Atal Bihari Vajpayee :ಭಾರತದ ಪ್ರಮುಖ ಬ್ರಹ್ಮಚಾರಿಗಳ ದೊಡ್ಡ ಪಟ್ಟಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರೂ ಇದ್ದಾರೆ. ವಾಜಪೇಯಿ ಮದುವೆ ಆಗದೇ ಇರಲು ನಿರ್ದಿಷ್ಟ ಕಾರಣಗಳಿಲ್ಲ. ಅವರ ಖಾಸಗಿ ಬದುಕಿನ ಬಗ್ಗೆ ಹೆಚ್ಚೇನೂ ಪ್ರಚಾರಗಳಾಗಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತ ಹಾಗೂ ಪ್ರಚಾರಕರಾದ ಕಾರಣದಿಂದ ಸ್ವಾಭಾವಿಕವಾಗಿ ವಾಜಪೇಯಿ ಮದುವೆ ಆಗುವ ಗೋಜಿಗೆ ಹೋಗಲಿಲ್ಲ ಎಂಬ ಮಾತಿದೆ. 2002ರಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಮಾಧ್ಯಮಗಳು ಮದುವೆಯ ವಿಚಾರವನ್ನು ಕೆದಕಿದ್ದವು. ಆಗ ಅವರು ಕೊಟ್ಟ ಉತ್ತರ: “ಮದುವೆಯಾಗಲು ನನಗೆ ಪುರುಸೊತ್ತು ಇರಲಿಲ್ಲ.”
ತೆಲುಗು ಕಿರುತೆರೆಯಲ್ಲಿ ಹೊಸ ದಾಖಲೆ ಬರೆದ ಕಾಂತಾರ: ತೆಲುಗು ರಾಜ್ಯಗಳಲ್ಲಿ ಅಬ್ಬರಿಸಿದ ಕಾಂತಾರ
ಇದೆಲ್ಲದರ ಜೊತೆ ಅವರ ಜೀವನದಲ್ಲಿ ಅವಿವಾಹಿತ ‘ಸಂಸಾರ’ದ ಗಟ್ಟಿ ಎಳೆಯೂ ಇದೆ. ರಾಜಕುಮಾರಿ ಕೌಲ್ ಎಂಬ ಮಹಿಳೆಯೊಂದಿಗೆ ವಾಜಪೇಯಿ ಹೊಂದಿದ್ದ ಸಂಬಂಧದ ಬಗ್ಗೆ ಕತೆಗಳಿವೆ. 2014ರಲ್ಲಿ ರಾಜಕುಮಾರಿ ಕೌಲ್ ನಿಧನವಾಗುವವರೆಗೂ ಅವರಿಬ್ಬರೂ ದಶಕಗಳ ಕಾಲ ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಿದ್ದರು. ಆದರೆ, ಇವರ ಸಂಬಂಧ ಯಾವ ಸ್ವರೂಪದ್ದು ಎಂಬುದು ಮಾತ್ರ ಎಲ್ಲಿಯೂ ವ್ಯಕ್ತವಾಗಲಿಲ್ಲ.

ರಾಜಕುಮಾರಿ ಕೌಲ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಇಬ್ಬರೂ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿರುವ ವಿಕ್ಟೋರಿಯಾ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು. ವಾಜಪೇಯಿ ಅವರು ಆಗಲೇ ಕೌಲ್ ಅವರನ್ನ ಪ್ರೀತಿಸುತ್ತಿದ್ದರೆಂಬ ಮಾತಿದೆ. ಆದರೆ, ಅವರ ಆಗಿನ ಪರಿಚಯ ಕಾಲೇಜು ಶಿಕ್ಷಣ ಮುಗಿಯುವವರೆಗೂ ಮಾತ್ರವಿತ್ತು. ರಾಜಕುಮಾರಿ ಮುಂದೆ ದೆಹಲಿಯ ರಾಮದಾಸ್ ಕಾಲೇಜಿನ ಪ್ರೊ| ಬಿ.ಎನ್. ಕೌಲ್ ಅವರನ್ನ ಮದುವೆಯಾಗಿ ಮಿಸೆಸ್ ಕೌಲ್ ಎನಿಸುತ್ತಾರೆ. ಬಿ.ಎನ್. ಕೌಲ್ ಅವರಿಗೂ ವಾಜಪೇಯಿ ಅವರ ಪರಿಚಯವಿರುತ್ತದೆ. ಈ ಹಿನ್ನೆಲೆಯಲ್ಲಿ ರಾಜಕುಮಾರಿ ಅವರನ್ನು ವಾಜಪೇಯಿ ಮತ್ತೊಮ್ಮೆ ಭೇಟಿಯಾಗುವ ಅವಕಾಶ ಸಿಗುತ್ತದೆ. ಅಲ್ಲಿಂದ ಕೌಲ್ ಕುಟುಂಬದ ಜೊತೆ ವಾಜಪೇಯಿ ಒಡನಾಟ ಹೆಚ್ಚೆಚ್ಚು ಆಪ್ತಗೊಳ್ಳುತ್ತಾ ಹೋಗುತ್ತದೆ. ಕೌಲ್ ಕುಟುಂಬಕ್ಕೆ ವಾಜಪೇಯಿ ಮೂರನೇ ಸದಸ್ಯರೆನಿಸುತ್ತಾರೆ.

ಮುಂದೆ, ಪ್ರೊ| ಬಿ.ಎನ್. ಕೌಲ್ ಅವರು ಮೃತಪಟ್ಟಾಗ ವಾಜಪೇಯಿ ಅವರು ಕೌಲ್ ಕುಟುಂಬವನ್ನು ತಾವೇ ಸಲಹುವ ಜವಾಬ್ದಾರಿ ಹೊರುತ್ತಾರೆ. ವಾಜಪೇಯಿ ಅವರ ದತ್ತುಪುತ್ರ ನಮಿತಾ ಅವರಿಗೆ ರಾಜಕುಮಾರಿ ಅವರು ‘ತಾಯಿ’ ಆಗುತ್ತಾರೆ. ರಾಜಕುಮಾರಿ ಕೌಲ್ ಮತ್ತವರ ಪುತ್ರಿ ನಾನಿ ಹಾಗೂ ನಮಿತಾ ಅವರೆಲ್ಲರನ್ನೂ ವಾಜಪೇಯಿ ತಮ್ಮ ಮನೆಯಲ್ಲೇ ಇರಿಸಿಕೊಳ್ಳುತ್ತಾರೆ. ಈ ಸಂಬಂಧ ಕೊನೆಯವರೆಗೂ ಉಳಿದುಕೊಳ್ಳುತ್ತದೆ. ವಾಜಪೇಯಿ ಪ್ರಧಾನಿಯಾಗಿದ್ದಾಗ, ಪಿಎಂಒ ಕಚೇರಿಯಲ್ಲಿ ಅವರ ಅಳಿಯನದ್ದೇ ಆಡಳಿತವಿತ್ತು ಎಂಬ ಮಾತಿದೆ. ನಮಿತಾ ಅವರ ಪತಿ ರಂಜನ್ ಭಟ್ಟಾಚಾರ್ಯ ಅವರು ಸರಕಾರದಲ್ಲಿ ಪ್ರಭಾವಿ ವ್ಯಕ್ತಿ ಎನಿಸಿದ್ದರು.
ರಾಜಕುಮಾರಿ ಕೌಲ್ ಮತ್ತವರ ಮಕ್ಕಳು ಯಾವತ್ತೂ ಕೂಡ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಮಾಧ್ಯಮಗಳಲ್ಲಿ ಮಾತನಾಡಿದ್ದಿಲ್ಲ. ಹೀಗಾಗಿ, ವಾಜಪೇಯಿ ಅವರ ಖಾಸಗಿ ಬದುಕು ಮತ್ತು ಸಂಸಾರದ ಬಗ್ಗೆ ಸಾರ್ವಜನಿಕವಾಗಿ ಹೆಚ್ಚು ಮಾಹಿತಿ ಲಭ್ಯವಿಲ್ಲ. ರಾಜಕುಮಾರಿ ಕೌಲ್ ಅವರನ್ನ ವಾಜಪೇಯಿ ಇಟ್ಟುಕೊಂಡಿದ್ದಾರೆ ಎಂಬ ಟೀಕೆಗಳು ಆಗಲೂ ಬಂದಿದ್ದವು. ವಾಜಪೇಯಿ ಅವರ ಕಟು ಟೀಕಾಕಾರರಲ್ಲೊಬ್ಬರೆನಿಸಿದ್ದ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಸಾಕಷ್ಟು ವೈಯಕ್ತಿಕ ಟೀಕೆಗಳನ್ನ ಮಾಡಿದ್ದರು. ವಾಜಪೇಯಿ ಅವಿವಾಹಿತರಾಗಿದ್ದರೂ ವೈವಾಹಿಕ ಸುಖಗಳನ್ನ ಉಂಡಿದ್ದರು. ಸಾಕುಪುತ್ರಿ ಎಂದು ಕರೆಯಲಾಗುವ ನಮಿತಾ ಭಟ್ಟಾಚಾರ್ಯ ವಾಸ್ತವವಾಗಿ ವಾಜಪೇಯಿ ಅವರ ನಿಜವಾದ ಪುತ್ರಿಯೇ ಆಗಿದ್ದಾರೆ ಎಂದು ಸ್ವಾಮಿ ಬಹಳಷ್ಟು ಬಾರಿ ಆರೋಪಗಳನ್ನ ಮಾಡಿದ್ದರು.
ಈ ರಾಶಿಯವರು ಜೀವನದಲ್ಲಿ ತುಂಬಾ ಶಿಸ್ತಿನ ಜೀವನವನ್ನು ನಡೆಸುತ್ತಾರೆ!
ಆದರೆ, Atal Bihari Vajpayee ವಾಜಪೇಯಿ ಆಗಲೀ, ಕೌಲ್ ಆಗಲೀ, ನಮಿತಾ ಅವರಾಗಲೀ ಈ ಬಗ್ಗೆ ವ್ಯಗ್ರಗೊಂಡಿದ್ದಿಲ್ಲ. ಇಂತಹ ಟೀಕೆಗಳಿಗೆಲ್ಲಾ ಉತ್ತರ ಕೊಡುವ ಅಗತ್ಯ ಇಲ್ಲ ಎಂದೇ ಮಿಸೆಸ್ ಕೌಲ್ ಹೇಳುತ್ತಿದ್ದರು. ಆದರೆ, ಇವರ ಸಂಬಂಧಕ್ಕೆ ಒಂದು ಸ್ವರೂಪ ಅಥವಾ ಹೆಸರು ಕೊಡುವ ಕೆಲಸ ಇವರಿಂದ ಆಗಲಿಲ್ಲ ಎಂಬುದೂ ನಿಜ.