ವರ್ಷದ ಪ್ರಯುಕ್ತ ನಿನ್ನೆ ರಾತ್ರಿ ಅಂದರೆ ಡಿ.31ರ ಮಧ್ಯ ರಾತ್ರಿ ಈ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ರಣಬೀರ್ ಕಪೂರ್ ಅಭಿಮಾನಿಗಳು ಇದನ್ನು ನೋಡಿ ಖುಷಿಯಾಗಿದ್ದು, ‘ಅನಿಮಲ್’ ಪೋಸ್ಟರ್ (Animal Poster) ವೈರಲ್ ಆಗುತ್ತಾ ಸಾಗಿದೆ. ಇನ್ನು ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಜೊತೆಗೆ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ನಲ್ಲಿ ಹೆಚ್ಚು ರೊಮ್ಯಾಂಟಿಕ್ ಪಾತ್ರಗಳಲ್ಲಿ ನಟಿಸಿರುವ ರಣಬೀರ್ ಕಪೂರ್(Ranbir Kapoor) ಈ ಸಿನಿಮಾದಲ್ಲೊಂದು ವಿಭಿನ್ನ ಗೆಟಪ್ ಮತ್ತು ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದು, ಈ animal movie ಸಿನಿಮಾವನ್ನು ವಿಜಯ ದೇವರಕೊಂಡ ನಾಯಕನಾಗಿದ್ದ ಅರ್ಜುನ್ ರೆಡ್ಡಿ ಸಿನಿಮಾ ನಿರ್ದೇಶನ ಮಾಡಿದ್ದ ಸಂದೀಪ್ ರೆಡ್ಡಿ ವಂಗ (Sandeep Reddy Vanga) ನಿರ್ದೇಶನ ಮಾಡಿದ್ದು, ದಕ್ಷಿಣದ ನಿರ್ದೇಶಕನ ನಿರ್ದೇಶನದಲ್ಲಿ ಮೂಡಿ ಬಂದಿರುವ ಅನಿಮಲ್ ಬಾಲಿವುಡ್ ನಲ್ಲಿ ಗೆದ್ದರೆ ಮತ್ತೊಮ್ಮೆ ದಕ್ಷಿಣದ ಸಿನಿಮಾ ಮಂದಿಯ ಸಾಮರ್ಥ್ಯ ಏನೆಂದು ಬಾಲಿವುಡ್ ಗೆ ತಿಳಿಯಲಿದೆ.