Astrology: ಶನಿದೇವರ ದೋಷ ಇರುವವರು ಪರಿಹಾರ ಮಾಡಿಕೊಳ್ಳಲು ಈ ಸಣ್ಣ ಕ್ರಮಗಳನ್ನು ಅನುಸರಿಸಿ

0 14

Astrology; ಜ್ಯೋತಿಷ್ಯ ಶಾಸ್ತ್ರದ ಶನಿದೇವರಿಗೆ ವಿಶೇಷ ಸ್ಥಾನವಿದೆ. ಶನಿದೇವರು ಕರ್ಮಫಲದಾತ, ಒಬ್ಬ ವ್ಯಕ್ತಿ ಮಾಡುವ ಕರ್ಮದ ಅನುಸಾರ ಆತನಿಗೆ ಫಲ ನೀಡುತ್ತಾನೆ ಶನಿದೇವ. ಶನಿದೇವನ ಸ್ಥಾನ ಜಾತಕದಲ್ಲಿ ಚೆನ್ನಾಗಿಲ್ಲ ಎಂದರೆ ಆ ವ್ಯಕ್ತಿ ಬದುಕಿನಲ್ಲಿ ನಾನಾ ರೀತಿಯ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಒಂದು ವೇಳೆ ಶನಿದೋಷ ಇದ್ದರೆ, ಅಂಥವರು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ಶನಿದೋಷದ ಪರಿಣಾಮ ಕಡಿಮೆ ಆಗುವ ಹಾಗೆ ಮಾಡಬಹುದು. ಆ ಕ್ರಮಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

*ಶನಿದೇವರ ದೋಷದ ಪರಿಣಾಮ ಕಡಿಮೆ ಆಗಬೇಕು ಎಂದರೆ, ಪ್ರತಿ ಶನಿವಾರ ಶನಿದೇವರ ದೇವಸ್ಥಾನಕ್ಕೆ ಹೋಗಿ, ಶನಿದೇವರ ಪಾದಗಳ ದರ್ಶನ ಪಡೆಯಿರಿ. ಇದರಿಂದ ಕೆಟ್ಟ ಪ್ರಭಾವ ಕಡಿಮೆ ಆಗುತ್ತದೆ.

*ಓಂ ಶನಿಶ್ಚರಾಯ ನಮಃ.. ಇದು ಶನಿದೇವರ ಮಂತ್ರ ಆಗಿದ್ದು ಈ ಮಂತ್ರವನ್ನು ಒಂದು ಜಪಮಾಲೆಯಷ್ಟು ಪಠಿಸಿ, ಹಾಗೆಯೇ ಶನಿ ಚಾಲೀಸಾವನ್ನು ಪಠಿಸಿ. ಇದರಿಂದ ಶನಿದೋಷದ ಪ್ರಭಾವ ಕಡಿಮೆ ಆಗುತ್ತದೆ.

*ಶನಿದೋಷದ ಪರಿಣಾಮ ಕಡಿಮೆ ಆಗಬೇಕು ಎಂದರೆ, ಬಡವರಿಗೆ ನಿಮ್ಮ ಕೈಲಾದ ವಸ್ತುಗಳನ್ನು ದಾನ ಮಾಡಬಹುದು. ಇದರಿಂದ ಶನಿದೇವರಿಗೆ ಸಂತೋಷವಾಗುತ್ತದೆ. ಹಾಗೆಯೇ ಶನಿದೋಷದ ಪರಿಣಾಮವು ಕಡಿಮೆ ಆಗುತ್ತದೆ.

*ಶನಿದೇವರ ವಾರ ಆಗಿರುವ ಶನಿವಾರದ ದಿನ ಕಪ್ಪು ಎಳ್ಳನ್ನು ದಾನ ನೀಡುವ ಮೂಲಕ ಶನಿದೇವರ ಆಶೀರ್ವಾದ ಪಡೆಯಬಹುದು. ಇದರಿಂದ ದೋಷದ ಪರಿಣಾಮ ಕಡಿಮೆ ಇರುತ್ತದೆ.

*ಶನಿವಾರದ ದಿವಸ ಒಂದು ಕಪ್ಪು ಕುದುರೆಯ ಬಾಲದಿಂದ ತಯಾರಾಗಿರುವ ಉಂಗುರವನ್ನು ಧರಿಸುವುದರಿಂದ ಶನಿದೇವರ ದೋಷದ ಪರಿಣಾಮ ಕಡಿಮೆ ಆಗುತ್ತದೆ..

Leave A Reply

Your email address will not be published.