Aradhana Ramu: ಕಾಟೇರಾ ಸಿನಿಮಾ ಬೆಡಗಿ ಆರಾಧನಾ ರಾಮ್ ಅವರ ವಯಸ್ಸು ಎಷ್ಟು ಗೊತ್ತಾ?

0 34

Aradhana Ramu: ಡಿಬಾಸ್ ಅವರು ಹೀರೋ ಆಗಿ ನಟಿಸಿ, ಕನ್ನಡದ ಹಿರಿಯನಟಿ ಮಾಲಾಶ್ರೀ ಅವರ ಮಗಳು ಆರಾಧನಾ ಹೀರೋಯಿನ್ ಆಗಿ ನಟಿಸಿ ತರುಣ್ ಸುಧೀರ್ ಅವರು ನಿರ್ದೇಶನ ಮಾಡಿರುವ ಕಾಟೇರಾ ಸಿನಿಮಾ ಇಂದು ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ದರ್ಶನ್ ಅವರಿಗೆ ನಾಯಕಿಯಾಗಿ ನಟಿಸಿರುವ ಆರಾಧನಾ ಅವರ ವಯಸ್ಸು ಎಷ್ಟು ಗೊತ್ತಾ?

ನಟಿ ಮಾಲಾಶ್ರೀ ಹಾಗೂ ನಿರ್ಮಾಪಕ ರಾಮು ಅವರ ಮಗಳು ಆರಾಧನಾ. ಇವರು ಮುಂಬೈ ನಲ್ಲಿ ಆಕ್ಟಿಂಗ್ ಕೋರ್ಸ್ ಮಾಡಿಕೊಂಡು ಬಂದಿದ್ದಾರೆ. ಮೊದಲ ಸಿನಿಮಾದಲ್ಲೇ ರಾಕ್ ಲೈನ್ ಪ್ರೊಡಕ್ಷನ್ಸ್ ಅಂಥ ದೊಡ್ಡ ಸಂಸ್ಥೆ, ದರ್ಶನ್ ಅವರಂತ ದೊಡ್ಡ ಹೀರೋ, ತರುಣ್ ಸುಧೀರ್ ಅವರಂಥ ಅದ್ಬುತ ಡೈರೆಕ್ಟರ್ ಜೊತೆಗೆ ಕೆಲಸ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ ಆರಾಧನಾ ರಾಮ್.

ಕಾಟೇರಾ ಸಿನಿಮಾದ ಹಾಡುಗಳು ಹಾಗೂ ಟ್ರೈಲರ್ ಮೂಲಕ ಆರಾಧನಾ ಅವರನ್ನು ಜನರು ಮೆಚ್ಚಿಕೊಂಡಿದ್ದರು, ಇದೀಗ ಸಿನಿಮಾ ನೋಡಿ ಪ್ರಭಾ ಪಾತ್ರವನ್ನು ಇನ್ನಷ್ಟು ಇಷ್ಟಪಟ್ಟಿದ್ದಾರೆ. ಡ್ಯಾನ್ಸ್ ನಲ್ಲಿ ಹಾಗು ಸೌಂದರ್ಯದಲ್ಲಿ ತಾಯಿಯನ್ನೇ ಮೀರಿಸುವ ಹಾಗಿದ್ದಾರೆ ಎಂದು ಕೂಡ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಇವರ ಅಭಿನಯ ಕೂಡ ಅಷ್ಟೇ ಚೆನ್ನಾಗಿ ಮೂಡಿಬಂದಿದೆ ಎನ್ನುವ ಮಾತುಗಳು ಕೂಡ ಕೇಳಿಬಂದಿದೆ.

ಆರಾಧನಾ ಅವರಿಗೆ ಮುಂದಿನ ದಿನಗಳಲ್ಲಿ ಬೇರೆ ಭಾಷೆಗಳಿಂದ ಕೂಡ ಅವಕಾಶಗಳು ಬರುವುದು ಪಕ್ಕ ಎಂದು ಹೇಳಲಾಗುತ್ತಿದೆ. ಇದೀಗ ಇವರ ವಯಸ್ಸು ಎಷ್ಟು ಎನ್ನುವ ಚರ್ಚೆ ಶುರುವಾಗಿದ್ದು, ಆರಾಧನಾ ಅವರು ಹುಟ್ಟಿದ್ದು 2002ರಲ್ಲಿ, ಈಗ ಇವರಿಗೆ 22 ವರ್ಷ ವಯಸ್ಸು. ಚಿಕ್ಕ ವಯಸ್ಸಿಗೆ ಇಷ್ಟು ಒಳ್ಳೆಯ ಅವಕಾಶ ಸಿಕ್ಕಿದ್ದು, ಅದ್ಭುತವಾದ ಲಾಂಚ್ ಪಡೆದುಕೊಂಡಿದ್ದಾರೆ ಆರಾಧನಾ.

Leave A Reply

Your email address will not be published.