Anupama Parameswaran: ನಟಿ ಅನುಪಮಾ ಪರಮೇಶ್ವರನ್ ಕೊರಳಲ್ಲಿ ತಾಳಿ! ಸೀಕ್ರೆಟ್ ಆಗಿ ಮದುವೆಯಾದ್ರ ಮಾಲಿವುಡ್ ಬ್ಯೂಟಿ?

0 15

Anupama Parameswaran: 2015ರಲ್ಲಿ ತೆರೆಕಂಡಿದ್ದ ಮಲಯಾಳಂ ಭಾಷೆಯ ಪ್ರೇಮಂ ಸಿನಿಮಾ ಎಷ್ಟರ ಮಟ್ಟಿಗೆ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ವೀಕ್ಷಕರ ಗಮನ ಸೆಳೆದಿತ್ತು ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಅನುಪಮಾ ಪರಮೇಶ್ವರನ್ ಅವರು ಒಂದೇ ಸಿನಿಮಾ ಇಂದ ದಕ್ಷಿಣ ಭಾರತ ಚಿತ್ರರಂಗದ ಕ್ರಶ್ ಆಗಿದ್ದರು ಎಂದರೆ ತಪ್ಪಲ್ಲ. ಅನುಪಮಾ ಅವರು ಮಲಯಾಳಂ ಮಾತ್ರವಲ್ಲದೆ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಕೂಡ ನಟಿಸಿದ್ದಾರೆ.

ಕನ್ನಡದಲ್ಲಿ ನಮ್ಮ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಡನೆ ನಟಿಸಿರುವುದು ವಿಶೇಷ. ನಟಸಾರ್ವಭೌಮ ಸಿನಿಮಾದಲ್ಲಿ ಅನುಪಮಾ ಅವರು ನಟಿಸಿದ್ದಾರೆ. ಇನ್ನು ತೆಲುಗಿನಲ್ಲಿ ಇವರಿಗೆ ಭಾರಿ ಬೇಡಿಕೆ ಇದೆ ಎಂದರೆ ತಪ್ಪಲ್ಲ. ಇದೀಗ ಅನುಪಮಾ ಅವರು ಸೈರನ್ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಟ ಜಯಂ ರವಿ ಅವರು ನಾಯಕ..

ಸಿನಿಮಾ ಅಪ್ಡೇಟ್ ಗಳ ಜೊತೆಗೆ ಅನುಪಮಾ ಅವರು ಫೋಟೋಶೂಟ್ ಗಳ ಮೂಲಕ ಕೂಡ ಸುದ್ದಿಯಾಗುತ್ತಾರೆ. ಇತ್ತೀಚೆಗೆ ಇವರು ಕೊರಳಲ್ಲಿ ತಾಳಿ ಇರುವ ಕೆಲವು ಫೋಟೋಸ್ ಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಇದನ್ನು ನೋಡಿದ ನೆಟ್ಟಿಗರು ಅರೆರೆ ಅನುಪಮಾ ಅವರು ಇದ್ದಕ್ಕಿದ್ದ ಹಾಗೆ ಮದುವೆಯಾಗಿದ್ದಾರಾ? ಗುಟ್ಟಾಗಿ ಮದುವೆ ಮಾಡಿಕೊಂಡಿದ್ದಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಆದರೆ ಅಸಲಿ ವಿಚಾರವೇ ಬೇರೆ ಆಗಿದ್ದು, ಅನುಪಮಾ ಅವರ ಸೈರನ್ ಸಿನಿಮಾದ ಲುಕ್ ಇದಾಗಿದೆ. ಸೈರನ್ ಸಿನಿಮಾದಲ್ಲಿ ಜಯಂ ರವಿ ಅವರೊಡನೆ ಮದುವೆ ಆಗುವ ದೃಷ್ಯದ ಸಮಯದ ಫೋಟೋಸ್ ಇದಾಗಿದ್ದು, ನೆಟ್ಟಿಗರು ಈ ವಿಷಯ ಗೊತ್ತಾದ ಮೇಲೆ ಸಮಾಧಾನಗೊಂಡಿದ್ದಾರೆ.

Leave A Reply

Your email address will not be published.