Anu Janardhan: ಇದ್ದಕ್ಕಿದ್ದ ಹಾಗೆ ಸತ್ಯ ಧಾರವಾಹಿಯಿಂದ ಹೊರಬಂದ ನಟಿ ಅನು! ಅಷ್ಟಕ್ಕೂ ಏನಾಗಿದೆ ಗೊತ್ತಾ?

0 17

Anu Janardhan: ಜೀಕನ್ನಡ ವಾಹಿನಿಯ ಸತ್ಯ ಧಾರವಾಹಿ ಜನರಿಗೆ ಬಹಳ ಇಷ್ಟ ಆಗಿರುವ ಧಾರವಾಹಿಗಳಲ್ಲಿ ಒಂದು. ಎರಡು ಮೂರು ವರ್ಷಗಳಿಂದ ಈ ಧಾರವಾಹಿ ಪ್ರಸಾರ ಆಗುತ್ತಿದ್ದರು ಸಹ, ಜನರಿಗೆ ಬೋರ್ ಅನ್ನಿಸದೇ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಈ ಧಾರವಾಹಿಯಲ್ಲಿ ಸತ್ಯ, ಕಾರ್ತಿಕ್ ಪಾತ್ರ ಜನರಿಗೆ ಎಷ್ಟು ಇಷ್ಟ ಆಗುತ್ತಿತ್ತೋ, ಅದೇ ರೀತಿ ನೆಗಟಿವ್ ರೋಲ್ ಆಗಿರುವ ಕೀರ್ತನಾ ಪಾತ್ರ ಕೂಡ ಜನರಿಗೆ ಇಷ್ಟವಾಗಿತ್ತು.

ಖಡಕ್ ಆದ ಮಾತು, ತೀಕ್ಷ್ಣವಾದ ನೋಟ, ಉತ್ತಮ, ಒಳ್ಳೆಯ ಸ್ಟೈಲ್ ಇಂದ ಕೀರ್ತನಾ ಪಾತ್ರದಲ್ಲಿ ನಟಿಸುತ್ತಿದ್ದರು ಅನು ಜನಾರ್ಧನ್. ಅನು ಜನಾರ್ಧನ್ ಅವರು ಕೀರ್ತನಾ ಪಾತ್ರದಿಂದ ಹೆಚ್ಚಿನ ಜನಪ್ರಿಯತೆ ಸಹ ಪಡೆದುಕೊಂಡಿದ್ದರು. ವೀಕ್ಷಕರು ಇವರ ಆಕ್ಟಿಂಗ್ ಗೆ ಫಿದಾ ಆಗಿದ್ದಂತೂ ಹೌದು. ಆದರೆ ಅನು ಅವರು ಇದೀಗ ಇದ್ದಕ್ಕಿದ್ದ ಹಾಗೆಯೇ ಸತ್ಯ ಧಾರವಾಹಿಯ ಕೀರ್ತನಾ ಪಾತ್ರದಿಂದ ಹೊರಬಂದಿದ್ದಾರೆ.

ಇವರ ಅಭಿಮಾನಿಗಳು ಇದಕ್ಕೆ ಕಾರಣ ಏನು ಎಂದು ತಲೆಕೆಡಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾ ಮೂಲಕ ಅನು ಅವರು ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ವೈಯಕ್ತಿಕ ಕಾರಣಗಳಿಂದ ಸತ್ಯ ಧಾರವಾಹಿ ಇಂದ ಹೊರಬಂದಿದ್ದು, ಶೀಘ್ರದಲ್ಲೇ ಹೊಸ ಪ್ರಾಜೆಕ್ಟ್ ಮೂಲಕ ಅಭಿಮಾನಿಗಳ ಎದುರು ಬರುವುದಾಗಿ ತಿಳಿಸಿದ್ದಾರೆ ಅನು ಜನಾರ್ಧನ್. ಇತ್ತ ಅವರ ಅಭಿಮಾನಿಗಳು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವರು ವೈಯಕ್ತಿಕ ಕಾರಣ ಅಂದರೆ ಏನಿರಬಹುದು ಎಂದು ತಲೆಕೆಡಿಸಿಕೊಂಡಿದ್ದಾರೆ. ಇವರು ನಟನೆ ಶುರು ಮಾಡಿದ್ದು ಮಹಾಕಾಳಿ ಎನ್ನುವ ಧಾರವಾಹಿ ಇಂದ ಆದರೂ, ರಂಗನಾಯಕಿ ಧಾರಾವಾಹಿಯ ನೆಗಟಿವ್ ಶೇಡ್ ಪಾತ್ರದಿಂದ ಹೆಚ್ಚು ಗುರುತಿಸಿಕೊಂಡರು, ಬಳಿಕ ಅನು ಅವರಿಗೆ ಸತ್ಯ ಧಾರವಾಹಿಯ ನೆಗಟಿವ್ ಪಾತ್ರದಿಂದಲೇ ಹೆಚ್ಚು ಹೆಸರು ಬಂದಿತು.

Leave A Reply

Your email address will not be published.