Astrology: ಇದೊಂದು ದಿನ ಹೊಸ ಬಳೆ ಧರಿಸಿದ್ರೆ ನಿಮ್ಮ ಗಂಡನ ಆಯಸ್ಸು ವೃದ್ಧಿಯಾಗುತ್ತದೆ!

0 1

Astrology: ನಮ್ಮ ಶಾಸ್ತ್ರದಲ್ಲಿ ಹೆಣ್ಣುಮಕ್ಕಳ ಅಲಂಕಾರಿಕ ವಸ್ತುಗಳ ಬಗ್ಗೆ ಕೂಡ ಮಾಹಿತಿ ನೀಡಲಾಗಿದೆ. ಹೆಣ್ಣುಮಕ್ಕಳು ಧರಿಸುವ ಬಳೆ, ಸಿಂಧೂರ, ಸೀರೆ, ಒಡವೆ ಇದೆಲ್ಲದಕ್ಕೂ ವಿಶೇಷ ಮಹತ್ವವಿದೆ. ಅದರಲ್ಲೂ ಬಳೆ ಧರಿಸುವ ವಿಚಾರಕ್ಕೆ ಹೆಣ್ಣುಮಕ್ಕಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ವಾಸ್ತು ತಜ್ಞರ ಪ್ರಕಾರ ಬಳೆ ಧರಿಸುವುದು ತುಂಬಾ ಒಳ್ಳೆಯದು. ಶಾಸ್ತ್ರದಲ್ಲಿಯು ಬಳೆ ಒಬ್ಬ ಮಹಿಳೆಯ ಪ್ರಮುಖ ವಸ್ತು ಎಂದು ಹೇಳುತ್ತಾರೆ. ಬಳೆಗಳು ಬುಧ ಹಾಗೂ ಚಂದ್ರನಿಗೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತದೆ.

ಮದುವೆ ಆಗಿರುವ ಹೆಣ್ಣುಮಗಳ ಸೌಂದರ್ಯ ಮತ್ತು ಜೀವನ ಎರಡಕ್ಕೂ ಹತ್ತಿರವಾಗಿರೋದು ಬಳೆ. ಅಷ್ಟೇ ಅಲ್ಲ ಬಳೆಗಳನ್ನು ಧರಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಕೂಡ ಹೇಳುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ನಿರ್ದಿಷ್ಟ ದಿವಸ ಹೆಣ್ಣುಮಗು ಹೊಸ ಬಳೆ ಧರಿಸಿದರೆ ಅದರಿಂದ ಒಳ್ಳೆಯ ಪ್ರಯೋಜನ ಸಿಗುತ್ತದೆ ಎಂದು ಹೇಳುತ್ತಾರೆ. ಮದುವೆಯಾದ ಹೆಣ್ಣುಮಗು ಹೊಸ ಬಳೆ ಧರಿಸುವುದಕ್ಕೆ ಭಾನುವಾರ ಹಾಗೂ ಶುಕ್ರವಾರ ಒಳ್ಳೆಯ ದಿನ ಎಂದು ಹೇಳುತ್ತಾರೆ.

ಹಾಗೆಯೇ ಮಂಗಳವಾರ ಹಾಗೂ ಭಾನುವಾರ ಹೊಸದಾಗಿ ಬಳೆ ಖರೀದಿ ಮಾಡಲು ಸರಿಯಾದ ದಿನವಲ್ಲ ಎಂದು ಹೇಳುತ್ತಾರೆ. ಒಂದು ವೇಳೆ ಮಂಗಳವಾರ ಅಥವಾ ಶನಿವಾರ ಹೊಸ ಬಳೆ ಧರಿಸಬೇಕಾದ ಪರಿಸ್ಥಿತಿ ಬಂದರೆ, ಬಳೆಗಳನ್ನು ಮೊದಲು ತುಳಸಿ ದೇವಿಗೆ ಅರ್ಪಿಸಬೇಕು, ನಂತರ ಬಳೆಗಳನ್ನು ನಿಮ್ಮ ಕೈಗೆ ಹಾಕಿಕೊಳ್ಳಬೇಕು. ಬಳೆಗಳನ್ನು ಧರಿಸುವ ಮಹಿಳೆಯ ಮನಸ್ಸು ಶಾಂತಿಯಿಂದ ಕೂಡಿರುತ್ತದೆ ಹಾಗೆಯೇ ಅವರಲ್ಲಿ ಪಾಸಿಟಿವಿಟಿ ಇರುತ್ತದೆ ಎಂದು ಕೂಡ ಹೇಳುತ್ತಾರೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಮಹಿಳೆಯರು ಇಷ್ಟು ಬಳೆಗಳನ್ನು ಧರಿಸಬೇಕು ಎಂದು ತಿಳಿಸಿದ್ದು, ಎರಡು ಕೈಗಳನ್ನು ಸೇರಿಸಿ 21 ಬಳೆಗಳನ್ನು ಧರಿಸುವುದು ಒಳ್ಳೆಯದು, ಹಾಗೆಯೇ ಅದರ ಜೊತೆಗೆ ಚಿನ್ನದ ಬಳೆಗಳನ್ನು ಕೂಡ ಧರಿಸಬಹುದು. ಹೊಸದಾಗಿ ಮದುವೆಯಾದ ವಧು 40 ದಿವಸಗಳ ಕಾಲ ಬಳೆ ಧರಿಸಬೇಕು. ಮದುವೆ ಆಗಿರುವ ಮಹಿಳೆಯರು ಕಪ್ಪು ಬಣ್ಣದ ಬಳೆಯನ್ನು ಧರಿಸುವ ಹಾಗಿಲ್ಲ ಇದು ಅಶುಭ ಎಂದು ಕರೆಯುತ್ತಾರೆ.

Leave A Reply

Your email address will not be published.