Astrology: ಹೊಸ ವರ್ಷಕ್ಕೆ ಈ ವಸ್ತುಗಳನ್ನು ಮನೆಗೆ ತನ್ನಿ, ಲಕ್ಷ್ಮೀದೇವಿ ನಿಮ್ಮ ಮನೆಯಲ್ಲೇ ಇರೋದು ಗ್ಯಾರೆಂಟಿ

Written by Pooja Siddaraj

Published on:

Astrology: ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ, ಹೊಸ ವರ್ಷ ಬಂತು ಎಂದರೆ ಎಲ್ಲರಲ್ಲೂ ಹೊಸ ಕನಸು, ಹೊಸ ಉತ್ಸಾಹ ಇದ್ದೇ ಇರುತ್ತದೆ. ಈ ಹೊಸ ವರ್ಷದ ವೇಳೆ ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲೆ ಯಾವಾಗಲೂ ಇರಬೇಕು ಎಂದರೆ ಈ ಕೆಲವು ವಸ್ತುಗಳನ್ನು ಮನೆಗೆ ತನ್ನಿ, ಇದರಿಂದ ಲಕ್ಷ್ಮೀದೇವಿ ನಿಮ್ಮ ಮನೆಗೆ ಸಂತೋಷ ಸಮೃದ್ಧಿ ಐಶ್ವರ್ಯ ತರುತ್ತಾಳೆ..

ಶಂಖ :- ಲಕ್ಷ್ಮೀದೇವಿ ಇಷ್ಟಪಡುವ ವಸ್ತುಗಳಲ್ಲಿ ಇದು ಕೂಡ ಒಂದು. ಹಿಂದೂ ಸಂಪ್ರದಾಯದ ಅನುಸಾರ ಎಲ್ಲಾ ಪೂಜೆಗಳಲ್ಲಿ ಶಂಖವನ್ನು ಬಳಸುತ್ತಾರೆ. ಮನೆಯಲ್ಲಿ ಶಂಖ ಇಟ್ಟುಕೊಂಡರೆ, ನಿಯ ಮನೆಯಲ್ಲಿ ಸಂತೋಷ, ಸಮೃದ್ಧಿ ಯಾವಾಗಲೂ ನೆಲೆಸಿರುತ್ತದೆ. ನಿಮ್ಮ ಹಣಕಾಸಿನ ಸಮಸ್ಯೆಗಳು ಕೂಡ ದೂರವಾಗುತ್ತದೆ. ಹೊಸ ವರ್ಷಕ್ಕೆ ಶಂಖ ಖರೀದಿ ಮಾಡಿದರೆ ಅದೃಷ್ಟ ನಿಮ್ಮದಾಗುತ್ತದೆ.

ತುಳಸಿ :- ಲಕ್ಷ್ಮೀದೇವಿ ನೆಲೆಸಿರುವುದು ತುಳಸಿ ಗಿಡದಲ್ಲಿ, ತುಳಸಿ ಗಿಡಕ್ಕೆ ನಮ್ಮ ಧರ್ಮದಲ್ಲಿ ವಿಶೇಷ ಸ್ಥಾನವಿದೆ. ಮನೆಯಲ್ಲಿ ತುಳಸಿ ಗಿಡ ಇಟ್ಟು, ಪೂಜೆ ಮಾಡಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳುತ್ತಾರೆ. ಹಾಗಾಗಿ ಹೊಸ ವರ್ಷದ ದಿನ ತುಳಸಿ ಗಿಡ ಮನೆಗೆ ತರುವುದು ಸಮೃದ್ಧಿಯನ್ನು ಹೆಚ್ಚಿಸುತ್ತದೆ..

ನವಿಲುಗರಿ :- ಭಗವಾನ್ ಶ್ರೀಕೃಷ್ಣನಿಗೆ ಪ್ರಿಯವಾದ ನವಿಲುಗರಿಯನ್ನು ಲಕ್ಷ್ಮೀದೇವಿಯ ಸಂಕೇತ ಎಂದು ಹೇಳುತ್ತಾರೆ.. ನವಿಲುಗರಿ ಮನೆಯಲ್ಲಿದ್ದರೆ ಲಕ್ಷ್ಮೀದೇವಿ ಸದಾ ಆ ಮನೆಯಲ್ಲೇ ಇರುತ್ತಾಳೆ ಎಂದು ಹೇಳುತಾರೆ. ಈ ಕಾರಣಕ್ಕೆ ಹೊಸ ವರ್ಷಕ್ಕೆ ನವಿಲುಗರಿಯನ್ನು ಮನೆಗೆ ತರುವುದು ಒಳ್ಳೆಯದು.

ಬೆಳ್ಳಿ ಆಮೆ :- ಮನೆಯಲ್ಲಿ ಬೆಳ್ಳಿ ಆಮೆ ಇಡುವುದು ಶುಭ ತರುತ್ತದೆ, ಹಾಗಾಗಿ ಹೊಸ ವರ್ಷಕ್ಕೆ ಮನೆಗೆ ಬೆಳ್ಳಿ ಆಮೆಯನ್ನು ತರಬಹುದು. ಇದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ, ನೆಮ್ಮದಿ ಎಲ್ಲವೂ ಹೆಚ್ಚಾಗುತ್ತದೆ.

Leave a Comment