Beauty Tips: ಮುಖದ ಅನಗತ್ಯ ಕೂದಲು ಇದೆಯಾ? ಕೆಮಿಕಲ್ ಬಳಸದೆ ಅಕ್ಕಿ ಹಿಟ್ಟಿನಿಂದ ಈ ರೀತಿ ಮಾಡಿ ಸಾಕು

0 51

Beauty Tips: ಮಹಿಳೆಯರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ತ್ವಚೆಯ ಸೌಂದರ್ಯ ಅವರಿಗೆ ತುಂಬಾ ಮುಖ್ಯ. ಮಹಿಳೆಯರು ಎಷ್ಟೇ ಹುಷಾರಾಗಿ ಇದ್ದರು ಕೂಡ ಕೆಲವೊಮ್ಮೆ ಮುಖದ ಮೇಲೆ ಕೂದಲು ಬೆಳೆಯುತ್ತದೆ. ಆ ರೀತಿ ಆದಾಗ ತ್ರೆಡಿಂಗ್ ಅಥವಾ ಇನ್ನಿತರ ಕೆಲಸಗಳನ್ನು ಮಾಡುತ್ತಾರೆ, ಅಥವಾ ಕೆಮಿಕಲ್ ಬಳಕೆ ಮಾಡುತ್ತಾರೆ. ಆದರೆ ಹಾಗೆಲ್ಲಾ ಮಾಡದೆ, ಮನೆಯಲ್ಲಿರುವ ಅಕ್ಕಿಹಿಟ್ಟನ್ನು ಬಳಸಿ, ಮುಖದ ಮೇಲಿನ ಕೂದಲನ್ನು ಹೋಗಿಸಬಹುದು.

ಅಕ್ಕಿಹಿಟ್ಟಿನಿಂದ ಏನು ಮಾಡಬೇಕು ಎಂದರೆ, ಒಂದು ಬೌಲ್ ಗೆ 2 ಸ್ಪೂನ್ ಅಕ್ಕಿ ಹಿಟ್ಟು, 1 ಸ್ಪೂನ್ ಜೇನುತುಪ್ಪ, 1 ಸ್ಪೂನ್ ಮೊಸರು ಇದಿಷ್ಟನ್ನು ಹಾಕಿ ಪೇಸ್ಟ್ ಮಾಡಿ. ನಿಮ್ಮ ಮುಖದಲ್ಲಿ ಎಲ್ಲಿ ಕೂದಲು ಇದೆಯೋ ಅಲ್ಲಿ ಈ ಪೇಸ್ಟ್ ಹಚ್ಚಿ, 15 ರಿಂದ 20 ನಿಮಿಷಗಳ ಕಾಲ ಬಿಡಿ, ಬಳಿಕ ಈ ಪೇಸ್ಟ್ ಇಂದ ನಿಧಾನವಾಗಿ ಮುಖವನ್ನು ಮಸಾಜ್ ಮಾಡಿ. ಬಳಿಕ ಉಗುರು ಬೆಚ್ಚಗಿರುವ ನೀರಿನಿಂದ ಮುಖವನ್ನು ನೀಟ್ ಆಗಿ ವಾಶ್ ಮಾಡಿ.

ವಾರದಲ್ಲಿ 2 ರಿಂದ 3 ಸಾರಿ ಈ ಪರಿಹಾರವನ್ನು ಟ್ರೈ ಮಾಡಿ, ಕ್ರಮೇಣ ನಿಮ್ಮ ಮುಖದಿಂದ ಕೂದಲು ಕಡಿಮೆ ಆಗುತ್ತದೆ. ಆದರೆ ಕೆಲವರಿಗೆ ಇದು ಅಲರ್ಜಿ ಆಗಬಹುದು. ಹಾಗಾಗಿ ಮೊದಲಿಗೆ ನೀವು ನಿಮ್ಮ ಕೈಗಳ ಮೇಲೆ ಈ ಪೇಸ್ಟ್ ಹಚ್ಚಿ ಬಳಸಿ, ಏನು ಆಗಲಿಲ್ಲ ಎಂದರೆ ನಂತರ ಮುಖಕ್ಕೆ ಹಚ್ಚಿ.

Leave A Reply

Your email address will not be published.