ಬೇಸಿಗೆಯಲ್ಲಿ ದೇಹ ತಂಪಾಗಿಡಲು ಮತ್ತು ದೇಹಕ್ಕೆ ಇದು ಅಮೃತವಿದ್ದಂತೆ!
ಬೇಸಿಗೆ ಕಾಲ ಶುರುವಾಗಿದೆ ಬಿಸಿಲ ತಾಪಕ್ಕೆ ದೇಹ ಬಾಯಿ ಒಣಗಿ ಬೆಂಡಾಗುತ್ತದೆ ಈ ಬಿಸಿಲ ತಾಪಕ್ಕೆ ಏನಾದರೂ ತಂಪಾದ ಪಾನೀಯ ಕುಡಿಯಬೇಕು ಎನಿಸುವುದು ಸರ್ವೇಸಾಮಾನ್ಯ.ಇನ್ನೂ ಅಂತಹ ತಂಪಾದ ಪಾನೀಯದ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.
ಕೆಮಿಕಲ್ ಯುಕ್ತ ತಂಪಾದ ಪಾನೀಯಗಳನಂಜು ಬೇಸಿಗೆ ಕಾಲದಲ್ಲಿ ಕುಡಿಯುವುದರಿಂದ
ನಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಹುದು.ಕೆಮಿಕಲ್ ಯುಕ್ತ ಪಾನೀಯಗಳಲಿ ಇರುವಂತಹ ಕೆಮಿಕಲ್ಸ್ , ಕಲರ್ , ಸಕ್ಕರೆ
ಇತ್ಯಾದಿ ರಾಸಾಯನಿಕಗಳು ಹೀಗೆ ಪ್ರತಿಯೊಂದು ಅಂಶವೂ ಸಹ ನಮ್ಮ ದೇಹಕ್ಕೆ ಹಾನಿಯನ್ನುಂಟು ಮಾಡುತ್ತದೆ.ಆದ್ದರಿಂದ ಆದಷ್ಟು ರಾಸಾಯನಿಕಯುಕ್ತ ತಂಪಾದ ಪಾನೀಯಗಳನ್ನು ಕುಡಿಯದೆ
ನೈಸರ್ಗಿಕವಾಗಿ ಸಿಗುವ ಎಳನೀರನ್ನು ಬೇಸಿಗೆಯ ಬಿಸಿಲ ತಾಪಕ್ಕೆ ಕುಡಿಯಿರಿ.ಇದರಿಂದ ರೈತರು ಒಳ್ಳೆಯದಾಗುತ್ತದೆ ಜೊತೆಗೆ ನಮ್ಮ ದೇಹವು ತಂಪಾಗುತ್ತದೆ ಜೊತೆಗೆ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ.
ಇನ್ನೂ ಮಕ್ಕಳು ಎಳನೀರನ್ನು ಕುಡಿಯದೆ ಇದ್ದ ಪಕ್ಷದಲ್ಲಿ ಹೀಗೆ ಮಾಡಿ
ಎಳನೀರನ್ನು ಕಟ್ ಮಾಡಿಕೊಂಡು ಅದರ ಒಳಗೆ ಇರುವ ಗಂಜಿಯ ತಿಳಿಯನ್ನು ಎಳನೀರಿನ ಜೊತೆಗೆ ಸೇರಿಸಿ ಕುಡಿಯಲು ಕೊಡಿ ಅಥವಾ ಗಂಜಿಯ ತಿಳಿಯ ಜೊತೆಗೆ ಸ್ವಲ್ಪ ಏಲಕ್ಕಿ ಪುಡಿ ಹಾಕಿ ಸ್ವಲ್ಪ ರುಚಿಗೆ ತಕ್ಕಷ್ಟು ಬೆಲ್ಲವನ್ನು ಹಾಕಿ ಮಿಕ್ಸಿಯಲ್ಲಿ ರುಬ್ಬಿ ಶೇಖ್ ರೀತಿ ಮಾಡಿಕೊಂಡು ಕುಡಿಯಲು ಕೊಡಿ.
ಇದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ ,ಉರಿ ಮೂತ್ರದ ಸಮಸ್ಯೆ ಯಿಂದ ಪರಿಹಾರ ದೊರೆಯುತ್ತದೆ ಹಾಗೂ ದೇಹಕ್ಕೆ ಇದು ಶಕ್ತಿಯನ್ನು ಒದಗಿಸುತ್ತದೆ.ಬೇಸಿಗೆಯಲ್ಲಿ ಎಳನೀರನ್ನು ಅಮೃತ ಎಂದರೆ ತಪ್ಪಾಗಲಾರದು ಆದ್ದರಿಂದ ಎಳನೀರನ್ನು ಕುಡಿದು ಆರೋಗ್ಯವಂತರಾಗಿ ರೋಣ.
ಧನ್ಯವಾದಗಳು