ನಾವೆಲ್ಲ ಸಾಮಾನ್ಯವಾಗಿ ಮೈ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಹಲವಾರು ಉತ್ಪನ್ನಗಳನ್ನು , ಕ್ರೀಂ ಗಳನ್ನು ಬಳಸುತ್ತೇವೆ ಆದರೆ ಇದು ತಾತ್ಕಾಲಿಕ.ಬರಿ ಯಾವುದೇ ಪ್ರಾಡಕ್ಟ್ ಬಳಸಿದರೆ ಸಾಲದು ನಾವು ಸೇವಿಸುವ ಆಹಾರಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಇದು ನಮಗೆಲ್ಲರಿಗೂ ತಿಳಿದಿರುವ ಹಾಗೆ ಉತ್ತಮ ತ್ವಚೆಗೆ ನೀರು ಕೂಡ ಬಹಳ ಮುಖ್ಯ.ಪ್ರತಿನಿತ್ಯ 7 ರಿಂದ 8 ಲೋಟ ನೀರು ಕುಡಿಯುವುದರಿಂದ ಚರ್ಮದ ಆರೋಗ್ಯ ಚೆನ್ನಾಗಿರುತ್ತದೆ.ನೆರಿಗೆಗಳು ಬೇಗನೆ ಮೂಡುವುದಿಲ್ಲ , ಮುಖದ ಕಾಂತಿ ಹೆಚ್ಚಾಗುತ್ತದೆ ಮೊಡವೆಗಳು ದೂರವಾಗುತ್ತದೆ ಆದರೆ ತಣ್ಣೀರನ್ನು ಕುಡಿಯುವುದಕ್ಕಿಂತ ಬಿಸಿನೀರಿನಿಂದ ಅಧಿಕಲಾಭ ದೊರೆಯುತ್ತದೆ.
ಹಾಗಾದ್ರೆ ಬಿಸಿ ನೀರಿನಿಂದ ನಮ್ಮ ಚರ್ಮಕ್ಕೆ ಏನೆಲ್ಲ ಲಾಭಗಳು ದೊರೆಯುತ್ತದೆ ತಿಳಿಯೋಣ ಬನ್ನಿ.
ಮೊಡವೆಯನ್ನು ದೂರಮಾಡುತ್ತದೆ ಮೊಡವೆ ಸಮಸ್ಯೆಯಿರುವವರು ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ ಹಾಗೂ ರಾತ್ರಿ ಮಲಗುವ ಮೊದಲು ಬಿಸಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು.ಬಿಸಿನೀರು ದೇಹದ ತಾಪಮಾನವನ್ನು ಹೆಚ್ಚಿಸಿ ಬೆವರು ಬರುವಂತೆ ಮಾಡುತ್ತದೆ ಇದರಿಂದ ದೇಹದಲ್ಲಿನ ವಿಷಕಾರಿ ಅಂಶವು ಹೊರಗೆ ಹೋಗುತ್ತದೆ ಮೊಡವೆ ಸಮಸ್ಯೆ ಬೇಗನೆ ನಿವಾರಣೆಯಾಗುತ್ತದೆ.
ಚರ್ಮವನ್ನು ಇದು ಮಾಯಿಶ್ಚರೈಸರ್ ಮಾಡುತ್ತದೆ.ಪ್ರತಿನಿತ್ಯ ಬಿಸಿ ನೀರು ಕುಡಿದರೆ ಅದರಿಂದ ದೇಹವು ಹೈಡ್ರೇಟ್ ಆಗಿರುತ್ತದೆ.ಡ್ರೈ ಸ್ಕಿನ್ ಸಮಸ್ಯೆ ಇರುವವರಿಗೆ ಇದು ಅದ್ಭುತವಾಗಿ ಕೆಲಸ ಮಾಡುತ್ತದೆ.ಒಣ ಮತ್ತು ಕಿತ್ತುಬರುವ ಚರ್ಮದ ಸಮಸ್ಯೆಯಿಂದ ದೂರ ಉಳಿಯಬಹುದು.
ಅಕಾಲಿಕವಾಗಿ ವಯಸ್ಸಾಗುವುದನ್ನು ತಪ್ಪಿಸುತ್ತದೆ ದಿನನಿತ್ಯವೂ ಖಾಲಿ ಹೊಟ್ಟೆಗೆ ಬಿಸಿ ನೀರು ಕುಡಿದರೆ ಅದರಿಂದ ಚರ್ಮವು ತಾಜಾ ಮತ್ತು ಯವ್ವನ ಯುತವಾಗಿ ಕಾಣಿಸುತ್ತದೆ.ಬಿಸಿನೀರು ದೇಹವನ್ನು ಶುಚಿಗೊಳಿಸುತ್ತದೆ ಮತ್ತು ಚರ್ಮದ ಅಂಗಾಂಗಗಳನ್ನು ಸರಿಪಡಿಸು ವಂತೆ ಮಾಡುತ್ತದೆ ಇದರಿಂದ ಫ್ರಿ ರ್ಯಾಡಿಕಲ್ಸ್ ನಿಂದ ಆಗುವ ಹಾನಿಯನ್ನು ತಪ್ಪಿಸುತ್ತದೆ.ಅಕಾಲಿಕ ವಯಸ್ಸಾಗುವುದನ್ನು ತಪ್ಪಿಸಲು ಇದು ದೇಹದಲ್ಲಿ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ ಇದರಿಂದ ಚರ್ಮವು ನಯ ಮತ್ತು ನೆರಿಗೆ ಮುಕ್ತವಾಗುತ್ತದೆ.
ಚರ್ಮದ ಸೋಂಕಿನಿಂದ ರಕ್ಷಣೆ ಬಿಸಿನೀರು ದೇಹವನ್ನು ಶುದ್ಧೀಕರಿಸುವಂತಹ ಕೆಲಸವನ್ನು ಮಾಡುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1 ಲೋಟ ಬಿಸಿ ನೀರು ಕುಡಿದರೆ ಅದರಿಂದ ಕರುಳಿನ ಕ್ರಿಯೆ ಸರಾಗವಾಗುತ್ತದೆ.
ಅಂಗಾಂಗಗಳು ಶುಚಿಯಾಗುತ್ತದೆ ಚರ್ಮದ ಸೋಂಕು ಕಡಿಮೆಯಾಗುತ್ತದೆ.ಹಾಗೂ ಯಾವುದೇ ರೀತಿಯ ಚರ್ಮದ ಕಾಯಿಲೆ ಹತ್ತಿರವೂ ಸುಳಿಯುವುದಿಲ್ಲ.
ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಬಿಸಿನೀರು ಕುಡಿಯುವುದರಿಂದ ದೇಹವನ್ನು ಇದು ಕ್ಲೆನ್ಸ್ ಮಾಡುತ್ತದೆ. ರಕ್ತ ಶುದ್ಧೀಕರಣವಾಗುತ್ತದೆ ಇದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ.
ಚರ್ಮದ ಯಾವುದೇ ಸಮಸ್ಯೆಯಿಂದ ದೂರ ಉಳಿಯ ಬೇಕಾದರೆ ಬಿಸಿನೀರು ಉತ್ತಮವಾದ ಆಯ್ಕೆ ಎಂದೇ ಹೇಳಬಹುದು.ತಪ್ಪದೆ ಖಾಲಿ ಹೊಟ್ಟೆಗೆ ಹಾಗೂ ಮಲಗುವ ಮೊದಲು ಬಿಸಿ ನೀರು ಕುಡಿಯಲು ಮರೆಯದಿರಿ.
ಧನ್ಯವಾದಗಳು.