Anupama Gowda: ಇದ್ದಕ್ಕಿದ್ದಂತೆ ನಟಿ ಅನುಪಮಾ ಗೌಡ ಅವರು ನಟನೆ ಇಂದ ಹಿಂದುಳಿದ್ದೇಕೆ ಗೊತ್ತಾ?

Written by Pooja Siddaraj

Published on:

Anupama Gowda: ಅನುಪಮ ಗೌಡ, ಕನ್ನಡ ಕಿರುತೆರೆಯಲ್ಲಿ ಬಹಳ ಜನಪ್ರಿಯತೆ ಪಡೆದುಕೊಂಡಿರುವ ಹೆಸರು. ಅನುಪಮ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಕ್ಕ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಬಿಗ್ ಬಾಸ್ ಕನ್ನಡ ಸೀಸನ್ 5ರ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಅನುಪಮಾ ಗೌಡ ನಟನೆ ಇಂದ ದೂರ ಉಳಿದಿರೋದು ಯಾಕೆ ಗೊತ್ತಾ?

ನಟಿ ಅನುಪಮ ಅಕ್ಕ ಸೀರಿಯಲ್ ನಲ್ಲಿ ಅದ್ಭುತವಾಗಿ ಅಭಿನಯಿಸುತ್ತಿದ್ದರು. ಪಾಸಿಟಿವ್ ಮತ್ತು ನೆಗಟಿವ್ ಎರಡು ರೋಲ್ ಗಳಲ್ಲಿ ನಟಿಸುತ್ತಿದ್ದರು ಅನುಪಮಾ ಗೌಡ. ಡ್ಯುಯೆಲ್ ಪಾತ್ರದಲ್ಲಿ ಅನುಪಮಾ ಗೌಡ ಅವರ ಅಭಿನಯ ಅದ್ಭುತವಾಗಿ ಮೂಡಿಬಂದಿತ್ತು. ಅನುಪಮಾ ಅವರ ಪಾಸಿಟಿವ್ ಪಾತ್ರ ನೋಡಿ ಹೋಗಳುತ್ತಿದ್ದ ಜನ, ನೆಗಟಿವ್ ಪಾತ್ರ ನೋಡಿ ಬಯ್ಯುವ ವರೆಗೂ ಹೋಗಿದ್ದರು. ಎರಡು ಪಾತ್ರಗಳಿಂದ ಜನರ ಮನಸ್ಸಿಗೆ ಬಹಳ ಹತ್ತಿರವಾಗಿದ್ದರು ನಟಿ ಅನುಪಮಾ ಗೌಡ.

ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಅನುಪಮಾ ಗೌಡ ಸ್ಪರ್ಧಿಯಾಗಿ ಮನೆಯೊಳಗೆ ಬಂದ ನಂತರ ಅನುಪಮಾ ಗೌಡ ಅವರ ನಿಜ ಸ್ವಭಾವ ಜನರಿಗೆ ಗೊತ್ತಾಯಿತು. ಅನುಪಮಾ ಬಹಳ ಕಷ್ಟ ಪಟ್ಟು ಈ ಹಂತಕ್ಕೆ ಬಂದಿದ್ದಾರೆ, ಎನ್ನುವುದು ಜನರಿಗೆ ಗೊತ್ತಾಗುತ್ತಾ ಹೋಯಿತು. ಫಿನಾಲೆವರೆಗೂ ಬಂದಿದ್ದರು ಅನುಪಮಾ ಗೌಡ. ಬಿಗ್ ಬಾಸ್ ನಂತರ ಸಿನಿಮಾದಲ್ಲಿ ನಟಿಸಿ ಅವಾರ್ಡ್ ಸಹ ಪಡೆದುಕೊಂಡ ಅನುಪಮಾ, ಮಜಾಭಾರತ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದರು.

ಬಳಿಕ ರಾಜ ರಾಣಿ ಹಾಗೂ ನನ್ನಮ್ಮ ಸೂಪರ್ ಸ್ಟಾರ್ ಶೋ ನಿರೂಪಣೆ ಮಾಡಿದ್ದರು. ಈಗ ಕಲರ್ಸ್ ಇಂದ ಸುವರ್ಣ ವಾಹಿನಿಗೆ ಶಿಫ್ಟ್ ಆಗಿರುವ ಅನುಪಮಾ ಅವರು ಸುವರ್ಣ ಜ್ಯಾಕ್ ಪಾಟ್ ಶೋ ನಿರೂಪಣೆ ಮಾಡುತ್ತಿದ್ದಾರೆ. ಸಿನಿಮಾ, ಧಾರವಾಹಿ ಎಂದು ಬ್ಯುಸಿ ಇದ್ದ ಇವರು, ಇವುಗಳಿಂದ ದೂರ ಉಳಿಯುವುದಕ್ಕೆ ಕಾರಣ ಏನು ಎಂದು ತಿಳಿಸಿದ್ದು, ವಿಭಿನ್ನವಾಗಿ ಇರುವಂಥ ಅವರಿಗೆ ಇಷ್ಟ ಅಗುವಂಥ ಪಾತ್ರಗಳು ಬರುತ್ತಿಲ್ಲವಂತೆ, ಒಂದೇ ಥರದ ಪಾತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಳ್ಳಲು ಇಷ್ಟಪಡದ ಅನುಪಮಾ ಅವರು ನಟನೆ ಇಂದ ದೂರ ಉಳಿದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

Leave a Comment