Astrology: ಕೆಲಸದಲ್ಲಿ ಯಶಸ್ಸು ಸಿಗ್ತಿಲ್ವ? ಈ ಕೆಲಸ ಮಾಡಿ, ಆಮೇಲೆ ನೋಡಿ..

0 12

Astrology: ಪ್ರತಿ ವ್ಯಕ್ತಿಯ ಬದುಕಿನಲ್ಲಿ ಎಲ್ಲಕ್ಕಿಂತ ಮುಖ್ಯ ಆಗೋದು ಕೆಲಸ, ಕೆಲಸ ಒಂದಿದ್ರೆ ಎಲ್ಲವೂ ಒಳ್ಳೆಯ ರೀತಿಯಲ್ಲಿ ಸಾಗುತ್ತದೆ. ಆದರೆ ಕೆಲವೊಮ್ಮೆ ಗ್ರಹಗತಿಗಳ ಕಾರಣಕ್ಕೆ ಉದ್ಯೋಗದಲ್ಲಿ ಸಮಸ್ಯೆ ಅನುಭವಿಸಬಹುದು. ಹೌದು, ಜಾತಕದಲ್ಲಿ ಸೂರ್ಯನ ಸ್ಥಾನ ಚೆನ್ನಾಗಿಲ್ಲ ಎಂದರೆ ಚೆನ್ನಾಗಿಲ್ಲ ಎಂದರೆ ಉದ್ಯೋಗದಲ್ಲಿ ಅನಗತ್ಯ ಕಾರಣಕ್ಕೆ ಸಮಸ್ಯೆ ಅನುಭವಿಸಬಕಾಗಬಹುದು. ಸುಮ್ಮನೆ ಬೈಗುಳ ಕೇಳುವುದು ಇಂಥ ಸಮಸ್ಯೆ ಉಂಟಾಗಬಹುದು..

ಈ ರೀತಿ ಆದರೆ ನಿಮ್ಮ ಕೆರಿಯರ್ ಹಾಗೂ ಮನಸ್ಥಿತಿ ಎಲ್ಲದರ ಮೇಲು ಪರಿಣಾಮ ಬೀರುತ್ತದೆ. ಗ್ರಹಗಳು ದುರ್ಬಲವಾದಾಗ ಈ ರೀತಿ ಆಗುತ್ತದೆ. ಈ ಥರದ ಸಮಸ್ಯೆ ಉಂಟಾದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಅದಕ್ಕೂ ಕೆಲವು ಪರಿಹಾರವಿದೆ. ಅವುಗಳನ್ನು ಅನುಸರಿಸಿದರೆ ನಿಮ್ಮ ಕೆಲಸದಲ್ಲಿ ಇರುವ ಸಮಸ್ಯೆಗಳು ಪರಿಹಾರ ಆಗುತ್ತದೆ. ಯಶಸ್ಸು ನಿಮ್ಮದಾಗಿಸಿಕೊಳ್ಳಲು ಏನು ಮಾಡಬೇಕು ಎನ್ನುವುದನ್ನು ತಿಳಿಸುತ್ತೇವೆ ನೋಡಿ..

ಒಬ್ಬ ಮನುಷ್ಯನ ಜಾತಕದಲ್ಲಿ ಸೂರ್ಯದೇವನ ಸ್ಥಾನ ಹೇಗಿದೆ ಅನ್ನೋದು ತುಂಬಾ ಮುಖ್ಯ. ಸೂರ್ಯನ ಸ್ಥಾನ ವೀಕ್ ಆಗಿದ್ದರೆ ಆ ವ್ಯಕ್ತಿ ಬದುಕಿನಲ್ಲಿರುವ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾನೆ. ಹಾಗೆಯೇ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾನೆ. ಇದೆಲ್ಲದರಿಂದ ನೀವು ದೂರ ಇರಬೇಕು ಎಂದರೆ ಕೆಲವು ವಿಚಾರಗಳನ್ನು ತಿಳಿದುಕೊಳ್ಳಬೇಕು.

ಒಂದು ವೇಳೆ ನಿಮ್ಮ ಜಾತಕದಲ್ಲಿ ಸೂರ್ಯನ ಸ್ಥಾನ ದುರ್ಬಲವಾಗಿದ್ದರೆ ಈ ಸಮಸ್ಯೆ ಇಂದ ಹೊರಬರಲು ನೀವು ಸೂರ್ಯದೇವನನ್ನು ಒಲಿಸಿಕೊಳ್ಳಬೇಕು. ಇದಕ್ಕಾಗಿ ನೀವು ದಿನನಿತ್ಯ ಬೆಳಗ್ಗೆ ಬೇಗ ಎದ್ದು, ಸ್ನಾನ ಮಾಡಿ ಸೂರ್ಯದೇವನಿಗೆ ನೀರಿನ ಅರ್ಪಣೆ ಮಾಡಿ. ವಿಶೇಷವಾಗಿ ಭಾನುವಾರದ ದಿವಸ ಈ ಕೆಲಸ ಮಾಡಿ. ಹಾಗೆಯೇ ಭಾನುವಾರದ ದಿನ ಬೆಲ್ಲ ಮತ್ತು ತುಪ್ಪವನ್ನು ದಾನ ನೀಡಬೇಕು. ಹಾಗೆಯೇ ಸೂರ್ಯದೇವನ ಮಂತ್ರವನ್ನು ಪಠಿಸಬೇಕು. ಇದರಿಂದ ನಿಮ್ಮ ಜಾತಕದಲ್ಲಿ ಸೂರ್ಯನ ಸ್ಥಾನ ಬಲವಾಗಿರುತ್ತದೆ.

Leave A Reply

Your email address will not be published.