Ayodhye: ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ಕನ್ನಡದ ಈ ಸ್ಟಾರ್ ಗೆ ಮಾತ್ರ ಆಹ್ವಾನ ಸಿಕ್ಕಿದೆ! ಯಾರು ಗೊತ್ತಾ ಆ ಸ್ಟಾರ್?

0 1

Ayodhye: ಅಯೋಧ್ಯೆಯಲ್ಲಿ ರಾಮ ಮಂದಿರ ಸ್ಥಾಪನೆ ಆಗುತ್ತಿರುವ ವಿಚಾರ ನಮಗೆಲ್ಲಾ ಗೊತ್ತೇ ಇದೆ. ಈ ದೇವಸ್ಥಾನ, ಪುಣ್ಯಕ್ಷೇತ್ರ ಯಾವಾಗ ಲೋಕಾರ್ಪಣೆ ಆಗುತ್ತದೆ ಎಂದು ನಮ್ಮ ದೇಶದ ಜನರು ಕಾಯುತ್ತಿದ್ದಾರೆ. ಅದಕ್ಕೀಗ ಸಮಯ ಕೂಡಿಬಂದಿದ್ದು, 2024ರ ಜನವರಿ 22ರಂದು ಅಯೋಧ್ಯೆ ರಾಮಮಂದಿರದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳ ಪ್ರಕಾರ ಮಾಹಿತಿ ಸಿಕ್ಕಿದೆ.

ದೇವಸ್ಥಾನದ ಕೆಳಹಂತದ ಮಹಡಿಯ ನಿರ್ಮಾಣ ಬಹುತೇಕ ಪೂರ್ಣವಾಗಿದ್ದು, ಲೋಕಾರ್ಪಣೆ ಕಾರ್ಯ ನಡೆಯಲಿದೆ. ಗರ್ಭಗುಡಿಯಲ್ಲಿ ಇಡುವ ಶ್ರೀರಾಮನ ಮೂರ್ತಿಯ ವಿಗ್ರಹದ ಕೆತ್ತನೆ ಕೂಡ ಬಹುತೇಕ ಮುಗಿದಿದೆ ಎಂದು ಹೇಳಲಾಗುತ್ತಿದೆ. ಕೆಳಮಹಡಿಯ ಗರ್ಭಗುಡಿಯಲ್ಲಿ ಮೂರ್ತಿಯ ಪ್ರತಿಷ್ಠಾಪನೆ ಹಾಗು ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ದೇಶವೇ ಕಾಯುತ್ತಿರುವ ಈ ಕಾರ್ಯಕ್ರಮದಲ್ಲಿ ಸುಮಾರು 4000 ಸಾಧುಗಳು ಭಾಗವಹಿಸಲಿದ್ದಾರೆ, ದೇವಸ್ಥಾನದ ಟ್ರಸ್ಟ್ ವತಿಯಿಂದ ಎಲ್ಲಾ ಖ್ಯಾತ ದೊಡ್ಡ ವ್ಯಕ್ತಿಗಳಿಗೆ ಆಹ್ವಾನ ಹೋಗಿದೆ ಎಂದು ಮಾಹಿತಿ ಸಿಕ್ಕಿದ್ದು, ಕನ್ನಡ ಕಲಾವಿದರಲ್ಲಿ ಆಹ್ವಾನ ಸಿಕ್ಕಿರುವುದು ಆ ಒಬ್ಬ ಕಲಾವಿದನಿಗೆ ಮಾತ್ರ. ಯಾರು ಗೊತ್ತಾ ಆ ಲಕ್ಕಿ ಹೀರೋ? ತಿಳಿಸುತ್ತೇವೆ ನೋಡಿ..

ಈ ವಿಶೇಷವಾದ ಅವಕಾಶ ಸಿಕ್ಕಿರುವುದು ಮತ್ಯಾರಿಗೂ ಅಲ್ಲ ಕಾಂತಾರ ಸಿನಿಮಾ ಮೂಲಕ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ ರಿಷಬ್ ಶೆಟ್ಟಿ ಅವರಿಗೆ. ಹೌದು, ಕನ್ನಡ ಕಲಾವಿದರಲ್ಲಿ ಆಹ್ವಾನ ಸಿಕ್ಕಿರೋದು ಇವರಿಗೆ ಮಾತ್ರ ಎನ್ನಲಾಗುತ್ತಿದೆ. ಇನ್ನು ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್, ತೆಲುಗಿನ ಚಿರಂಜೀವಿ ಅವರು, ಮಲಯಾಳಂ ನಟ ಮೋಹನ್ ಲಾಲ್, ರತನ್ ಟಾಟಾ ಅವರು ಸೇರಿದಂತೆ ಸಾಕಷ್ಟು ಗಣ್ಯ ವ್ಯಕ್ತಿಗಳಿಗೆ ಆಹ್ವಾನ ನೀಡಲಾಗಿದೆ.

Leave A Reply

Your email address will not be published.