Kannada News ,Latest Breaking News

ಸ್ನಾನ ಮಾಡುವಾಗ ಅಪ್ಪಿತಪ್ಪಿಯೂ ಈ 3 ತಪ್ಪನ್ನು ಮಾಡಬೇಡಿ..!ಪದ್ಮ ಪುರಾಣದ ಸತ್ಯ ಇದು ನೋಡಿ!

0 443

Get real time updates directly on you device, subscribe now.

Bathing Mistakes :ಬೇಸಿಗೆಯಲ್ಲಿ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಒಂದು ಸವಾಲಿನ ಕೆಲಸ. ವಿಶೇಷವಾಗಿ ನಮ್ಮ ಚರ್ಮದ ಆರೋಗ್ಯವನ್ನು ನಾವು ರಕ್ಷಣೆ ಮಾಡಿಕೊಳ್ಳುವುದು ಎಂದರೆ ಹರಸಾಹಸ ಪಡಬೇಕು. ಬೇಸಿಗೆಯ ಬಿಸಿಲಿಗೆ ಮೈಯಿಂದ ಕಿತ್ತುಬರುವ ಬೆವರು ನಮ್ಮನ್ನು ಹಲವು ಬಾರಿ ತಣ್ಣೀರು ಸ್ನಾನ ಮಾಡುವಂತೆ ಮಾಡುತ್ತದೆ.

ಸ್ನಾನ ಮಾಡುವುದರಿಂದ ಯಾವುದೇ ಅಪಾಯವಿಲ್ಲ ನಿಜ. ಆದರೆ ಸ್ನಾನ ಮಾಡಲು ಬಳಕೆ ಮಾಡುವ ನೀರು ಯಾವ ತಾಪಮಾನ ಹೊಂದಿದೆ ಎಂಬುದು ಮುಖ್ಯವಾಗುತ್ತದೆ. ಅತಿಯಾದ ಸುಡುವ ನೀರನ್ನು ಬಳಸಿ ಸ್ನಾನ ಮಾಡುವುದರಿಂದ ನಮ್ಮ ತ್ವಚೆಗೆ ಎಷ್ಟು ಹಾನಿಯಾಗುತ್ತದೆ ಗೊತ್ತಾ?

ಇದೇ ರೀತಿಯ ಇನ್ನು ಹಲವಾರು ತಪ್ಪುಗಳನ್ನು ನಾವು ಮಾಡಿ ನಮ್ಮ ಚರ್ಮಕ್ಕೆ ಹೇಗೆ ಹಾನಿ ಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

​ದಿನದಲ್ಲಿ ಆಗಾಗ ಸ್ನಾನ ಮಾಡುವ ಅಭ್ಯಾಸ ನಿಮಗಿದೆಯೇ?

ಈಗ ಹೇಗೂ ಬೇಸಿಗೆಕಾಲ. ದೇಹದಲ್ಲಿ ಬೆವರು ಹರಿಯುವುದು ಜಾಸ್ತಿ. ಇದರಿಂದ ಮೈ ದುರ್ಗಂಧ ಬೀರುವುದು ಸಹ ಉಂಟು. ಆರೋಗ್ಯ ತಜ್ಞರು ಹೇಳುವಂತೆ ಇಂತಹ ಸಮಯದಲ್ಲಿ ಕೇವಲ ವಾರಕ್ಕೆ ಕೆಲವೊಂದು ಬಾರಿ ಸ್ನಾನ ಮಾಡುವ ಅಭ್ಯಾಸವಿಟ್ಟುಕೊಳ್ಳಬೇಕು.

ಆದರೆ ಕೆಲವರಿಗೆ ಮೈಯಲ್ಲಿ ಸ್ವಲ್ಪ ಬೆವರು ಬಂದರೂ ಸಾಕು ಆಗಲೇ ಸ್ನಾನ ಮಾಡಲು ಬಾತ್ ರೂಮ್ ಕಡೆಗೆ ಓಡಿಹೋಗುತ್ತಾರೆ. ಈ ಒಂದು ಅಭ್ಯಾಸದಿಂದ ತಮ್ಮ ತ್ವಚೆಯ ಆರೋಗ್ಯವನ್ನು ತಾವೇ ಹಾಳು ಮಾಡಿಕೊಳ್ಳುತ್ತಾರೆ ಎಂದು ಹೇಳಬಹುದು.

ದೇಹದಲ್ಲಿ ಕಂಡುಬರುವ ನೈಸಗಿಕ ಎಣ್ಣೆಯ ಅಂಶ ಇದರಿಂದ ಹಾಳಾಗುತ್ತದೆ. ಒಣ ಚರ್ಮದ ಸಮಸ್ಯೆ ಇದ್ದಕ್ಕಿದ್ದಂತೆ ಕಂಡು ಬರಲು ಪ್ರಾರಂಭವಾಗುತ್ತದೆ. ಪ್ರತಿಬಾರಿ ಸೋಪು ಹಾಕುತ್ತಾ ಅದರಲ್ಲಿರುವ ರಾಸಾಯನಿಕ ಅಂಶಗಳನ್ನು ಚರ್ಮದ ಸಣ್ಣ ಸಣ್ಣ ರಂಧ್ರಗಳಲ್ಲಿ ತಾವೇ ತುಂಬಿಕೊಳ್ಳುವ ಕೆಲಸ ಮಾಡುತ್ತಾರೆ.

ಇದರಿಂದ ದೇಹದಲ್ಲಿ ಅದರಲ್ಲೂ ಮುಖ್ಯವಾಗಿ ಚರ್ಮದ ಭಾಗದಲ್ಲಿ ಕಂಡು ಬರುವ ಒಳ್ಳೆಯ ಪೆಟ್ಟಿಗೆಗಳು ಸಹ ಹಾನಿಯಾಗುತ್ತವೆ. ಇದರಿಂದ ತ್ವಚೆಯ ಭಾಗ ಹೆಚ್ಚು ಒಡೆದುಕೊಂಡಂತೆ ಮತ್ತು ಸೀಳು ಬಿಟ್ಟಂತೆ ಆಗುತ್ತದೆ.

ಇಂತಹ ಸಮಯದಲ್ಲಿ ರಾಸಾಯನಿಕ ಅಂಶಗಳು ಚರ್ಮದ ಒಳ ಸೇರುತ್ತವೆ ಜೊತೆಗೆ ಕೆಟ್ಟ ಬ್ಯಾಕ್ಟೀರಿಯಾಗಳು ಸಹ ಸೇರಿಕೊಳ್ಳುವುದರಿಂದ ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

​ತ್ವಚೆಗೆ ಸೂಕ್ತವಾಗುವ ಸೋಪು ಆಯ್ಕೆ ಮಾಡಿಕೊಳ್ಳದೇ ಇರುವುದು

ಈಗಿನ ಮಾರುಕಟ್ಟೆಯಲ್ಲಿ ಮಕ್ಕಳಿಗೆ, ವಯಸ್ಕರಿಗೆ ಮತ್ತು ವೃದ್ಧರಿಗೆ ಅನುಕೂಲವಾಗುವಂತೆ ಸೋಪು ತಯಾರಿಕಾ ಕಂಪನಿಗಳು ತಮ್ಮ ಉತ್ಪನ್ನಗಳನ್ನು ದಿನಕ್ಕೊಂದು ಶೈಲಿಯಲ್ಲಿ ಮತ್ತು ವಿನ್ಯಾಸದಲ್ಲಿ ಬಿಡುಗಡೆ ಮಾಡುತ್ತಿವೆ.

ಆದರೆ ಜಾಹೀರಾತಿನಲ್ಲಿ ನೀಡಿದ ವಿಚಾರಗಳಿಗೆ ಅನುಗುಣವಾಗಿ ಸೋಪುಗಳು ಕೆಲಸ ಮಾಡುತ್ತವೆ ಎಂದು ಹೇಳಲು ಬರುವುದಿಲ್ಲ. ಇದರಿಂದ ಒಳ್ಳೆಯ ಬ್ಯಾಕ್ಟೀರಿಯಾಗಳು ಹಾನಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದರ ನಂತರದಲ್ಲಿ ಚರ್ಮದ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳು ಕಂಡುಬರಲು ಪ್ರಾರಂಭವಾಗುತ್ತವೆ. ವಿಶೇಷವಾಗಿ ತುಂಬಾ ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಇದರ ಪ್ರಭಾವ ಅತಿ ಹೆಚ್ಚು ಎಂದು ಹೇಳಬಹುದು.

ಕೆಲವು ಬಗೆಯಲ್ಲಿ ಬಳಕೆ ಮಾಡುವ ಎಸೆನ್ಶಿಯಲ್ ಆಯಿಲ್, ಸ್ನಾನ ಮಾಡುವ ಸೋಪುಗಳು, ಸುಗಂಧ ದ್ರವ್ಯಗಳು ಚರ್ಮದ ನಾಯಾಲಯ ತಮ್ಮ ರಾಸಾಯನಿಕ ಪ್ರಭಾವದಿಂದ ಹೆಚ್ಚು ಕಿರಿಕಿರಿಯನ್ನು ಉಂಟುಮಾಡಬಹುದು ಮತ್ತು ಚರ್ಮದ ಅಲರ್ಜಿಗೆ ಕಾರಣ ಆಗಬಹುದು.

​ಮೈ ಒರೆಸಿಕೊಳ್ಳುವ ಟವೆಲ್ ಆಗಾಗ ಬದಲಿಸದಿರುವುದು

ಈಗಿನ ಕಾಲದಲ್ಲಿ ಒಬ್ಬರು ಬಳಸುವ ಟವೆಲ್ ಮತ್ತೊಬ್ಬರು ಬಳಸುವುದಿಲ್ಲ. ಕಾರಣ ಸೂಕ್ಷ್ಮ ಚರ್ಮ ಮತ್ತು ಸೋಂಕುಗಳ ಹಾವಳಿ. ಒಂದು ಟವಲನ್ನು ಸ್ವತಹ ನೀವೇ ಹಲವು ದಿನಗಳ ಕಾಲ ಬಳಸುವ ಹಾಗಿಲ್ಲ.

ಅವುಗಳನ್ನು ಸಹ ಸ್ವಚ್ಛ ಮಾಡಿ ಆಗಾಗ ಬದಲಾಯಿಸಬೇಕು. ಒದ್ದೆಯಾದ ಟವೆಲ್ ಕೆಟ್ಟ ಬ್ಯಾಕ್ಟೀರಿಯ ಮತ್ತು ಫಂಗಸ್ ಗಳಿಗೆ ಅಭಿವೃದ್ಧಿಯಾಗಲು ದಾರಿಮಾಡಿಕೊಡುತ್ತದೆ. ನೀವು ಸ್ನಾನ ಮಾಡಿದ ನಂತರ ಮೈ ಒರೆಸಿಕೊಂಡ ಟವೆಲನ್ನು ಹೊರಗಡೆ ಬಿಸಿಲಿನಲ್ಲಿ ಒಣಗಿಹಾಕಿ.

ಆ ನಂತರದ ದಿನದಲ್ಲಿ ಇದನ್ನು ನೀವು ಸ್ವಚ್ಛ ಮಾಡಿಕೊಳ್ಳುವ ಸಂದರ್ಭದಲ್ಲಿ ಆಂಟಿಸೆಪ್ಟಿಕ್ ದ್ರಾವಣ ಅಥವಾ ಡಿಟರ್ಜೆಂಟ್ ಪೌಡರ್ ಹಾಕಿ ಸ್ವಚ್ಛ ಮಾಡಿಕೊಳ್ಳಿ.

ಒಂದು ವೇಳೆ ನಿಮಗೆ ಹುಷಾರು ತಪ್ಪಿದಂತಹ ಸಂದರ್ಭದಲ್ಲಿ ನೀವು ಬಳಸುವ ಇನ್ನೊಬ್ಬರು ಬಳಸದಂತೆ ನೋಡಿಕೊಳ್ಳಿ. ನೀವು ಸಹ ಬೇರೆಯವರ ಟವೆಲ್ ಬಳಸಬೇಡಿ ಜೊತೆಗೆ ನಿಮ್ಮ ಟವೆಲನ್ನು ಆಗಾಗ ಸ್ವಚ್ಛ ಮಾಡಿಕೊಳ್ಳುವ ಕಡೆಗೆ ಪ್ರಯತ್ನಿಸಿ.

​ಮೈ ಉಜ್ಜುವ ಬ್ರಶ್ ಆಗಾಗ ಸ್ವಚ್ಛ ಮಾಡಿ

ನೀವು ಬಬಲ್ ಬಾತ್ ಮಾಡುವ ಸಂದರ್ಭದಲ್ಲಿ ಬಳಸುವ ಲೂಫಾ ಅಥವಾ ಬ್ರಷ್ ನಲ್ಲಿ ನಿಮ್ಮ ದೇಹದ ಸಾಕಷ್ಟು ಸತ್ತ ಜೀವಕೋಶಗಳು ಮತ್ತು ಕೊಳೆಯ ಅಂಶ ಶೇಖರಣೆ ಆಗಿರುತ್ತದೆ. ಹಾಗಾಗಿ ಇದನ್ನು ಆಗಾಗ ಸ್ವಚ್ಛ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು.

ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕೂಡ ಇದರಲ್ಲಿ ಹೆಚ್ಚಾಗಿ ನಡೆಯುತ್ತದೆ. ಹಾಗಾಗಿ ಇದನ್ನು ಬಿಸಿಲಿನಲ್ಲಿ ಸುಮಾರು ಹತ್ತರಿಂದ ಹದಿನೈದು ನಿಮಿಷಗಳು ಇರಲು ಬಿಡಿ.

ಆನಂತರದಲ್ಲಿ ಮತ್ತೊಮ್ಮೆ ನೀರಿನಲ್ಲಿ ಚೆನ್ನಾಗಿ ತೊಳೆದು ಇದನ್ನು ನೀವು ಬಳಕೆ ಮಾಡಬಹುದು. ಸ್ನಾನ ಮಾಡುವಾಗ ಒಬ್ಬರು ಬಳಸುವ ಬ್ರಷ್ ಸಹ ಮತ್ತೊಬ್ಬರು ಬಳಕೆ ಮಾಡಬಾರದು. ಪ್ರತಿ ಎರಡು ತಿಂಗಳಿಗೊಮ್ಮೆ ಹೊಸ ಬ್ರಷ್ ಖರೀದಿ ಮಾಡಿದರೆ ಉತ್ತಮ.

​ಶವರ್ ಸ್ವಚ್ಛಗೊಳಿಸದೆ ಇರುವುದು

ನಾವು ಭಾರತೀಯರಾಗಿ ಸ್ವಚ್ಛತೆಗೆ ಆದ್ಯತೆ ಕೊಡುವುದು ತುಂಬಾ ಮುಖ್ಯ. ನಾವು ಸ್ನಾನ ಮಾಡುವಾಗ ಬಳಕೆ ಮಾಡುವ ಪ್ರತಿಯೊಂದು ವಸ್ತುಗಳನ್ನು ನಾವು ಅತ್ಯಂತ ಸ್ವಚ್ಛವಾಗಿ ಕಾಪಾಡಿಕೊಳ್ಳಬೇಕು.

ಕೊಳಕು ನಲ್ಲಿಯಿಂದ ಕೊಳಕು ನೀರನ್ನು ಕುಡಿಯುವುದಿಲ್ಲ ಎಂದ ಮೇಲೆ ಸ್ನಾನ ಮಾಡುವಾಗ ಏಕೆ ಸ್ವಚ್ಛತೆಗೆ ಬಿಗುಮಾನ ಅಲ್ಲವೇ?

ಅದರಲ್ಲೂ ಕೆಲವೊಂದು ಏರಿಯಾಗಳಲ್ಲಿ ಹಾರ್ಡ್ ವಾಟರ್ ಪ್ರಭಾವ ಹೆಚ್ಚಾಗಿರುತ್ತದೆ. ಹೀಗಾಗಿ ಮನೆಯಲ್ಲಿರುವ ಶವರ್ ಅಥವಾ ನಲ್ಲಿ ಭಾಗಗಳು ನೀರಿನಿಂದಲೇ ಹದಗೆಟ್ಟು ಹೋಗಿರುತ್ತವೆ.

ಇವುಗಳಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಸಹ ನಾವು ಕಾಣಬಹುದು. ಹಾಗಾಗಿ ಪ್ರತಿ ಎರಡು ವಾರಗಳಿಗೊಮ್ಮೆ ನಿಮ್ಮ ಶವರ್ ಹೆಡ್ ಸ್ವಚ್ಛ ಗೊಳಿಸುವುದನ್ನು ಮರೆಯಬೇಡಿ.

Get real time updates directly on you device, subscribe now.

Leave a comment