Aradhana Ramu: ಡಿಬಾಸ್ ಅವರೊಡನೆ ಕಾಟೇರಾ ಸಿನಿಮಾದಲ್ಲಿ ನಟಿಸಲು ಆರಾಧನಾ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ?

0 1

Aradhana Ramu: ಡಿಬಾಸ್ ಅವರು ಹೀರೋ ಆಗಿ ನಟಿಸಿ, ಕನ್ನಡದ ಹಿರಿಯನಟಿ ಮಾಲಾಶ್ರೀ ಅವರ ಮಗಳು ಆರಾಧನಾ ಹೀರೋಯಿನ್ ಆಗಿ ನಟಿಸಿ ತರುಣ್ ಸುಧೀರ್ ಅವರು ನಿರ್ದೇಶನ ಮಾಡಿರುವ ಕಾಟೇರಾ ಸಿನಿಮಾ ಇದೇ ತಿಂಗಳು 29ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ದರ್ಶನ್ ಅವರಿಗೆ ನಾಯಕಿಯಾಗಿ ನಟಿಸಲು ಆರಾಧನಾ ಅವರು ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ?

ನಟಿ ಮಾಲಾಶ್ರೀ ಹಾಗೂ ನಿರ್ಮಾಪಕ ರಾಮು ಅವರ ಮಗಳು ಆರಾಧನಾ. ಇವರು ಮುಂಬೈ ನಲ್ಲಿ ಆಕ್ಟಿಂಗ್ ಕೋರ್ಸ್ ಮಾಡಿಕೊಂಡು ಬಂದಿದ್ದಾರೆ. ಮೊದಲ ಸಿನಿಮಾದಲ್ಲೇ ರಾಕ್ ಲೈನ್ ಪ್ರೊಡಕ್ಷನ್ಸ್ ಅಂಥ ದೊಡ್ಡ ಸಂಸ್ಥೆ, ದರ್ಶನ್ ಅವರಂತ ದೊಡ್ಡ ಹೀರೋ, ತರುಣ್ ಸುಧೀರ್ ಅವರಂಥ ಅದ್ಬುತ ಡೈರೆಕ್ಟರ್ ಜೊತೆಗೆ ಕೆಲಸ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ ಆರಾಧನಾ ರಾಮ್.

ಈಗಾಗಲೇ ಕಾಟೇರಾ ಸಿನಿಮಾದ ಒಂದು ಹಾಡು, ಹಾಗೂ ಟ್ರೈಲರ್ ಮೂಲಕ ಆರಾಧನಾ ಅವರನ್ನು ಜನರು ಮೆಚ್ಚಿಕೊಂಡಿದ್ದಾರೆ. ಡ್ಯಾನ್ಸ್ ನಲ್ಲಿ ಹಾಗು ಸೌಂದರ್ಯದಲ್ಲಿ ತಾಯಿಯನ್ನೇ ಮೀರಿಸುವ ಹಾಗಿದ್ದಾರೆ ಎಂದು ಕೂಡ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಇವರ ಅಭಿನಯ ಕೂಡ ಅಷ್ಟೇ ಚೆನ್ನಾಗಿ ಮೂಡಿಬಂದಿದೆ ಎನ್ನುವ ಮಾತುಗಳು ಕೂಡ ಈಗಾಗಲೇ ಕೇಳಿ ಬರುತ್ತಿದೆ..

ಜೊತೆಗೆ ಆರಾಧನಾ ಅವರು ಈ ಸಿನಿಮಾಗೆ ಪಡೆದಿರುವ ಸಂಭಾವನೆ ಎಷ್ಟು ಎನ್ನುವ ಚರ್ಚೆ ಕೂಡ ಶುರುವಾಗಿದ್ದು, ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಆರಾಧನಾ ಅವರು ಕಾಟೇರಾ ಸಿನಿಮಾದಲ್ಲಿ ನಟಿಸಲು 10 ಲಕ್ಷ ಸಂಭಾವನೆ ಪಡೆದಿದ್ದಾರಂತೆ.

Leave A Reply

Your email address will not be published.