Astrology: ಮನೆಯ ಈ ದಿಕ್ಕಿನಲ್ಲಿ ಈ ಹೂವಿನ ಗಿಡಗಳನ್ನು ನೆಟ್ಟರೆ, ಮನೆಯಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ!

Written by Pooja Siddaraj

Published on:

Astrology: ಹೂವನ್ನು ಕಂಡರೆ ಯಾರಿಗೆ ತಾನೇ ಇಷ್ಟ ಆಗುವುದಿಲ್ಲ, ಎಲ್ಲರಿಗೂ ಕೂಡ ಹೂವುಗಳನ್ನು ಕಂಡರೆ ಪ್ರೀತಿ, ಹೂವುಗಳನ್ನು ನೋಡಿದರೆ ಮನಸ್ಸಿಗೆ ಹಿತ ಅನ್ನಿಸುತ್ತದೆ. ಅದೇ ರೀತಿ ಮನೆಯ ಒಳಗೆ ಅಂದರೆ, ಇಂಥದ್ದೇ ದಿಕ್ಕಿನಲ್ಲಿ ಕೆಲವು ಹೂವಿನ ಗಿಡಗಳನ್ನು ಇಟ್ಟರೆ, ಮನೆಯ ಸಮೃದ್ಧಿ ಹೆಚ್ಚಾಗುತ್ತದೆ. ಆ ಹೂವುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಗುಲಾಬಿ :- ಲಕ್ಷ್ಮೀದೇವಿ ಇಷ್ಟಪಡುವ ಹೂವು ಕೂಡ ಒಂದು, ಇದು ಅದೃಷ್ಟವಂತ ಗಿಡ ಎಂದು ಕೂಡ ಹೇಳಲಾಗುತ್ತದೆ. ಗುಲಾಬಿ ಹೂವಿನ ಗಿಡವನ್ನು ಮನೆಯಲ್ಲಿ ಇಟ್ಟರೆ, ಹಣಕಾಸಿನ ವಿಚಾರದಲ್ಲಿ ಕೂಡ ಮನೆಯಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ನಿಮ್ಮ ಮನೆಯಲ್ಲಿ ಗುಲಾಬಿ ಗಿಡ ಇಡುವುದರಿಂದ ಹಣಕಾಸಿನ ಬರುವಿಕೆ ಜಾಸ್ತಿಯೇ ಆಗುತ್ತದೆ..

ಚೆಂಡು ಹೂವು :- ಈ ಹೂವು ಕೂಡ ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಈ ಹೂವು ಕೂಡ ಲಕ್ಷ್ಮೀದೇವಿಗೆ ಇಷ್ಟ ಆಗುವ ಹೂವು ಎಂದು ಹೇಳುತ್ತಾರೆ. ಈ ಹೂವಿನ ಗಿಡವನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮೀದೇವಿಯ ಆಶೀರ್ವಾದ ಸದಾ ಇರುತ್ತದೆ. ಹಾಗಾಗಿ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ಸದಾ ನೆಲೆಸಿರುತ್ತಾಳೆ.

ಕಮಲದ ಹೂವು :- ಕಮಲದ ಹೂವು ಸಹ ಲಕ್ಷ್ಮಿದೇವಿಗೆ ಅತ್ಯಂತ ಪ್ರಿಯವಾದ ಹೂವು ಆಗಿರುತ್ತದೆ. ಇದು ಕೂಡ ಅದೃಷ್ಟದ ಹೂವು ಎಂದು ಪರಿಗಣಿಸಲಾಗುತ್ತದೆ. ದೀಪಾವಳಿ ಹಬ್ಬದ ವೇಳೆ ಕಮಲದ ಹೂವನ್ನು ವಿಶೇಷವಾಗಿ ಪರಿಗಣಿಸಲಾಗುತ್ತದೆ.

ದಾಸವಾಳದ ಹೂವು :- ಈ ಹೂವಿನ ಗಿಡವನ್ನು ಮನೆಯಲ್ಲಿ ನೆಟ್ಟರೆ ಮನೆಯಲ್ಲಿ ಲಕ್ಷ್ಮೀದೇವಿಯ ಆಶೀರ್ವಾದವನ್ನು ನೀಡುತ್ತದೆ. ದಾಸವಾಳದ ಗಿಡವನ್ನು ಮನೆಯ ಒಳಗೆ ಅಲ್ಲ, ಮನೆಯ ಅಂಗಳದಲ್ಲಿ ನೆಡಬೇಕು. ಇದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿ ಯಾವಾಗಲೂ ನೆಲೆಸಿರುತ್ತಾಳೆ.

Leave a Comment