Bhagyalakshmi: ಭಾಗ್ಯಳಿಗೆ ಡೈವರ್ಸ್ ಕೊಡಲು ಮುಂದಾದ ತಾಂಡವ್! ಶ್ರೇಷ್ಠಗೆ ಸಂತೋಷ, ಆದ್ರೆ ಭಾಗ್ಯ ಕಥೆ?

0 1

Bhagyalakshmi: ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮೀ ಧಾರವಾಹಿ ಈಗ ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ ಎಂದು ಹೇಳಿದರೆ ತಪ್ಪಲ್ಲ. ಇದೀಗ ಈ ಧಾರವಾಹಿಯಲ್ಲಿ ತಾಂಡವ್ ಮನೆ ಬಿಟ್ಟು ಬಂದಿದ್ದಾನೆ. ಮನೆಯ ಇಎಂಐ ಕಟ್ಟಬೇಕು ಎಂದು ಭಾಗ್ಯಳಿಗೆ ಬೆದರಿಕೆ ಹಾಕಿದ್ದಕ್ಕೆ ಭಾಗ್ಯ ಒಡವೆಗಳನ್ನೆಲ್ಲಾ ಅಡವಿಟ್ಟು ಇಎಂಐ ಕಟ್ಟುತ್ತಾಳೆ. ಈ ವಿಷಯ ಕುಸುಮಾಳಿಗೆ ಗೊತ್ತಾಗಿ, ತಾಂಡವ್ ಜೊತೆಗೆ ಮಾತನಾಡಲು ಹೋಗುತ್ತಾಳೆ.

ಮನೆಯ ಇಎಂಐ ಭಾಗ್ಯ ಕಟ್ಟಬೇಕು ಅಂದ್ರೆ ಮನೆ ಅವಳ ಹೆಸರಲ್ಲೇ ಇರಬೇಕು ಎಂದು ತಾಂಡವ್ ಗೆ ಪ್ರಶ್ನೆ ಮಾಡಿ, ಡಾಕ್ಯುಮೆಂಟ್ ಗಳನ್ನು ರೆಡಿ ಮಾಡಿರುತ್ತಾಳೆ ಕುಸುಮ. ಇದನ್ನು ನೋಡಿ ತಾಂಡವ್ ಗೆ ಶಾಕ್ ಆಗಿ, ಮಾತುಕತೆ ಮುಂದುವರೆದು ತಾಂಡವ್ ಆ ಡಾಕ್ಯುಮೆಂಟ್ ಗಳಿಗೆ ಸೈನ್ ಹಾಕುತ್ತಾನೆ, ಮಗ ಚಿಕ್ಕವನಾಗಿದ್ದಾದ ಸಾಕಿದ್ದ ಹಣವನ್ನು ಕೊಡಬೇಕು ಎಂದು ಕೇಳಿದಾಗ, ಬಡ್ಡಿ ಸೇರಿಸಿ 25 ಲಕ್ಷ ಕೊಡುತ್ತೇನೆ ಎನ್ನುತ್ತಾನೆ ತಾಂಡವ್.

ಕುಸುಮಳ ದುಃಖದ ಕಟ್ಟೆ ಒಡೆದು, ಮಗಾನೆ ಇಲ್ಲ ಅಂದಮೇಲೆ ಮನೆ ದುಡ್ಡು ಇಟ್ಟುಕೊಂಡು ಏನು ಮಾಡಬೇಕು ಎಂದು ಕುಸುಮ ಡಾಕ್ಯುಮೆಂಟ್ ಅನ್ನು ತಾಂಡವ್ ಮೇಲೆ ಎಸೆದು ಹೋಗುತ್ತಾಳೆ. ಕೋಪಗೊಂಡು ಶ್ರೇಷ್ಠ ಮನೆಗೆ ಹೋಗುವ ತಾಂಡವ್, ಅಲ್ಲಿ ಅಮ್ಮನ ಮೇಲೆ ಕೋಪದಿಂದ ಹೀಗೆಲ್ಲಾ ಅಗೋದಕ್ಕೆ ಕಾರಣ ಭಾಗ್ಯ, ಅವಳಿಂದ ಮನೆ, ತಾಳಿ, ಅಧಿಕಾರ ಎಲ್ಲವನ್ನ ಕಿತ್ತುಕೊಳ್ತೀನಿ ಎನ್ನುತ್ತಾನೆ.

ಕೊನೆಗೆ ಭಾಗ್ಯಳಿಗೆ ವಿಚ್ಛೇದನ ಕೊಡುವ ನಿರ್ಧಾರ ಮಾಡಿದ್ದಾನೆ ತಾಂಡವ್. ಇದರಿಂದ ಶ್ರೇಷ್ಠಳಿಗೆ ಬಹಳ ಸಂತೋಷ ಆಗಿದೆ, ಆದರೆ ಭಾಗ್ಯಳ ಕಥೆ ಮುಂದೆ ಏನಾಗುತ್ತೋ ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಶುರುವಾಗಿದೆ. ಭಾಗ್ಯಲಕ್ಷ್ಮಿ ಧಾರವಾಹಿ ಕಥೆ ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.