Bharathi Vishnuvardhan: ನಟಿ ಭಾರತಿ ವಿಷ್ಣುವರ್ಧನ್ ಅವರಿಗೆ ಅನಾರೋಗ್ಯ! ಹಾಸಿಗೆ ಹಿಡಿದ ಹಿರಿಯನಟಿ!

0 15

Bharathi Vishnuvardhan: ಕನ್ನಡ ಚಿತ್ರರಂಗದ ಖ್ಯಾತ ಹಿರಿಯನಟಿ ಭಾರತಿ ವಿಷ್ಣುವರ್ಧನ್ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದೆ ಎಂದು ತಿಳಿದುಬಂದಿದೆ. ಚಂದನವನದ ಹಿರಿಯನಟ ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಅವರು. ಇವರು ಈಗ ವಯೋಸಹಜ ಆರೋಗ್ಯ ಸಮಸ್ಯೆ ಇಂದ ಹಾಸಿಗೆ ಹಿಡಿದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ..

ಭಾರತಿ ವಿಷ್ಣುವರ್ಧನ್ ಅವರ ಅಳಿಯ ಆಗಿರುವ ನಟ ಅನಿರುದ್ಧ್ ಅವರು ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತಿ ವಿಷ್ಣುವರ್ಧನ್ ಅವರಿಗೆ ವಯೋಸಹಜ ಆರೋಗ್ಯ ಸಮಸ್ಯೆ ಉಂಟಾಗಿದ್ದು, ಕೆಲ ದಿನಗಳಿಂದ ಮಯೋಸಹಜ ಸಮಸ್ಯೆಯ ಕಾರಣ ಮಂಡಿ ನೋವಿನಿಂದ ಬಳಲುತ್ತಿದ್ದಾರಂತೆ. ಇದರಿಂದ ಸರಿಯಾಗಿ ಊಟ ಮಾಡೋದಕ್ಕೂ ಸಮಸ್ಯೆ ಆಗಿದೆ ಎಂದು ಹೇಳಿದ್ದಾರೆ..

ನಟ, ನಿರ್ದೇಶಕ ಅನಿರುದ್ಧ್ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದು ಭಾರತಿ ಅವರು ಬೇಗ ಹುಷಾರಾಗಿ ಬರಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಭಾರತಿ ಅವರ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಅವರು ದಕ್ಷಿಣ ಭಾರತದ ಎಲ್ಲಾ ಭಾಷೆಗಳ ನಾಯಕಿಯಾಗಿ ದೊಡ್ಡ ಸ್ಟಾರ್ ಆಗಿ ಹೆಸರು ಮಾಡಿರುವವರು.ವೃತ್ತಿ ಜೀವನದಲ್ಲಿ 150 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

Leave A Reply

Your email address will not be published.