Ashika Rangnath: ಹಸೆಮಣೆ ಏರಿದ ನಟಿ ಆಶಿಕಾ ರಂಗನಾಥ್ ಅಕ್ಕ ಅನುಷಾ ರಂಗನಾಥ್! ನೀವು ವಿಶ್ ಮಾಡಿ!

0 16

Ashika Rangnath: ಕನ್ನಡ ಚಿತ್ರರಂಗದ ಕ್ಯೂಟ್ ನಟಿಯರಲ್ಲಿ ಒಬ್ಬರು ಆಶಿಕಾ ರಂಗನಾಥ್. ಇವರು ಕರ್ನಾಟಕದ ಕ್ರಶ್ ಎಂದರೆ ತಪ್ಪಾಗಲಾರದು. ಎಲ್ಲಾ ಪಡ್ಡೆ ಹುಡುಗರಿಗೂ ಆಶಿಕಾ ರಂಗನಾಥ್ ಫೇವರೆಟ್ ನಟಿ ಎಂದರೆ ಸುಳ್ಳಲ್ಲ. ಇವರ ತಂದೆ ರಂಗನಾಥ್ ಸಿವಿಲ್ ಕಾಂಟ್ರಾಕ್ಟರ್ ಹಾಗೂ ತಾಯಿ ಸುಧಾ ಗೃಹಿಣಿ. ಇವರ ಅಕ್ಕ ಅನಷಾ ಕಿರುತೆರೆ ಕಲಾವಿದೆ. 2016 ರಲ್ಲಿ ಜಾಲಿ ಬಾಯ್ ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟರು ಆಶಿಕಾ.

ಇವರು ಪಿಯುಸಿ ವರೆಗು ಓದಿದ್ದು ತುಮಕೂರಿನಲ್ಲಿ. ನಂತರ ಬೆಂಗಳೂರಿಗೆ ಬಂದು ವಿದ್ಯಾಭ್ಯಾಸ ಮುಂದುವರೆಸಿದರು. ಆಶಿಕಾ ಹಲವಾರು ಬಗೆಯ ನೃತ್ಯ ಪ್ರಕಾರಗಳನ್ನು ಕಲಿತಿದ್ದಾರೆ. ಹಲವಾರು ಡ್ಯಾನ್ಸ್ ಪರ್ಫಾರ್ಮೆನ್ಸ್ ಗಳನ್ನು ಸಹ ನೀಡಿದ್ದಾರೆ. ಕೆಲವು ರಿಯಾಲಿಟಿ ಶೋ ಗಳಲ್ಲಿ ಸಹ ಭಾಗವಹಿಸಿದ್ದರು. ನಟ ಶರಣ್ ಅಭಿನಯದ ರಾಂಬೋ 2 ಸಿನಿಮಾ ಮೂಲಕ ಆಶಿಕಾ ರಂಗನಾಥ್ ಅವರಿಗೆ ಹೆಚ್ಚಿನ ಜನಪ್ರಿಯತೆ ಮತ್ತು ಯಶಸ್ಸು ಸಿಕ್ಕಿತು. ನಂತರ ಮಾಸ್ ಲೀಡರ್, ಮುಗುಳುನಗೆ ತಾಯಿಗೆ ತಕ್ಕ ಮಗ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದರು.

ಇತ್ತೀಚೆಗೆ ಅವತಾರ ಪುರುಷ, ತೆಲುಗಿನ ನಾ ಸಾಮಿ ರಂಗ ಸಿನಿಮಾಗಳ ಮೂಲಕ ಬೆಳ್ಳಿತೆರೆಗೆ ಬಂದಿದ್ದಾರೆ. ಸಿನಿಮಾಗಳ ಜೊತೆಗೆ ಪರ್ಸನಲ್ ಲೈಫ್ ವಿಷಯದಿಂದಲು ಸುದ್ದಿಯಾಗುವ ಆಶಿಕಾ ರಂಗನಾಥ್ ಅವರ ಮನೆಯಲ್ಲಿ ಈಗ ಶುಭ ಕಾರ್ಯ ನಡೆದಿದೆ. ಆಶಿಕಾ ಅವರ ಅಕ್ಕ ಅನುಷಾ ಅವರ ಮದುವೆ ನಡೆದಿದೆ. ಹೌದು, ನಿನ್ನೆ ಆಶಿಕಾ ರಂಗನಾಥ್ ಅವರ ಅಕ್ಕ ಅನುಷಾ ರಂಗನಾಥ್ ಅವರ ಮದುವೆ ನಡೆದಿದೆ..

ಅನುಷಾ ರಂಗನಾಥ್ ಅವರ ಇಡೀ ಫ್ಯಾಮಿಲಿ, ಫ್ರೆಂಡ್ಸ್ ಎಲ್ಲರೂ ಕೂಡ ಅನುಷಾ ಅವರ ಅಕ್ಕನ ಮದುವೆಗೆ ಬಂದು ಶುಭ ಕೋರಿದ್ದಾರೆ. ಇವರ ಮದುವೆಯ ಫೋಟೋಸ್ ಈಗ ವೈರಲ್ ಆಗಿದೆ..

Leave A Reply

Your email address will not be published.