Astrology Tips: ಬೆಳಗ್ಗೆ ದೇವರ ಪೂಜೆ ಮಾಡಿದ ನಂತರ ಈ ಕೆಲಸ ಮಾಡಿ, ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸೋದು ಪಕ್ಕಾ

Written by Pooja Siddaraj

Published on:

Astrology Tips: ಸಾಮಾನ್ಯವಾಗಿ ನಾವೆಲ್ಲರೂ ಬೆಳಗ್ಗೆ ಎದ್ದ ನಂತರ ನಿತ್ಯಕರ್ಮಗಳನ್ನು ಮುಗಿಸಿ, ದೇವರಿಗೆ ಪೂಜೆ ಮಾಡುತ್ತೇವೆ. ದೇವರಿಗೆ ಪೂಜೆ ಮಾತ್ರ ಮಾಡುವುದರಿಂದ ಲಕ್ಷ್ಮೀದೇವಿಯ ಆಶೀರ್ವಾದ ಸಿಗುವುದಿಲ್ಲ, ಇನ್ನು ಕೆಲವು ಕೆಲಸಗಳಿವೆ, ಅವುಗಳನ್ನ ಮಾಡಿದರೆ ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮೀದೇವಿ ನೆಲೆಸಿರೋದು ಗ್ಯಾರಂಟಿ.. ಹಾಗಿದ್ರೆ, ಲಕ್ಷ್ಮೀದೇವಿಯ ಆಶೀರ್ವಾದ ಮತ್ತು ಅನುಗ್ರಹ ನೀಡುವ ಆ ಕೆಲಸಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

*ಬೆಳಗ್ಗೆ ಎದ್ದ ಬಳಿಕ, ನಿಮ್ಮ ಮನೆಯ ಮುಖ್ಯದ್ವಾರವನ್ನು ಕ್ಲೀನ್ ಮಾಡಬೇಕು. ಬಾಗಿಲಿನ ಹತ್ತಿರ ಶುಭ್ರಮಾಡಿ, ನೀರಿನಿಂದ ಕ್ಲೀನ್ ಮಾಡಿ, ರಂಗೋಲಿ ಹಾಕಬೇಕು. ಅಲಂಕಾರ ಮಾಡಬೇಕು, ಇದರಿಂದ ಲಕ್ಷ್ಮೀದೇವಿಗೆ ಸಂತೋಷವಾಗುತ್ತದೆ. ಜೊತೆಗೆ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಯಾವಾಗಲೂ ನೆಲೆಸಿರುತ್ತದೆ

*ದಿನಕ್ಕೆ ಎರಡು ಸಾರಿ ಬೆಳಗ್ಗೆ ಮತ್ತು ಸಂಜೆ ಮನೆಯಿಂದ ಹೊರಗೆ ದೀಪ ಹಚ್ಚಬೇಕು. ಇದರಿಂದ ಲಕ್ಷ್ಮೀದೇವಿಗೆ ಸಂತೋಷವಾಗುತ್ತದೆ. ಈ ಮೂಲಕ ತಮ್ಮ ಭಕ್ತರ ಎಲ್ಲಾ ಆಸೆ ಕನಸುಗಳನ್ನು ಈಡೇರಿಸಿಕೊಳ್ಳಲು ದೇವಿಯ ಅನುಗ್ರಹ ಸಿಗುತ್ತದೆ. ನಿಮ್ಮ ಮನೆಯಲ್ಲಿ ಸದಾ ಹಣ ಸಂಪತ್ತು ಇರುವ ಹಾಗೆ ಆಶೀರ್ವಾದಿಸುತ್ತಾಳೆ.

*ಪ್ರತಿದಿನ ಬೆಳಗ್ಗೆ ಮನೆಯಲ್ಲಿರುವ ತುಳಸಿ ಗಿಡಕ್ಕೆ ಪೂಜೆ ಮಾಡಬೇಕು. ಹಾಗೆಯೇ ತುಳಸಿ ಗಿಡಕ್ಕೆ ನೀರನ್ನು ಕೂಡ ಅರ್ಪಿಸಬೇಕು, ಪ್ರತಿದಿನ ಸಂಜೆಯ ಸಮಯದಲ್ಲಿ ತುಳಸಿ ಗಿಡದ ಎದುರು ತುಪ್ಪದ ದೀಪ ಹಚ್ಚಬೇಕು, ಈ ರೀತಿ ಮಾಡುವುದರಿಂದ ಸಂತೋಷ ಮತ್ತು ಸಮೃದ್ಧಿ ನಿಮ್ಮ ಮನೆಯಲ್ಲಿ ನೆಲೆಸಿರುತ್ತದೆ.

*ಪ್ರತಿದಿನ ಬೆಳಗ್ಗೆ ಸೂರ್ಯದೇವನಿಗೆ ನಮಸ್ಕಾರ ಮಾಡಿ, ಈ ರೀತಿ ಮಾಡುವುದರಿಂದ ನಿಮ್ಮ ಜಾತಕವನ್ನು ಆಳುತ್ತಿರುವ ಎಲ್ಲಾ ಗ್ರಹಗಳು ಬಲಿಷ್ಠವಾಗುತ್ತದೆ ಹಾಗೆಯೇ ಮನುಷ್ಯತ ಬದುಕಿಗೆ ಶುಭ ಫಲವನ್ನು ನೀಡುತ್ತದೆ.

*ಪ್ರತಿದಿನ ಬೆಳಗ್ಗೆ ಪೂಜೆ ಮಾಡಿದ ನಂತರ ಹಣೆಗೆ ಶ್ರೀಗಂಧ ಹಚ್ಚಬೇಕು, ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿಗೆ ಸಂತೋಷವಾಗುತ್ತದೆ, ಲಕ್ಷ್ಮೀದೇವಿಯ ಆಶೀರ್ವಾದ ನಿಮಗೆ ಸಿಗುತ್ತದೆ.

Leave a Comment