Anushka Sharma: ಅನುಷ್ಕಾ ಶರ್ಮ ಅವರ ಬೇಬಿ ಬಂಪ್ ವಿಡಿಯೋ ವೈರಲ್, ಎರಡನೇ ಮಗುವಿನ ನಿರೀಕ್ಷೆ ನಿಜವೇ?

0 15

Anushka Sharma: ಕ್ರಿಕೆಟರ್ ಗಳು ಸಿನಿಮಾ ಕಲಾವಿದರನ್ನು ಮದುವೆ ಆಗಿರುವುದು ಹೊಸ ವಿಚಾರ ಅಲ್ಲ. ಈ ಹಿಂದೆಯೇ ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ಮದುವೆಯಾಗಿದ್ದಾರೆ. ಅದೇ ಸಾಲಿಗೆ ಸೇರುವ ದಂಪತಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ. ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿದ ಈ ಜೋಡಿ, 2017ರಲ್ಲಿ ಇಟಲಿಯಲ್ಲಿ ತಮ್ಮ ಆತ್ಮೀಯ ಬಳಗದವರ ಸಮ್ಮುಖದಲ್ಲಿ ಮದುವೆಯಾದರು. ಈ ಜೋಡಿ ಇಂದು ಎಲ್ಲಾ ಅಭಿಮಾನಿಗಳ ಮೆಚ್ಚಿನ ಜೋಡಿ ಆಗಿದ್ದಾರೆ ಎಂದರೆ ತಪ್ಪಲ್ಲ.

ವಿರುಷ್ಕಾ ದಂಪತಿಗೆ ಪ್ರಪಂಚಾದ್ಯಂತ ಕೋಟಿಗಟ್ಟಲೇ ಅಭಿಮಾನಿಗಳಿದ್ದಾರೆ. ಈ ಜೋಡಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತದೆ. ಇದೀಗ ಈ ಜೋಡಿ ಬಗ್ಗೆ ಹೊಸದೊಂದು ಸುದ್ದಿ ಕೇಳಿಬಂದಿದ್ದು, ಅಭಿಮಾನಿಗಳು ಈ ಸುದ್ದಿ ನಿಜವಾಗಿರಲಿ ಆದಷ್ಟು ಬೇಗ ಈ ವಿಚಾರದ ಬಗ್ಗೆ ವಿರುಷ್ಕಾ ದಂಪತಿ ಅಧಿಕೃತವಾಗಿ ಮಾಹಿತಿ ನೀಡಲಿ ಎಂದು ಕಾಯುತ್ತಿದ್ದಾರೆ..

ವಿರಾಟ್ ಅನುಷ್ಕಾ ದಂಪತಿಗಳಿಗೆ 2021ರಲ್ಲಿ ಹೆಣ್ಣುಮಗು ಜನಿಸಿತು. ತಮ್ಮ ಮುದ್ದು ಮಗಳಿಗೆ ವಮಿಕಾ ಎಂದು ಹೆಸರಿಟ್ಟಿದ್ದಾರೆ ಈ ಜೋಡಿ. ಇವರಿಬ್ಬರು ಕೂಡ ಇದುವರೆಗೂ ತಮ್ಮ ಮಗುವಿನ ಮುಖವನ್ನು ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿಲ್ಲ. ಮಗುವಿನ ವಿಚಾರದಲ್ಲಿ ತಮಗೆ ಪ್ರೈವೆಸಿ ನೀಡಬೇಕು ಎಂದು ಮಾಧ್ಯಮದವರನ್ನು ಕೂಡ ಕೇಳಿಕೊಂಡಿದ್ದಾರೆ. ಮಗುವಿಗೆ 2 ವರ್ಷ ತುಂಬಿದ್ದರು ಈಗಲೂ ಅದೇ ಮಾತನ್ನು ಪಾಲಿಸಿಕೊಂಡು ಬರುತ್ತಿದ್ದಾರೆ..

ಇದೀಗ ಈ ಜೋಡಿ ಬಗ್ಗೆ ಕೇಳಿಬರುತ್ತಿರುವ ಹೊಸ ವಿಚಾರ ಏನು ಎಂದರೆ, ವಿರುಷ್ಕಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯ ಮೂಲಕ ತಿಳಿದುಬಂದಿದೆ. ಅನುಷ್ಕಾ ಅವರಿಗೆ ಈಗ 35 ವರ್ಷ, ಇದೀಗ ಇವರು ಎರಡನೇ ಮಗುವಿಗೆ ಗರ್ಭಿಣಿ ಆಗಿದ್ದಾರೆ, ಇದೇ ಕಾರಣಕ್ಕೆ ಅನುಷ್ಕಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ, ವಿರಾಟ್ ಅವರ ಜೊತೆಗೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಆದರೆ ಅನುಷ್ಕಾ ಅವರು ನಿನ್ನೆ ನಡೆದ ಇಂಡಿಯಾ ವರ್ಸಸ್ ಪಾಕಿಸ್ತಾನ್ ಮ್ಯಾಚ್ ನೋಡಿ, ಭಾರತ ತಂಡಕ್ಕೆ ಸಪೋರ್ಟ್ ಮಾಡಲು ಬಂದಿದ್ದರು ಮ್ಯಾಚ್ ಮುಗಿದ ನಂತರ ಅನುಷ್ಕಾ ಅವರು ವಿರಾಟ್ ಅವರೊಡನೆ ಇರುವ ವಿಡಿಯೋ ವೈರಲ್ ಆಗುತ್ತಿದೆ. ಇದನ್ನು ನೋಡಿದರೆ ಅನುಷ್ಕಾ ಅವರು ಬೇಬಿ ಬಂಪ್ ಹೈಡ್ ಮಾಡಿತ್ತಿರುವ ಹಾಗೆ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ದಂಪತಿಗಳು ಅಧಿಕೃತವಾಗಿ ಈ ಬಗ್ಗೆ ಮಾಹಿತಿ ನೀಡುತ್ತಾರೆ ಎಂದು ಹೇಳಲಾಗುತ್ತಿದೆ.

Leave A Reply

Your email address will not be published.