Anushka Shetty: ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ?

0 23

Anushka Shetty: ಅನುಷ್ಕಾ ಶೆಟ್ಟಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ತಮ್ಮ ಅಭಿನಯದಿಂದಲೇ ಅದೆಷ್ಟೋ ಜನರ ಮನಸ್ಸನ್ನು ಕದ್ದಿದ್ದಾರೆ. ಇವರು ಕರ್ನಾಟಕದಲ್ಲಿ ಹುಟ್ಟಿ ದೇಶ ವಿದೇಶಗಲ್ಲಿ ಮಿಂಚುತ್ತಿದ್ದಾರೆ. ಅಲ್ಲದೆ ಪರ ಬಾಷೆಗಳಲ್ಲಿ ನಟಿಸಿ ಸಾಕಷ್ಟು ಅಭಿಮಾನಿಗಳನ್ನ ಗಳಿಸಿದ ನಟಿಯರಲ್ಲಿ ಇವರು ಒಬ್ಬರು. ಇವರ ಮೊದಲ ಹೆಸರು ಸ್ವೀಟಿ ಶೆಟ್ಟಿ ಇವರು ಮಂಗಳೂರಿನ ತುಳು ಮನೆತನದಲ್ಲಿ ಜನಿಸಿದವರು.

ಅನುಷ್ಕಾ ಅವರು ಬೆಂಗಳೂರಿನಲ್ಲಿ ಪದವಿ ಜೊತೆಗೆ ಯೋಗ ಸಹ ಮಾಡುತ್ತಿದ್ದರು, ಮತ್ತು ವಿದ್ಯಾರ್ಥಿಗಳಿಗೂ ಕೂಡ ತರಬೇತಿಯನ್ನು ನೀಡುತ್ತಿದ್ದರು.ನಂತರ ಇವರು ತುಳು ಬಾಷೆಯಲ್ಲಿ ನಟಿಸುವ ಮೂಲಕ ಸಿನಿಮಾ ರಂಗಕ್ಕೆ ಧುಮುಕಿದರು. ಹೆಚ್ಚಿನ ಮಹತ್ವವನ್ನು ಯೋಗಕ್ಕೆ ನೀಡುತ್ತಿದ್ದ ಅನುಷ್ಕಾ ಸುಂದರ ಮತ್ತು ಪ್ರಭುತ್ವತೆಯ ಮಾತುಗಾರಿಕೆಯಲ್ಲಿ ಉತ್ತಮವಾಗಿದ್ದರು. ಇವರ ಮೊದಲ ಚಿತ್ರ ಸೂಪರ್ ಈ ಚಿತ್ರದಲ್ಲಿ ನಟಿಸಿದ ಇವರಿಗೆ ಪ್ರಶಸ್ತಿ ಕೂಡ ದೊರೆಕಿತು.

ಆದರೆ ಆ ಸಿನಿಮಾ ಅಷ್ಟಾಗಿ ಹಿಟ್ ಆಗಲಿಲ್ಲ ನಂತರ ತೆರೆ ಮೇಲೆ ಬಂದ ಮಹಾನಂದಿ ಚಿತ್ರ ಕೂಡ ಅಷ್ಟಾಗಿ ಹೆಸರು ಗಳಿಸಲಿಲ್ಲ. ನಂತರ ಸಿನಿಮಾ ರಂಗದಿಂದ ಹಿಂದೆ ಸರಿಯಲು ನಿರ್ಧರಿಸಿದ ಅನುಷ್ಕಾರಿಗೆ ಅದೃಷ್ಟ ಹುಡುಕಿಕೊಂಡು ಬಂದಿತು. ರಾಜಮೌಳಿ ನಿರ್ದೇಶನದ ವಿಕ್ರಮಾರ್ಕುಡು ಚಿತ್ರ ಅಂದುಕೊಂಡಕ್ಕಿಂತ ಜಾಸ್ತಿ ಯಶಸ್ವಿ ಪಡೆಯಿತು. ನಂತರ ಅವರು ನಟಿಸಿದ ಎಲ್ಲಾ ಚಿತ್ರಗಳಲ್ಲಿ ಅನುಷ್ಕಾ ಸೂಪರ್ ಹಿಟ್ ನಟಿಯಾಗಿ ಹೊರಬಂದರು.

ಇವರು ನಟಿಸಿರುವ ಅರುಂಧತಿ ಚಿತ್ರದಲ್ಲಿ ಇವರ ನಟನೆಯಿಂದ ಇಂದಿಗೂ ಜನರ ಮನದಲ್ಲಿ ಛಾಪು ಮೂಡಿಸಿದ್ದಾರೆ. ಅರುಂಧತಿ ಬಳಿಕ ಸ್ಟಾರ್ ಹೀರೋಯಿನ್ ಆದ ಅನುಷ್ಕಾ, ಅತಿಹೆಚ್ಚು ಬೇಡಿಕೆ ಹಾಗೂ ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಕೂಡ ಹೌದು, ಮೊದಲಿಗೆ ಸಾವಿರಗಟ್ಟೆಲೇ ಸಂಭಾವನೆ ಪಡೆಯುತ್ತಿದ್ದ ಅನುಷ್ಕಾ ಇಂದು ಒಂದು ಸಿನಿಮಾಗೆ 12 ಕೋಟಿ ವರೆಗು ಸಂಭಾವನೆ ಪಡೆಯುತ್ತಾರೆ. ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ ಸಿನಿಮಾಗೆ 8 ಕೋಟಿ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ..

ಅನುಷ್ಕಾ ಶೆಟ್ಟಿ ಅವರ ಆಸ್ತಿ ವಿಚಾರಕ್ಕೆ ಬಂದರೆ, ಹೈದರಾಬಾದ್ ನಲ್ಲಿ ಇವರ ಐಶಾರಾಮಿ ಮನೆ ಇದೆ. ಅಷ್ಟೇ ಅಲ್ಲದೇ ಇನ್ನಷ್ಟು ಆಸ್ತಿ ಗಳು ಇದೆ. ಅದೆಲ್ಲವನ್ನು ಸೇರಿಸಿ ಅನುಷ್ಕಾ ಅವರ ಒಟ್ಟು ಆಸ್ತಿ 130 ಕೋಟಿ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಇವರು ಹೆಚ್ಚು ಸಿನಿಮಾಗಳಲ್ಲಿ ನಟಿಸಲಿ ಎನ್ನೋದು ಇವರ ಅಭಿಮಾನಿಗಳ ಆಸೆ ಆಗಿದೆ.

Leave A Reply

Your email address will not be published.