Kannada News ,Latest Breaking News

ಇಂತವರು ಬದನೆಕಾಯಿ ತಪ್ಪದೆ ತಿಂದ್ರೆ ಪರಿಣಾಮ ಏನಾಗತ್ತೆ ಗೊತ್ತಾ?

0 3,465

Get real time updates directly on you device, subscribe now.

Badanekayi benifits : ಬದನೇಕಾಯಿ ಪೌಷ್ಟಿಕ ಭರಿತ ವಾಗಿರುವ ತರಕಾರಿಯಾಗಿದ್ದು.ಮೈಕೋ ನ್ಯೂಟ್ರಿಯೆಂಟ್ ಅಂಶಗಳಿಂದ ಶ್ರೀಮಂತವಾಗಿದೆ. ಮುಖ್ಯವಾಗಿ ಬಿಳಿ ಬದನೆಕಾಯಿ ಭಾರತದಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಈ ತರಕಾರಿಯನ್ನು ದಕ್ಷಿಣ ಮತ್ತು ಪೂರ್ವದಲ್ಲಿ ಸಾವಿರಾರು ವರ್ಷಗಳಿಂದ ಬೆಳೆಸಲಾಗುತ್ತದೆ. ಬದನೆಕಾಯಿಯಿಂದ ರುಚಿರುಚಿ ಖಾದ್ಯಗಳನ್ನು ತಯಾರು ಮಾಡಬಹುದು.

ತುಳಸಿಯ ಚಮತ್ಕಾರ! ಈ 11 ಎಲೆಗಳ ಪರಿಹಾರದಿಂದ, ನಿಮ್ಮ ಪ್ರತಿಯೊಂದು ಆಸೆಯೂ ಈಡೇರುತ್ತದೆ!

1, ಬದನೆಕಾಯಿ ಅತ್ಯುತ್ತಮವಾದ ಪೋಷಕಾಂಶವನ್ನು ಹೊಂದಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹವನ್ನು ಫ್ರೀ ರಾಡಿಕಲ್ಸ್ ಎಂಬ ಹಾನಿಕಾರಕ ವಸ್ತುವಿನ ವಿರುದ್ಧ ಹೋರಾಡುತ್ತದೆ. ಉತ್ಕರ್ಷಣ ನಿರೋಧಕ ದಲ್ಲಿ ಸಮೃದ್ಧವಾಗಿರುವ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವನೆ ಮಾಡಬೇಕು.ಇದು ಅಪಾಯಕಾರಿ ರುದ್ರರೋಗ ಕ್ಯಾನ್ಸರ್ ಕಾಯಿಲೆಯಿಂದ ರಕ್ಷಿಸುತ್ತದೆ.

2, ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಬದನೆಕಾಯಿ ಯಲ್ಲಿ ಇರುವ ಉತ್ಕರ್ಷಣ ನಿರೋಧಕ ಅಂಶವು ಹೃದಯದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಪರಿಣಾಮಕಾರಿಯಾಗಿ ರಕ್ತದ ಒತ್ತಡವನ್ನು ಸುಧಾರಿಸುತ್ತದೆ.

3, ದೇಹದಲ್ಲಿ ಸಂಗ್ರಹವಾದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ಉತ್ತೇಜಿಸುತ್ತದೆ.ಉತ್ತಮ ಆರೋಗ್ಯಕ್ಕೆ ಬದನೆಕಾಯಿಯನ್ನು ಸೇವನೆ ಮಾಡುವುದು ಉತ್ತಮ.

4,ಇನ್ನು ಮದುಮೇಹಕ್ಕೆ ಕಾರಣ ರಕ್ತದಲ್ಲಿರುವ ಸಕ್ಕರೆ ಮಟ್ಟ. ನಿಯಮಿತವಾಗಿ ಬದನೆಕಾಯಿಯನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿರುವ ಸಕ್ಕರೆಮಟ್ಟವನ್ನು ನಿಯಂತ್ರಿಸಲು ಸಹಾಯಮಾಡುತ್ತದೆ.

5, ಬದನೆಕಾಯಿಯಲ್ಲಿ ಫೈಬರ್ ಅಂಶ ಹೆಚ್ಚಾಗಿರುವುದರಿಂದ ಕರುಳಿನ ಆರೋಗ್ಯವನ್ನು ಕಾಪಾಡುವುದರ ಜೊತೆ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

6,ತೂಕ ಇಳಿಕೆ ಮಾಡಿಕೊಳ್ಳಬೇಕು ಎಂದು ಬಯಸುವವರು ತಮ್ಮ ಡಯಟ್ ಚಾರ್ಟ್ ನಲ್ಲಿ ಬದನೆಕಾಯಿಯನ್ನು ಸೇರಿಸಬಹುದು. ವಾಸ್ತವವಾಗಿ ಬದನೆಕಾಯಿಯಲ್ಲಿ ಅಪಾರವಾದ ಫೈಬರ್ ಅಂಶ ಕಡಿಮೆ ಕ್ಯಾಲೋರಿಯನ್ನು ಹೊಂದಿದೆ.

ತುಳಸಿಯ ಚಮತ್ಕಾರ! ಈ 11 ಎಲೆಗಳ ಪರಿಹಾರದಿಂದ, ನಿಮ್ಮ ಪ್ರತಿಯೊಂದು ಆಸೆಯೂ ಈಡೇರುತ್ತದೆ!

7, Badanekayi benifits ದೇಹದಲ್ಲಿ ಬದನೆಕಾಯಿ ಕೆಂಪು ರಕ್ತಕಣ ವನ್ನು ಉತ್ಪಾದನೆ ಮಾಡುವುದರಿಂದ ಗರ್ಭಿಣಿ ಸ್ತ್ರೀಯರು ನಿಸ್ಸಂಶಯವಾಗಿ ಬದನೆಕಾಯಿಯನ್ನು ಸೇವನೆ ಮಾಡಬಹುದು. ಅಷ್ಟಲ್ಲದೆ ಕಣ್ಣಿನ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಮುಖ್ಯವಾಗಿ ಬಿಳಿ ಬದನೆಕಾಯಿ ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ.

Get real time updates directly on you device, subscribe now.

Leave a comment