ಆರೋಗ್ಯಕ್ಕೆ ಒಳ್ಳೆಯದು ಮಾಡುವ ಉಳ್ಳಾಗಡ್ಡಿ!ದಿನಕ್ಕೊಂದು ಈರುಳ್ಳಿ ತಿನ್ನುವುದರಿಂದ ಆಗುವ ಲಾಭಗಳು!

Health & Fitness

ಈರುಳ್ಳಿ ಅಥವಾ ಉಳ್ಳಾಗಡ್ಡಿ

ಈರುಳ್ಳಿಯು ಹೆಚ್ಚು ಆರೋಗ್ಯಕಾರಿ ಅಂಶ ಗುಣಗಳನ್ನು ಹೊಂದಿರುವ ಆಹಾರ ವಸ್ತುವಾಗಿದೆ.ಇದನ್ನು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಔಷಧೀಯ ರೂಪದಲ್ಲಿ ಬಳಸಬಹುದಾಗಿದೆ.ಕ್ಯಾನ್ಸರ್ , ಹೃದಯ ಸಂಬಂಧಿ ಕಾಯಿಲೆಗಳು , ಮಧುಮೇಹ , ಅಸ್ತಮಾ , ಕೆಮ್ಮು ಸೇರಿದಂತೆ ವಿವಿಧ ರೀತಿಯಾದ ಸಮಸ್ಯೆಗಳಿಗೆ ಔಷಧಿಯಾಗಿ ಈರುಳ್ಳಿಯನ್ನು ಬಳಸಲಾಗುತ್ತದೆ.

ನಿಸರ್ಗದಲ್ಲಿ ದೊರೆತಿರುವ ಅತ್ಯಮೂಲ್ಯವಾದ ಔಷಧೀಯ ಗುಣಗಳನ್ನು ಹೊಂದಿರುವ ಆಹಾರ ಪದಾರ್ಥದಲ್ಲಿ ಈರುಳ್ಳಿ ಕೂಡ ಒಂದಾಗಿದೆ.ಇದನ್ನು ಸುಮಾರು 7 ಸಾವಿರ ವರ್ಷಗಳಿಂದಲೂ ಕೂಡ ಮನುಷ್ಯ ಆಹಾರವಾಗಿ ಬಳಸುತ್ತಾ ಬಂದಿದ್ದಾನೆ.ಏಷ್ಯಾದ ಅನೇಕ ಭಾಗಗಳಲ್ಲಿ ಈರುಳ್ಳಿಯನ್ನು ಬೆಳೆಯಲಾಗುತ್ತದೆ.

ಅಷ್ಟೇ ಅಲ್ಲದೆ ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚು ಈರುಳ್ಳಿಯನ್ನು ಬೆಳೆಯುವ ಬೆಳೆದು ಲಾಭವನ್ನು ಪಡೆದಿರುವ ರೈತರು ಸಹ ಇದ್ದಾರೆ.ಹಾಗೂ ಕರ್ನಾಟಕದಲ್ಲಿ ಈರುಳ್ಳಿಯನ್ನು ಅತಿ ಹೆಚ್ಚಾಗಿ ಅಡುಗೆಗಳಲ್ಲಿ ಬಳಸಲಾಗುತ್ತದೆ.ಆದರೆ ಈರುಳ್ಳಿ ಸೇವನೆಯಿಂದ ನಮ್ಮ ದೇಹಕ್ಕೆ ಸಿಗುವ ಲಾಭಗಳೇನು ಎಂದು ತಿಳಿಯೋಣ ಬನ್ನಿ.

 • ದೇಹದ ಶಕ್ತಿ ಸಾಮರ್ಥ್ಯವನ್ನು ವೃದ್ಧಿಸುತ್ತದೆ.
 • ಈರುಳ್ಳಿಯಲ್ಲಿ ವಿಟಮಿನ್ ಸಿ ಎಂಬ ಅಂಶವು ಹೆಚ್ಚಾಗಿರುವುದರಿಂದ ಇದು ನಮ್ಮ ದೇಹಕ್ಕೆ ಶಕ್ತಿ ಸಾಮರ್ಥ್ಯವನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ.
 • ಹೃದಯ ಸಂಬಂಧಿ ಕಾಯಿಲೆಗಳನ್ನು ನಿವಾರಣೆ ಮಾಡುವ ಔಷಧ ಗುಣ ಈರುಳ್ಳಿಯಲ್ಲಿ ಅಡಗಿದೆ.
 • ಮಧುಮೇಹ ಕಾಯಿಲೆಯನ್ನು ನಿಯಂತ್ರಣ ಮಾಡಲು ಇದು ಒಂದು ಒಳ್ಳೆಯ ಔಷಧವಾಗಿದೆ.
 • ಜೇನು ಹುಳ ಕಚ್ಚಿದಾಗ ಅಥವಾ ಜೇನು ಹುಳು ಕಚ್ಚಿ ನೋವಾದಾಗ ಈರುಳ್ಳಿಯ ರಸವನ್ನು ಆ ಜಾಗಕ್ಕೆ ಬಳಸುವುದರಿಂದ ಬಹು ಬೇಗ ಗುಣವಾಗುತ್ತದೆ.
 • ಕ್ಯಾನ್ಸರ್ ಬರದಂತೆ ತಡೆಯುತ್ತದೆ.
 • ಹುಳು ಕಡ್ಡಿಯನ್ನು ನಿವಾರಿಸುತ್ತದೆ.
 • ಈರುಳ್ಳಿ ರಸದೊಂದಿಗೆ ಸ್ವಲ್ಪ ಜೇನು ತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ.
 • ಲೈಂ ಗಿಕ ಸಮಸ್ಯೆಗಳಿಗೂ ಕೂಡ ಈರುಳ್ಳಿ ಸೇವನೆಯಿಂದ ಪರಿಹಾರ ದೊರೆಯುತ್ತದೆ.
 • ರಕ್ತಹೀನತೆಯ ಸಮಸ್ಯೆಯನ್ನು ದೂರ ಮಾಡುತ್ತದೆ.
 • ಹೊಟ್ಟೆ ನೋವಿನ ಸಮಸ್ಯೆಯನ್ನು ಸಹ ಈರುಳ್ಳಿ ಮಂಗಮಾಯ ಮಾಡುತ್ತದೆ.
 • ಮೂತ್ರ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಈರುಳ್ಳಿಯನ್ನು ಪ್ರತಿದಿನ ಸೇವಿಸುವುದರಿಂದ ಮೂತ್ರ ಸಂಬಂಧಿ ಕಾಯಿಲೆಗಳಿಂದ ದೂರ ಉಳಿಯಬಹುದು.
 • ಅಸ್ತಮಾ ಕಾಯಿಲೆಯಂತಹ ದೊಡ್ಡ ಕಾಯಿಲೆಯನ್ನು ನಿವಾರಣೆ ಮಾಡುತ್ತದೆ.
 • ಇದರಲ್ಲಿರುವ ಸಲ್ಫ್ಯೂರಿಕ್ ಆ್ಯಸಿಡ್ ಅಂಶ ನಿವಾರಿಸುವ ಉತ್ತಮ ಮೆಡಿಸನ್ ಆಗಿ ಕೆಲಸ ಮಾಡುತ್ತದೆ.
 • ಕೂದಲಿಗೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಯನ್ನು ಸಹ ಈರುಳ್ಳಿ ನಿವಾರಣೆ ಮಾಡಿಕೊಡುತ್ತದೆ
 • ಈರುಳ್ಳಿ ರಸಕ್ಕೆ ಸ್ವಲ್ಪ ಬೆಲ್ಲ ಅಥವಾ ಜೇನು ತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಎಂತಹ ಕಠಿಣ ಕೆಮ್ಮಿದರೂ ನಿವಾರಣೆಯಾಗುತ್ತದೆ.
 • ಈರುಳ್ಳಿಯನ್ನು ಹಸಿ ಹಸಿಯಾಗಿ ಸೇವಿಸುವುದರಿಂದ ಗಂಟಲು ನೋವು ಶಮನಗೊಳ್ಳುತ್ತದೆ.
 • ಈರುಳ್ಳಿಯನ್ನು ಪ್ರತಿದಿನ ಸೇವಿಸುತ್ತಾ ಬಂದರೆ ದೇಹದಲ್ಲಿರುವ ಸಕ್ಕರೆ ಅಂಶ ಕಡಿಮೆಯಾಗುತ್ತ ಬರುತ್ತದೆ. ಇದರಿಂದ ಮಧುಮೇಹಿಗಳು ಪ್ರತಿದಿನ ಈರುಳ್ಳಿಯನ್ನು ತಪ್ಪದೆ ಸೇವಿಸಿ ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ.
 • ದೇಹದಲ್ಲಿರುವ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುವ ಕೆಲಸವನ್ನು ಈರುಳ್ಳಿ ಮಾಡುತ್ತದೆ.
 • ಕಿವಿ ನೋವು ಅಥವಾ ಕಿವಿ ಸೋರಿಕೆ ಇದ್ದರೆ ಈರುಳ್ಳಿ ರಸವನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ಕಿವಿಯೊಳಗೆ ಬಿಟ್ಟುಕೊಟ್ಟರೆ ಉಪಶಮನ ದೊರೆಯುತ್ತದೆ.
 • ಈರುಳ್ಳಿಯಲ್ಲಿ ಅತಿ ಹೆಚ್ಚಾಗಿ ರೋಗ ನಿರೋಧಕ ಶಕ್ತಿ ಮತ್ತು ನಂಜು ನಿರೋಧಕ ಶಕ್ತಿ ಇದ್ದು , ಇದು ದೇಹಕ್ಕೆ ತಗಲುವ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತದೆ ಹಾಗೂ ಇದರಿಂದ ನಮ್ಮ ಶಕ್ತಿ ವೃದ್ಧಿಸುತ್ತದೆ.

ಧನ್ಯವಾದಗಳು

Leave a Reply

Your email address will not be published.