Astrology: ಮದುವೆಯಲ್ಲಿ ವಧು ವರರು ಮಾಲೆ ಬದಲಾಯಿಸಿಕೊಳ್ಳೋದು ಯಾಕೆ? ಶಾಸ್ತ್ರ ಏನು ಹೇಳುತ್ತೆ ಗೊತ್ತಾ?

0 32

Astrology: ಒಂದು ಮದುವೆ ಇಬ್ಬರು ವ್ಯಕ್ತಿಗಳು ಒಂದಾಗುವ ಪ್ರಕ್ರಿಯೆ ಮಾತ್ರವಲ್ಲ, ಎರಡು ಕುಟುಂಬಗಳು ಒಂದಾಗುವ ಪ್ರಕ್ರಿಯೆ. ಮದುವೆ ಎಂದಮೇಲೆ ಕುಟುಂಬಗಳು, ಸಂಬಂಧಿಕರು, ಸ್ನೇಹಿತರು ಎಲ್ಲರೂ ಸೇರಿ ಸಂತೋಷದಿಂದ ಮದುವೆ ಶಾಸ್ತ್ರಗಳಲ್ಲಿ ಭಾಗಿಯಾಗುತ್ತಾರೆ. ನಮ್ಮ ಸಂಪ್ರದಾಯದ ಪ್ರಕಾರ ಮದುವೆಯಲ್ಲಿ ಅನೇಕ ಶಾಸ್ತ್ರಗಳನ್ನು ಮಾಡುತ್ತಾರೆ. ಅವೆಲ್ಲದರ ಒಂದು ಅರ್ಥವೂ ಇದೆ..

ಹೌದು, ಮದುವೆ ಮೂರು ದಿನ ಎಂದು ಅರಿಶಿನ ಶಾಸ್ತ್ರ ಶುರುವಾಗಿ, ವಧು ಪ್ರವೇಶದ ವರೆಗು ಸಾಕಷ್ಟು ಶಾಸ್ತ್ರಗಳಿವೆ. ಅವುಗಳಲ್ಲಿ ಹೂವಿನ ಮಾಲೆ ಬದಲಾಯಿಸುವುದು ಕೂಡ ಒಂದು ಪ್ರಮುಖವಾದ ಶಾಸ್ತ್ರ. ಇದು ಸಂತೋಷದಿಂದ ತಮಾಷೆಯಿಂದ ಕೂಡಿರುವ ಶಾಸ್ತ್ರ ಕೂಡ ಹೌದು, ಅದಷ್ಟೇ ಅಲ್ಲ, ಈ ಶಾಸ್ತ್ರದ ಹಿಂದೆ ಮಹತ್ವಪೂರ್ಣವಾದ ಅರ್ಥ ಕೂಡ ಇದೆ. ಅವುಗಳು ಏನೇನು ಎಂದು ತಿಳಿಯೋಣ..

ಮದುವೆಯ ದಿವಸ ಹುಡುಗ ಹುಡುಗಿ ಮಾಲೆಗಳನ್ನು ಬದಲಾಯಿಸಿಕೊಂಡರೆ, ಅವರಿಬ್ಬರಿಗೂ ಪರಸ್ಪರ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಒಪ್ಪಿಗೆ ಇದೆ ಎಂದು ಅರ್ಥ..ಮಾಲೆ ಹಾಕುವ ಈ ಪದ್ಧತಿ ಶುರುವಾಗಿದ್ದು, ಭಗವಾನ್ ಶಿವ ಮತ್ತು ಪಾರ್ವತಿಯ ಮದುವೆಯಿಂದ, ಪುರಾತನ ಕಾಲದಿಂದಲೂ ಸಹ ಮಾಲೆ ಬದಲಾಯಿಸಿಕೊಳ್ಳುವ ಪದ್ಧತಿ ಇದೆ. ಮಾಲೆ ಬದಲಾಯಿಸಿಕೊಳ್ಳುವುದನ್ನು ದಾಂಪತ್ಯ ಜೀವನದ ಮೊದಲ ಹೆಜ್ಜೆ ಎಂದು ಕೂಡ ಕರೆಯುತ್ತಾರೆ.

ಈ ಶಾಸ್ತ್ರ ಮಾಡಿದ ಮೇಲೆ ಏಳೇಳು ಜನ್ಮಕ್ಕೂ ವಧುವರರು ಜೊತೆಯಾಗಿರುವ ಬಂಧ ಹೊಂದುತ್ತಾರೆ. ಬಹಳ ಹಿಂದೆ ಸ್ವಯಂವರ ನಡೆಯುವಾಗ, ಹುಡುಗಿ ಹುಡುಗನ ಕೊರಳಿಗೆ ಮಾಲೆ ಹಾಕಿ, ಆ ಹುಡುಗ ತನಗೆ ಒಪ್ಪಿಗೆ ಎಂದು ತಿಳಿಸುತ್ತಿದ್ದಳು. ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಶಕ್ತಿ ಹುಡುಗಿಗೆ ಇರುತ್ತದೆ ಎನ್ನುವುದನ್ನು ಕೂಡ ಈ ಆಚರಣೆ ತಿಳಿಸುತ್ತದೆ.

Leave A Reply

Your email address will not be published.