Aradhana Ramu: ಕಾಟೇರಾ ಚೆಲುವೆಯ ಹೊಸ ಫೋಟೋಶೂಟ್! ವಾವ್ ಎಂದ ನೆಟ್ಟಿಗರು

Written by Pooja Siddaraj

Published on:

Aradhana Ramu: ಡಿಬಾಸ್ ಅವರು ಹೀರೋ ಆಗಿ ನಟಿಸಿ, ಕನ್ನಡದ ಹಿರಿಯನಟಿ ಮಾಲಾಶ್ರೀ ಅವರ ಮಗಳು ಆರಾಧನಾ ಹೀರೋಯಿನ್ ಆಗಿ ನಟಿಸಿ ತರುಣ್ ಸುಧೀರ್ ಅವರು ನಿರ್ದೇಶನ ಮಾಡಿರುವ ಕಾಟೇರಾ ಸಿನಿಮಾ ಇಂದು ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ದರ್ಶನ್ ಅವರಿಗೆ ನಾಯಕಿಯಾಗಿ ನಟಿಸಿರುವ ಆರಾಧನಾ ಅವರು ಫೋಟೋಶೂಟ್ ನಲ್ಲಿ ಮಿಂಚಿದ್ದಾರೆ.

ನಟಿ ಮಾಲಾಶ್ರೀ ಹಾಗೂ ನಿರ್ಮಾಪಕ ರಾಮು ಅವರ ಮಗಳು ಆರಾಧನಾ. ಇವರು ಮುಂಬೈ ನಲ್ಲಿ ಆಕ್ಟಿಂಗ್ ಕೋರ್ಸ್ ಮಾಡಿಕೊಂಡು ಬಂದಿದ್ದಾರೆ. ಮೊದಲ ಸಿನಿಮಾದಲ್ಲೇ ರಾಕ್ ಲೈನ್ ಪ್ರೊಡಕ್ಷನ್ಸ್ ಅಂಥ ದೊಡ್ಡ ಸಂಸ್ಥೆ, ದರ್ಶನ್ ಅವರಂತ ದೊಡ್ಡ ಹೀರೋ, ತರುಣ್ ಸುಧೀರ್ ಅವರಂಥ ಅದ್ಬುತ ಡೈರೆಕ್ಟರ್ ಜೊತೆಗೆ ಕೆಲಸ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ ಆರಾಧನಾ ರಾಮ್.

ಕಾಟೇರಾ ಸಿನಿಮಾದ ಹಾಡುಗಳು ಹಾಗೂ ಟ್ರೈಲರ್ ಮೂಲಕ ಆರಾಧನಾ ಅವರನ್ನು ಜನರು ಮೆಚ್ಚಿಕೊಂಡಿದ್ದರು, ಇದೀಗ ಸಿನಿಮಾ ನೋಡಿ ಪ್ರಭಾ ಪಾತ್ರವನ್ನು ಇನ್ನಷ್ಟು ಇಷ್ಟಪಟ್ಟಿದ್ದಾರೆ. ಡ್ಯಾನ್ಸ್ ನಲ್ಲಿ ಹಾಗು ಸೌಂದರ್ಯದಲ್ಲಿ ತಾಯಿಯನ್ನೇ ಮೀರಿಸುವ ಹಾಗಿದ್ದಾರೆ ಎಂದು ಕೂಡ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಇವರ ಅಭಿನಯ ಕೂಡ ಅಷ್ಟೇ ಚೆನ್ನಾಗಿ ಮೂಡಿಬಂದಿದೆ ಎನ್ನುವ ಮಾತುಗಳು ಕೂಡ ಕೇಳಿಬಂದಿದೆ.

ಆರಾಧನಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್, ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಇವರು ಸೀರೆ ಧರಿಸಿ ಫೋಟೋಶೂಟ್ ಮಾಡಿಸಿದ್ದು ಅವುಗಳು ವೈರಲ್ ಆಗಿವೆ. ಅಭಿಮಾನಿಗಳು ಬಹಳ ಸುಂದರವಾಗಿ, ನಿಮ್ಮ ಅಮ್ಮನ ಹಾಗೆ ಕಾಣುತ್ತಿದ್ದೀರಾ ಎಂದಿದ್ದಾರೆ.

Leave a Comment