Astrology: ಇವುಗಳಲ್ಲಿ ಒಂದೇ ಒಂದು ವಸ್ತುವನ್ನು ಇಂದು ಮನೆಗೆ ತಂದರೆ, ನೀವು ಅಂದುಕೊಂಡಿದ್ದೆಲ್ಲಾ ಆಗಲಿದೆ!

0 16

Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ನಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಅನೇಕ ಮಾರ್ಗಗಳಿವೆ. ಅವುಗಳಲ್ಲಿ ವಿಶೇಷ ದಿನಗಳಲ್ಲಿ ಪೂಜೆ ಪುನಸ್ಕಾರ ಮಾಡುವುದು ಕೂಡ ಒಂದು. ವರ್ಷದ ಎಲ್ಲಾ ತಿಂಗಳುಗಳಲ್ಲಿ ತ್ರಯೋದಶಿಯ ದಿವಸ ಪ್ರದೂಷ ವ್ರತವನ್ನು ಕೈಗೊಳ್ಳಲಾಗುವುದು. ಈ ದಿವಸ ದೇವರ ಪೂಜೆ ಮಾಡಿ, ಉಪವಾಸ ಮಾಡಿ, ವ್ರತ ಮಾಡಿದರೆ, ಆ ಶಿವ ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸುತ್ತಾನೆ.

ಮಾಘ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನ ಇದು ಫೆಬ್ರವರಿ 7ರಂದು ಇವತ್ತು ಆಚರಿಸಲಾಗುತ್ತದೆ. ಈ ಪ್ರದೂಷ ವ್ರತದ ದಿನ ಪೂಜೆ ಪುನಸ್ಕಾರ ಮಾಡುವುದರ ಜೊತೆಗೆ, ಕೆಲ ವಸ್ತುಗಳನ್ನು ಮನೆಗೆ ತರುವ ಮೂಲಕ, ನಿಮ್ಮ ಮನೆಗೆ ಶುಭಫಲ ಸಿಗುತ್ತದೆ. ನಿಮಗೂ ಒಳ್ಳೆಯದಾಗುತ್ತದೆ. ಈ ದಿವಸ ಜ್ಯೋತಿಷ್ಯದಲ್ಲಿ ತಿಳಿಸಿರುವ ಆ ಕೆಲವು ವಸ್ತುಗಳನ್ನು ಮನೆಗೆ ತಂದರೆ, ಶಿವನ ಪ್ರೀತಿಗೆ ಪಾತ್ರರಾಗುತ್ತೀರಿ, ಆ ಶಿವ ನಿಮ್ಮ ಎಲ್ಲಾ ಆಸೆಗಳನ್ನು, ಕನಸುಗಳನ್ನು ಈಡೇರಿಸುತ್ತಾನೆ. ಹಾಗಿದ್ದಲ್ಲಿ, ಆ ವಸ್ತುಗಳು ಯಾವುವು ಎಂದು ತಿಳಿಯೋಣ..

ಬಿಳಿ ಬಣ್ಣದ ವಸ್ತುಗಳು: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಶಿವನ ಆಶೀರ್ವಾದ ಪಡೆಯಲು, ವ್ರತದ ದಿನ ಮನೆಗೆ ಬಿಳಿ ಬಣ್ಣದ ವಸ್ತುಗಳನ್ನು ಕೊಂಡು ತರುವುದು ಒಳ್ಳೆಯದು, ಅಕ್ಕಿ, ಹಾಲು, ಬಿಳಿ ಬಣ್ಣದ ಬಟ್ಟೆ ಇವುಗಳನ್ನು ತರಬಹುದು. ಇವುಗಳಿಂದ ನಿಮ್ಮ ಮನೆಯಲ್ಲಿ ಯಾವಾಗಲೂ ಶಾಂತಿ ಇರುತ್ತದೆ.

ಕಬ್ಬಿಣದ ವಸ್ತು: ಈ ವ್ರತದ ದಿನ ನಿಮ್ಮ ಮನೆಗೆ ಕಬ್ಬಿಣದಿಂದ ತಯಾರಾಗಿರುವ ಯಾವುದೇ ವಸ್ತುವನ್ನು ತಂದರೆ ಮನೆಯಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ. ಕಬ್ಬಿಣದ ಪಾತ್ರೆ ಅಥವಾ ಇನ್ಯಾವುದೇ ವಸ್ತುವನ್ನು ತರಬಹುದು.

ಅಕ್ವೇರಿಯಂ: ಈ ವ್ರತದ ದಿನ ಮನೆಗೆ ಅಕ್ವೇರಿಯಂ ತಂದು, ಅದರಲ್ಲಿ ಮೀನುಗಳನ್ನು ಹಾಕಿ ಇಡುವುದರಿಂದ, ಎಲ್ಲಾ ಗ್ರಹದೋಷಗಳಿಂದ ಮುಕ್ತಿ ಪಡೆಯುತ್ತೀರಿ.

Leave A Reply

Your email address will not be published.