Astrology: ಸಂಕಷ್ಟ ಚತುರ್ಥಿ ದಿವಸ ಅಪ್ಪಿ ತಪ್ಪಿಯೂ ಈ ಕೆಲಸವನ್ನು ಮಾಡಬೇಡಿ!

0 13

Astrology: ಪ್ರತಿ ತಿಂಗಳು ಕೃಷ್ಣ ಪಕ್ಷದ ಚತುರ್ಥಿ ತಿಥಿಯನ್ನು ಸಂಕಷ್ಟ ಚತುರ್ಥಿಯನ್ನು ಗಣೇಶ ಚತುರ್ಥಿ ಎಂದು ಕರೆಯುತ್ತಾರೆ. ಈ ದಿವಸ ಇಡೀ ದಿನ ಉಪವಾಸ ಇದ್ದು, ಗಣೇಶನ ಪೂಜೆ ಮಾಡಿ, ಈ ದಿನದ ವ್ರತವನ್ನು ಆಚರಣೆ ಮಾಡಿದರೆ, ನಿಮ್ಮ ಬದುಕಿನ ಎಲ್ಲಾ ಕಷ್ಟಗಳು ದೂರವಾಗುತ್ತದೆ. ನಿಮ್ಮ ಎಲ್ಲಾ ಆಸೆಗಳು ಈಡೇರುತ್ತದೆ. ಗಣೇಶ ಚತುರ್ಥಿ ಬಹಳ ಪವಿತ್ರವಾದ ದಿನ, ಈ ದಿವಸ ನೀವು ಬಹಳ ಹುಷಾರಾಗಿ ಇರಬೇಕು, ಗಣೇಶನಿಗೆ ಇಷ್ಟ ಆಗದೆ ಇರುವ ಕೆಲವು ತಪ್ಪುಗಳನ್ನು ನೀವು ಮಾಡಬಾರದು, ಮಾಡಿಬಿಟ್ಟರೆ, ಗಣೇಶನ ಕೋಪಕ್ಕೆ ಗುರಿಯಾಗುತ್ತೀರಿ. ಆ ತಪ್ಪಿಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

ಪ್ರಾಣಿ ಹಿಂಸೆ :- ಪ್ರಾಣಿಗಳು ಮೂಕಜೀವಿಗಳು, ಯಾವ ಪ್ರಾಣಿಗೂ ಕೂಡ ತೊಂದರೆ ನೀಡಬಾರದು. ಆದರೆ ಪ್ರಾಣಿ ಹಿಂಸೆ ಮಾಡಿದರೆ ಗಣೇಶನ ಕೋಪಕ್ಕೆ ಗುರಿಯಾಗುತ್ತೀರಿ. ಅದರಲ್ಲೂ ಗಣೇಶನ ವಾಹನ ಇಲಿಗೆ ತೊಂದರೆ ಮಾಡಬಾರದು.

ಈ ವಸ್ತುವನ್ನು ಅರ್ಪಿಸಬೇಡಿ :- ಸಂಕಷ್ಟ ಚತುರ್ಥಿ ದಿವಸ ಗಣೇಶನಿಗೆ ದೂರ್ವಾ, ವೀಳ್ಯದೆಲೆ, ಹೂವು, ಮೋದಕ, ಲಡ್ಡು ಇವುಗಳನ್ನು ಅರ್ಪಿಸಿ ಪೂಜೆ ಮಾಡಿ, ಒಳ್ಳೆಯದಾಗುತ್ತದೆ. ಯಾವುದೇ ಕಾರಣಕ್ಕೂ ತುಳಸಿಯನ್ನು ಗಣೇಶನಿಗೆ ಅರ್ಪಿಸಬೇಡಿ. ಇದರಿಂದ ನೆಗಟಿವ್ ಪರಿಣಾಮ ಉಂಟಾಗುತ್ತದೆ.

ಈ ಬಣ್ಣದ ಬಟ್ಟೆ ಧರಿಸುವ ಹಾಗಿಲ್ಲ :- ಸಂಕಷ್ಟ ಚತುರ್ಥಿ ದಿವಸ ನೀವು ಧರಿಸುವ ಬಗ್ಗೆ ಕೂಡ ಬಹಳ ಮುಖ್ಯವಾಗುತ್ತದೆ. ಈ ದಿವಸ ನೀವು ಕಪ್ಪು ಮತ್ತು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸುವ ಹಾಗಿಲ್ಲ, ಕೆಂಪು ಮತ್ತು ಹಳದಿ ಬಣ್ಣದ ಬಟ್ಟೆ ಧರಿಸುವುದು ಒಳ್ಳೆಯದು.

ಚಂದ್ರನಿಗೆ ಆರ್ಘ್ಯ ಅರ್ಪಿಸಿ :- ಸಂಕಷ್ಟ ಚತುರ್ಥಿ ದಿವಸ ಗಣೇಶನಿಗೆ ಪೂಜೆ ಮಾಡಿದ ಬಳಿಕ, ಚಂದ್ರನಿಗೆ ಆರ್ಘ್ಯ ಅರ್ಪಿಸಬೇಕು. ಈ ಕೆಲಸವನ್ನು ಮರೆಯಬೇಡಿ.

ಸಾತ್ವಿಕ ಆಹಾರ ಸೇವಿಸಿ :- ಸಂಕಷ್ಟ ಚತುರ್ಥಿ ದಿವಸ ಗಣೇಶನ ಪೂಜೆ ಮಾಡಿ, ಚಂದ್ರನನ್ನು ನೋಡಿದ ಬಳಿಕ ಉಪವಾಸ ಬಿಡುವಾಗ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು.

Leave A Reply

Your email address will not be published.