Avinash Shetty: ಬಿಗ್ ಬಾಸ್ ಶೋನಲ್ಲಿ ಅವಿನಾಶ್ ಶೆಟ್ಟಿ ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ?

0 14

Avinash Shetty: ಈ ಬಾರಿ ಬಿಗ್ ಬಾಸ್ ಮನೆಗೆ ತುಳು ಚಿತ್ರರಂಗದ ನಟ ಅವಿನಾಶ್ ಶೆಟ್ಟಿ ಎಂಟ್ರಿ ಕೊಟ್ಟಿದ್ದರು. 50 ದಿನಗಳ ಪ್ರಯಾಣದ ನಂತರ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು. ಬಿಗ್ ಮನೆಯೊಳಗೆ ಇವರು ಇದ್ದಿದ್ದು ಸ್ವಲ್ಪ ದಿನವೇ ಆದರೂ ಒಳ್ಳೆಯ ಮನರಂಜನೆ ಕೊಟ್ಟಿದ್ದರು. ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದರು. ಇದೀಗ ಇವರಿಗೆ ಬಿಗ್ ಬಾಸ್ ಇಂದ ಸಿಕ್ಕ ಸಂಭಾವನೆ ಎಷ್ಟು ಎನ್ನುವ ವಿಷಯ ವೈರಲ್ ಆಗಿದೆ.

ಇತ್ತೀಚಿಗೆ ಇವರು ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು, ಅದರಲ್ಲಿ ಬಿಗ್ ಬಾಸ್ ಮೂಲಕ ಎಷ್ಟು ಸಂಭಾವನೆ ಸಿಕ್ಕಿತು ಎಂದು ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಉತ್ತರ ಕೊಟ್ಟಿದ್ದಾರೆ ನಟ ಅವಿನಾಶ್.
“ಬಿಗ್ ಬಾಸ್ ಶೋ ಇಂದ ನನಗೆ ಸಿಗೋ ಸಂಭಾವನೆ ಎಷ್ಟು, ಅಥವಾ ಎಷ್ಟು ಸಿಗಲ್ಲ ಅನ್ನೋದರ ಬಗ್ಗೆ ಯಾವ ನಿರೀಕ್ಷೆಯು ಇರಲಿಲ್ಲ. ಸಂಭಾವನೆ ಬಗ್ಗೆ ಯೋಚನೆ ಕೂಡ ಮಾಡಿರಲಿಲ್ಲ..

ಆ ಶೋ ಇಂದ ನನಗೆ ಸಿಗೋ ಸಂಭಾವನೆಗಿಂತ, ಬಿಗ್ ಬಾಸ್ ಶೋ ನಲ್ಲಿ ನನಗೆ ಅವಕಾಶ ಸಿಗುವುದು ಮುಖ್ಯ ಆಗಿತ್ತು. ನನಗೂ ಕಮಿಟ್ಮೆಂಟ್ ಇದೆ, ಪ್ರತಿ ತಿಂಗಳು ಇಎಂಐ ಕಟ್ಟಬೇಕು, ಹಾಗಾಗಿ ಎಲ್ಲಾ ಕೆಲಸಗಳನ್ನ ಬಿಟ್ಟು ಬಿಗ್ ಬಾಸ್ ಮನೆಯಲ್ಲಿ ಇರಬೇಕು ಅಂದ್ರೆ ಇಎಂಐ ಕಟ್ಟುವಷ್ಟು ಹಣ ಆದ್ರೂ ಕೊಡಬೇಕು ಅಂತ ಡಿಮ್ಯಾಂಡ್ ಮಾಡಿದ್ದೆ.

ನಾನು ಕೇಳಿಕೊಂಡಷ್ಟು ಹಣವನ್ನು ಬಿಗ್ ಬಾಸ್ ಅವರು ಗೌರವಯುತವಾಗಿ ಕೊಟ್ಟಿದ್ದಾರೆ. ನನಗೆ ತುಂಬಾ ಹಣ ಸಿಕ್ಕಿಲ್ಲ. ಆದರೆ ಬಿಗ್ ಬಾಸ್ ಕಡೆಯಿಂದ ಸಿಕ್ಕಿರೊ ಹಣ ನನಗೆ ಖುಷಿ ನೀಡಿದೆ..” ಎಂದು ಹೇಳಿದ್ದಾರೆ ಅವಿನಾಶ್ ಶೆಟ್ಟಿ.

Leave A Reply

Your email address will not be published.