Astrology: ಲಕ್ಷ್ಮೀದೇವಿಯ ಕೃಪೆ ಯಾವಾಗಲೂ ನಿಮ್ಮ ಮೇಲೆ ಇರಬೇಕು ಎಂದರೆ ಈ ಕೆಲಸಗಳನ್ನು ತಪ್ಪದೇ ಮಾಡಿ

0 1

Astrology: ಬದುಕಿನಲ್ಲಿ ಹಣಕಾಸಿನ ವಿಷಯದಲ್ಲಿ ಯಾವುದೇ ತೊಂದರೆ ಆಗಬಾರದು, ನೆಮ್ಮದಿಯಾಗಿ ಇರಬೇಕು ಎಂದು ತಾಯಿ ಲಕ್ಷ್ಮೀದೇವಿಯ ಕೃಪೆ ನಮ್ಮ ಮೇಲೆ ಇರಬೇಕು. ಸಂಪತ್ತಿನ ಅಧಿದೇವತೆಯೇ ಲಕ್ಷ್ಮೀದೇವಿ. ಇವರನ್ನು ಒಲಿಸಿಕೊಳ್ಳಲು ಸಾಕಷ್ಟು ಜನರು ಬೇರೆ ಬೇರೆ ರೀತಿಯಲ್ಲಿ ಪೂಜೆ, ವ್ರತಗಳನ್ನು ಮಾಡಿ ಪ್ರಯತ್ನ ಮಾಡುತ್ತಾರೆ. ಲಕ್ಷ್ಮಿಯ ಕೃಪೆ ಪಡೆಯಲು ನೀವು ಈ 5 ಕೆಲಸಗಳನ್ನು ಮಾಡಿದರೆ ಸಾಕು. ದೇವಿಯ ಕೃಪೆ ಯಾವಾಗಲೂ ನಿಮ್ಮ ಮೇಲಿರುತ್ತದೆ.

  1. ಲಕ್ಷ್ಮಿಗೆ ಪ್ರಿಯವಾದದ್ದು ತುಳಸಿ, ಹಾಗಾಗಿ ಪ್ರತಿದಿನ ಬೆಳಗ್ಗೆ ಎದ್ದು ತುಳಸಿ ಪೂಜೆ ಮಾಡಿದರೆ ಲಕ್ಷ್ಮೀದೇವಿಗೆ ಸಂತೋಷವಾಗುತ್ತದೆ. ಇದರಿಂದ ಲಕ್ಷ್ಮೀದೇವಿಯ ಕೃಪೆ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ. ತುಳಸಿ ಗಿಡವನ್ನು ಭಕ್ತಿಯಿಂದ ಪೂಜಿಸುವ ಮೂಲಕ ಲಕ್ಷ್ಮೀದೇವಿಯ ಆಶೀರ್ವಾದ ಪಡೆಯಬಹುದು.
  2. ಪ್ರತಿದಿನ ಬೆಳಗ್ಗೆ ಎದ್ದ ನಂತರ, ತುಳಸಿ ಗಿಡಕ್ಕೆ ಭಕ್ತಿಯಿಂದ ಪೂಜೆ ಮಾಡಿದ ಬಳಿಕ, ಮಹಾಪ್ರಸಾದ ಜನನಿ, ಸರ್ವ ಸೌಭಾಗ್ಯವರ್ಧಿನಿ, ಆದಿ ವ್ಯಾಧಿ ಹರ ನಿತ್ಯಂ, ತುಳಸಿ ತ್ವಂ ನಮೋಸ್ತುತೇ ಈ ಮಂತ್ರವನ್ನು ಅಷ್ಟೇ ಭಕ್ತಿಯಿಂದ ಪಠಿಸಿ. ಇದರಿಂದ ಲಕ್ಷ್ಮೀದೇವಿಗೆ ಸಂತೋಷವಾಗುತ್ತದೆ. ನಿಮಗೆ ಅವಳ ಕೃಪೆ ಸಿಗುತ್ತದೆ.
  3. ತುಳಸಿ ಪೂಜೆ ಮಾಡಿದ ಬಳಿಕ ತುಳಸಿ ಗಿಡಕ್ಕೆ ಅರ್ಪಿಸುವ ನೀರನ್ನು ಅದೇ ಪಾತ್ರೆಯಲ್ಲಿ ಸ್ವಲ್ಪ ಉಳಿಸಿ. ತುಳಸಿ ಎಲೆಯಿಂದ ಇಡೀ ಮನೆಗೆ ಆ ನೀರನ್ನು ಸಿಂಪಡಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿರುವ ನೆಗಟಿವ್ ಎನರ್ಜಿ ದೂರವಾಗುತ್ತದೆ.
  4. ತುಳಸಿ ಪೂಜೆಯನ್ನು ಪ್ರತಿದಿನ ಪ್ರದೋಷ ಕಾಲದಲ್ಲಿ ಮಾಡಬೇಕು, ಪೂಜೆ ವೇಳೆ ತುಳಸಿ ಗಿಡಕ್ಕೆ ತುಪ್ಪದ ದೀಪ ಹಚ್ಚಬೇಕು. ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿಗೆ ಸಂತೋಷವಾಗುತ್ತದೆ. ಅದರಿಂದ ಅವಳ ಆಶೀರ್ವಾದ ನಿಮಗೆ ಸಿಗುತ್ತದೆ. ತುಳಸಿಯ ಪೂಜೆ ಮಾಡುವ ಮನೆಯಲ್ಲಿ ಲಕ್ಷ್ಮೀದೇವಿ ಯಾವಾಗಲೂ ನೆಲೆಸಿರುತ್ತಾಳೆ.
  5. ಹಾಗೆಯೇ ಮತ್ತೊಂದು ವಿಚಾರ, ತುಳಸಿ ಗೆ ಕೈಮುಗಿಯದೇ ಗಿಡದಿಂದ ಎಲೆಗಳನ್ನಿ ಕೀಳಬಾರದು. ಭಾನುವಾರದ ದಿವಸ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಬಾರದು. ಸಂಜೆ ಸಮಯದಲ್ಲಿ ತುಳಸಿ ಗಿಡವನ್ನು ಮುಟ್ಟಬಾರದು. ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿಯ ಕೋಪಕ್ಕೆ ಗುರಿಯಾಗುತ್ತೀರಿ.
Leave A Reply

Your email address will not be published.