Latest Breaking News

ಕಡು ಬಡತನ,ಲಾರಿ ಚಾಲಕನ ಮಗ ಕ್ರಿಕೆಟ್ ನ ಪ್ರತಿಭೆ ಸಕಾರಿಯಾಗೆ ನೆರವಾಗಿದ್ದು ಆರ್ ಸಿ ಬಿ!! ಹೇಗೆ ಓದಿ

0 3

Get real time updates directly on you device, subscribe now.

ಕ್ರಿಕೆಟ್ ಆಟದಲ್ಲಿ ದೊಡ್ಡ ಜನಪ್ರಿಯತೆ ಪಡೆದಿರುವ ಆಟಗಾರರಾದ ಕ್ರಿಸ್ ಗೇಲ್, ಬ್ಯಾಟ್ಸ್ ಮನ್ ರಾಹುಲ್, ದೀಪಕ್ ಹೂಡಾ ರಂತಹವರ ಬ್ಯಾಟಿಂಗ್ ನ ಜೋರಿಗೆ ರಾಜಸ್ಥಾನ್ ರಾಯಲ್ಸ್ ನ ಆಟಗಾರರು ದಿಕ್ಕೆಟ್ಟಿದ್ದರು. ಆಗ ಅದೇ ತಂಡದಲ್ಲಿದ್ದ ಜನರಿಗೆ ಹೆಚ್ಚು ತಿಳಿಯದೇ ಇದ್ದ, ದೊಡ್ಡ ಜನಪ್ರಿಯತೆ ಕೂಡಾ ಇಲ್ಲದ ಸಕಾರಿಯಾ ಇಂತಹ ಸ್ಟಾರ್ ಬ್ಯಾಟ್ಸ್ ಮನ್ ಗಳನ್ನು ಚಳ್ಳೆ ಹಣ್ಣು ತಿನ್ನಿಸುವಲ್ಲಿ ಯಶಸ್ವಿಯಾಗಿದ್ದು ಮಾತ್ರವೇ ಅಲ್ಲದೇ ಮೂರು ವಿಕೆಟ್ ಗಳನ್ನು ಕೂಡಾ ಪಡೆದು ಅಚ್ಚರಿ ಯನ್ನು ಮೂಡಿಸಿದ್ದರು.

ಐಪಿಎಲ್ ಕ್ರಿಕೆಟ್ ನಲ್ಲಿ ಆಡಲು ಬಯಸುವ ಅಸಂಖ್ಯಾತ ಯುವಕರಲ್ಲಿ ಚೇತನ್ ಸಕಾರಿಯಾ ಕೂಡಾ ಒಬ್ಬರು. ಹಾಗೆ ಸಿಕ್ಕ ಅವಕಾಶವನ್ನು ಅತ್ಯುತ್ತಮವಾಗಿ ಬಳಕೆ ಮಾಡಿಕೊಂಡು, ನಿನ್ನೆಯ ಪಂದ್ಯದಲ್ಲಿ ಸಕಾರಿಯಾ ಪ್ರದರ್ಶನ ನೋಡಿ ರಾಜಸ್ಥಾನ್ ರಾಯಲ್ಸ್ ನ ಅಭಿಮಾನಿಗಳು ಹಾಗೂ ನಿರ್ದೇಶಕ ಕುಮಾರ್ ಸಂಗಕ್ಕಾರ ಅವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸಕಾರಿಯಾ ಜೀವನದಲ್ಲಿ ಕಷ್ಟಗಳನ್ನು ಎದುರಿಸಿ ಬಂದಿರುವ ಆಟಗಾರ. ಇವರು ಟಿ ಟ್ವೆಂಟಿ ಆಡುವ ವೇಳೆಯಲ್ಲಿ ತಮ್ಮನನ್ನು ಕಳೆದುಕೊಂಡರು. ಆದರೆ ಲಾರಿ ಡ್ರೈವರ್ ಆದ ಇವರ ತಂದೆ ಮಗನ ಕ್ರಿಕೆಟ್ ಭವಿಷ್ಯ ಕ್ಕೆ ತೊಂದರೆಯಾಗಬಾರದು ಎಂದು ಎರಡನೇ ಮಗನ ಸಾವಿನ ಸುದ್ದಿಯನ್ನು ಹತ್ತು ದಿನಗಳ ಕಾಲ ಹಿರಿಯ ಮಗನಿಗೆ ತಿಳಿಸದೇ ಇದ್ದರು. ಮನೆಯಲ್ಲಿ ಬಡತನವಿದ್ದರೂ ತನ್ನ ಶ್ರಮ ಹಾಗೂ ಪ್ರತಿಭೆಯಿಂದಾಗಿ ಕ್ರಿಕೆಟ್ ನಲ್ಲಿ ಕೌಶಲ್ಯ ಪಡೆದಿದ್ದ ಸಕಾರಿಯಾ ಕ್ರಿಕೆಟ್ ನಲ್ಲಿ ದೊಡ್ಡ ಹೆಸರು ಮಾಡಬೇಕೆಂಬ ಆಸೆಯಿಂದ ಆತನ ತಂದೆ ತಾಯಿ ಮಗನಿಂದ ಆತನ ತಮ್ಮ ಎಲ್ಲರನ್ನೂ ಅಗಲಿದ ವಿಷಯವನ್ನು ಮುಚ್ಚಿಟ್ಟಿದ್ದರು.

ಆದರೆ ವಿಷಯ ತಿಳಿದಾಗ ಚೇತನ್ ಮಾನಸಿಕವಾಗಿ ಕುಗ್ಗಿ ಹೋಗಿದ್ದು ಮಾತ್ರವೇ ಅಲ್ಲದೇ ಕೆಲವು ದಿನಗಳ ಕಾಲ ಒಂಟಿಯಾಗಿ ಇದ್ದರೆಂದು ಅವರ ತಾಯಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದೆಲ್ಲವುಗಳ ನಂತರ ಐಪಿಎಲ್ ನಲ್ಲಿ ದೊಡ್ಡ ಮೊತ್ತಕ್ಕೆ ಸಕಾರಿಯ ಒಪ್ಪಂದ ಮಾಡಿಕೊಂಡರು. ಸಕಾರಿಯ ತಮ್ಮ ಮೊದಲ ಪಂದ್ಯದಲ್ಲೇ ತನ್ನ ಸಾಮರ್ಥ್ಯವನ್ನು ಪ್ರದರ್ಶನವನ್ನು ಮಾಡಿದ್ದಾರೆ. 2019-20 ಮುಷ್ತಾಕ್ ಅಲಿ ಟಿ 20 ವೇಳೆ ಜಾರ್ಖಂಡ್ ವಿರುದ್ಧ ಆಡುತ್ತಿದ್ದ ವೇಳೆ ಆರ್​ಸಿಬಿ ಸ್ಕೌಟ್ಸ್​ ಅವರ ಪ್ರದರ್ಶನದಿಂದ ಆಕರ್ಷಿತರಾಗಿ ಟ್ರಯಲ್ಸ್​ಗೆ ಕರೆದಿದ್ದರು, ಅದಾದ ನಂತರ ಟ್ರಯಲ್ಸ್​ನಲ್ಲಿ ಮೈಕ್​ ಹಸನ್​ ಕೂಡ ಸಕಾರಿಯಾ ಅವರನ್ನು ಮೆಚ್ಚಿಕೊಂಡರು.

ಪಂದ್ಯದ ಸನ್ನಿವೇಶಗಳಲ್ಲಿ ಬೌಲಿಂಗ್ ಮಾಡುವ ಪರೀಕ್ಷೆ ಇಟ್ಟಾಗಲೂ ಅದನ್ನು ಯಶಸ್ವಿಯಾಗಿ ಮಾಡಿದ್ದರು. ಆದರೆ ಅನಂತರ ಲಾಕ್ ಡೌನ್ ಹೇರಲಾಗಿತ್ತು. ಆಗಲೂ ಕೂಡಾ ಮೈಕ್ ಹಸನ್ ಅವರು ಸಂಪರ್ಕದಲ್ಲಿದ್ದರು ಎನ್ನಲಾಗಿದೆ. 2020 ರಲ್ಲಿ ಐಪಿಎಲ್ ಗಾಗಿ ತಂಡದೊಂದಿಗೆ ಬೌಲರ್ ಆಗಿ ಯುಎಇಗೆ ಹೋದರು. ಆಗ ಅವರಿಗೆ ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್​ ಮತ್ತು ಉಮೇಶ್ ಯಾದವ್​ ನೆಟ್ಸ್​ನಲ್ಲಿದ್ದ ವೇಳೆ ಸಾಕಷ್ಟು ಸಲಹೆ ನೀಡಿದ್ದರು. ಆರ್ ಸಿ ಬಿ ಯಲ್ಲಿ ನೆಟ್ ಬೌಲರ್ ಆಗಿ ಕೆಲಸ ಮಾಡಿದ್ದ ಅವರನ್ನು ನಂತರ ರಾಜಸ್ಥಾನ್ ರಾಯಲ್ಸ್ ನ ಟ್ರಯಲ್ ಗೆ ಕರೆಯಲಾಯಿತು.

ಅಲ್ಲಿ ಅವರ ಬೌಲಿಂಗ್ ಮತ್ತು ವಿಭಿನ್ನ ವೇರಿಯೇಶನ್ಸ್ ಅನ್ನು ಇಷ್ಟಪಟ್ಟರು. ನಂತರ ಸಯ್ಯದ್ ಮುಷ್ತಾಕ್ ಅಲಿಯಲ್ಲಿ ನೀಡಿದ ಪ್ರದರ್ಶನ ದೊಡ್ಡ ಮೊತ್ತದ ಒಪ್ಪಂದಕ್ಕೆ ಪೂರಕವಾಯಿತು ಎಂದು ಹೇಳಿದ್ದಾರೆ. ಫೆಬ್ರವರಿ 19 ರಂದು ಅವರನ್ನು ಐಪಿಎಲ್ ನ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ 1.2 ಕೋಟಿ ರೂಪಾಯಿಗಳನ್ನು ನೀಡಿ ಖರೀದಿ ಮಾಡಿತು.

ಲಾರಿ ಚಾಲಕನ ಮಗನಾಗಿ ಬಾಲ್ಯದಲ್ಲಿ ಕಷ್ಟದ ದಿನಗಳನ್ನು ನೋಡಿದ, ಕ್ರಿಕೆಟ್ ಆಟಕ್ಕೆ ಅಗತ್ಯವಿರುವ ಖರೀದಿ ಮಾಡಲಾಗದೇ ತಾನು ಕೂಡಾ ಸ್ಟೇಷನರಿ ಅಂಗಡಿಯಲ್ಲಿ ಕೆಲಸವನ್ನು ಮಾಡುತ್ತಿದ್ದ ಸಕಾರಿಯ ಅವರ ಶ್ರಮ ಹಾಗೂ ಪ್ರತಿಭೆಗೆ ಇಂದು ತಕ್ಕ ಗೌರವ ಸಂದಿದೆ ಹಾಗೂ ಸೂಕ್ತ ಪ್ರತಿಫಲವು ಅವರನ್ನು ಅರಸಿ ಬಂದಿದೆ.

Get real time updates directly on you device, subscribe now.

Leave a comment