Bhagyalakshni: ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರವಾಹಿ ಭಾಗ್ಯಲಕ್ಷ್ಮಿ ಎಂದರೆ ತಪ್ಪಲ್ಲ. ನಟಿ ಸುಷ್ಮಾ ರಾವ್, ಸುದರ್ಶನ್ ರಂಗಪ್ರಸಾದ್, ಪದ್ಮಜಾ ರಾವ್ ಅವರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ಭಾಗ್ಯಲಕ್ಷ್ಮಿ ಧಾರವಾಹಿ ಕಿರುತೆರೆಯಲ್ಲಿ ಬಹಳಷ್ಟು ಜನಪ್ರಿತಯತೆ ಗಳಿಸಿದೆ, ಈ ಧಾರಾವಾಹಿಯಲ್ಲಿ ಭಾಗ್ಯಳನ್ನು ದ್ವೇಷಿಸುವ ನಾಯಕ ಸುದರ್ಶನ್ ರಂಗಪ್ರಸಾದ್ ಅವರ ವಯಸ್ಸು ಎಷ್ಟು ಗೊತ್ತಾ?
ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಭಾಗ್ಯ ತುಂಬಾ ಒಳ್ಳೆಯ ಸ್ವಭಾವದ ಹುಡುಗಿ, ಗಂಡ, ಮಕ್ಕಳು, ಅತ್ತೆ, ಮಾವ, ಅಪ್ಪ ಅಮ್ಮ, ತಂಗಿಯರು ಎಲ್ಲರನ್ನು ತುಂಬಾ ಚೆನ್ನಾಗಿ, ಯಾರಿಗೂ ನೋವಾಗದ ಹಾಗೆ ನೋಡಿಕೊಳ್ಳುವ ಹುಡುಗಿ. ತನಗೆ ಎಷ್ಟೇ ನೋವಾದರು, ಅವಮಾನ ಆದರೂ ಅದನ್ನು ಗಂಡನ ಜೊತೆಗೆ ಹೇಳಿಕೊಳ್ಳದ ಬ್ಯಾಗ್ಯ, ಅಡುಗೆ ಮಾಡುವುದರಲ್ಲಿ ಎತ್ತಿದ ಕೈ, ಕುಸುಮ ಭಾಗ್ಯನೇ ತನ್ನ ಮನೆಯ ಸೊಸೆ ಎಂದು ಹುಡುಕಿ ಹುಡುಕಿ ಮಗನ ಜೊತೆಗೆ ಮದುವೆ ಮಾಡಿಕೊಂಡಿರುತ್ತಾರೆ.
ಆದರೆ ಭಾಗ್ಯ ಓದಿಲ್ಲ, ತನ್ನ ನಿರೀಕ್ಷೆಗೆ ತಕ್ಕ ಹಾಗಿಲ್ಲ ಎನ್ನುವ ಕಾರಣಕ್ಕೆ ಭಾಗ್ಯಳನ್ನು ಕಂಡರೆ ತಾಂಡವ್ ಗೆ ಇಷ್ಟವಿಲ್ಲ. ಹಾಗಾಗಿ ಶ್ರೇಷ್ಠಳ ಸ್ನೇಹ ಮಾಡಿರುವ ತಾಂಡವ್, ಭಾಗ್ಯಳಿಗೆ ಪ್ರತಿ ವಿಚಾರದಲ್ಲೂ ಅವಮಾನ ಮಾಡುತ್ತಲೇ ಇರುತ್ತಾನೆ. ಆದರೆ ತನ್ನ ತಾಯಿ ಭಾಗ್ಯಳನ್ನು ಬಿಟ್ಟುಕೊಡುವುದಿಲ್ಲ ಎಂದು ಗೊತ್ತಾದ ನಂತರ, ತಾಂಡವ್ ಭಾಗ್ಯಳನ್ನು ಇಷ್ಟಪಡುವ ಹಾಗೆ ನಾಟಕ ಆಡುವುದಕ್ಕೆ ಶುರು ಮಾಡಿದ್ದಾನೆ. ಈ ವಿಚಾರ ಭಾಗ್ಯಳಿಗೆ ಸಹ ಗೊತ್ತಿದೆ.
ಆದರೂ ಗಂಡ ಮತ್ತು ಮಗಳು ಇಬ್ಬರಿಗು ಪಾಠ ಕಲಿಸಬೇಕು ಎಂದುಕೊಂಡಿದ್ದಾಳೆ ಭಾಗ್ಯ. ಧಾರವಾಹಿ ಕಥೆ ಈ ರೀತಿಯಲ್ಲಿ ಸಾಗುತ್ತಿದೆ. ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ತಾಂಡವ್ ಪಾತ್ರದಲ್ಲಿ ನಟಿಸುತ್ತಿರುವುದು ಸುದರ್ಶನ್ ರಂಗಪ್ರಸಾದ್, ಇವರು ಹಲವು ವರ್ಷಗಳಿಂದ ನಟನೆಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಕಲಾವಿದ. ಸುದರ್ಶನ್ ಅವರು ಬಹಳಶ್ಟು ವರ್ಷಗಳಿಂದ ನಾಟಕಗಳಲ್ಲಿ ನಟಿಸುತ್ತಾ ಇದ್ದಾರೆ.
ಕೆಲವು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಆದರೆ ಇವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಡುತ್ತಿರುವುದು ಭಾಗ್ಯಲಕ್ಷ್ಮಿ ಧಾರವಾಹಿ. ಧಾರವಾಹಿಯ ಮೂಲಕ ಸುದರ್ಶನ್ ಅವರ ನಟನೆಗೆ ಮೆಚ್ಚುಗೆ ಸಿಗುತ್ತಿದೆ, ನೆಗಟಿವ್ ಪಾತ್ರದಲ್ಲೇ ಶೈನ್ ಆಗುತ್ತಿದ್ದಾರೆ ಎಂದರೆ ತಪ್ಪಲ್ಲ. ಸುದರ್ಶನ್ ರಂಗಪ್ರಸಾದ್ ಅವರ ವಯಸ್ಸು ಎಷ್ಟು ಎಂದು ನೋಡುವುದಾದರೆ, ಇವರಿಗೆ ಈಗ 37 ವರ್ಷ. ಕನ್ನಡ ಚಿತ್ರರಂಗದ ನಟಿ ಸಂಗೀತ ಅವರೊಡನೆ ಮದುವೆಯಾಗಿದ್ದಾರೆ.