Latest Breaking News

ಮಿಡ್ ವೀಕ್ ಎಲಿಮಿನೇಷನ್: ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಗುರೂಜಿ ಔಟ್

0 14,209

Get real time updates directly on you device, subscribe now.

Big Boss Kannada ಕನ್ನಡ ಬಿಗ್ ಬಾಸ್ ಸೀಸನ್ ಒಂಬತ್ತು (Big Boss Kannada) ಶೋನಲ್ಲಿ ಫಿನಾಲೆ ವಾರ ಆರಂಭವಾಗಿದೆ. ಈ ವಾರದಲ್ಲಿ ಸ್ಪರ್ಧಿಗಳಿಗೆ ಹಲವು ಸರ್​ಪ್ರೈಸ್​ಗಳು ಇದ್ದೇ ಇರುತ್ತವೆ. ಕೆಲವು ಸಲ ಬಿಗ್ ಬಾಸ್ ಎಲಿಮಿನೇಷನ್ ವಿಚಾರದಲ್ಲಿ ಸಹಾ ಮನೆ ಮಂದಿಗೆ ವಿನೂತನ ಎನಿಸುವ ಸರ್ಪ್ರೈಸ್ ನೀಡುತ್ತಾರೆ.‌ ಈಗ ಬಿಗ್ ಬಾಸ್ ನ ಫಿನಾಲೆ ವಾರದಲ್ಲಿ ಸ್ಪರ್ಧಿಗಳಿಗೆ ಅಂತುಹುದೊಂದು ಸರ್ಪ್ರೈಸ್ ಸಿಕ್ಕಿದೆ. ಮನೆಯಲ್ಲಿ ಆರು ಜನ ಸದಸ್ಯರು ಇದ್ದು, ಫಿನಾಲೆ ವಾರದಲ್ಲಿ ಟಾಪ್ ಐದು ಸ್ಪರ್ಧಿಗಳು ಮಾತ್ರವೇ ಫಿನಾಲೆ ತಲುಪುತ್ತಾರೆ. ಆದರೆ ಮನೆಯಲ್ಲಿ ಆರು ಜನ ಸ್ಪರ್ಧಿಗಳು ಇರುವ ಕಾರಣ ಇಂದು ವಾರದ ಮಧ್ಯೆ ಒಂದು ಎಲಿಮಿನೇಷನ್ ಮುಗಿದಿದೆ ( Big Boss elimination)

ಬಸುರಿಯಾಗಿದ್ದಾಗಲೇ ನಟಿ ಉಮಾಶ್ರೀಗೆ ಕೈ ಕೊಟ್ಟ ಗಂಡ -ಮಕ್ಕಳಿಗಾಗಿ ಮತ್ತೆ ಮದುವೆಯಾಗದ ನಟಿ!

ಬಿಗ್ ಬಾಸ್ ಮನೆಯಲ್ಲಿ ಆರು ಜನ ಇದ್ದ ಸ್ಪರ್ಧಿಗಳ ಸಂಖ್ಯೆ ಈಗ ಐದಕ್ಕೆ ಇಳಿದಿದೆ. ಹೌದು, ಬಿಗ್ ಬಾಸ್ ಮನೆಯಿಂದ ಈಗ ಒಬ್ಬರು ವಾರದ ಮಧ್ಯದಲ್ಲಿ ಔಟ್ ಆಗಿದ್ದಾರೆ. ಇಂದಿನ ಎಪಿಸೋಡ್ ನ ಪ್ರೋಮೋ ಈಗ ಸಖತ್ ಸದ್ದು ಮಾಡುತ್ತಿದೆ. ಹೊಸ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿಯು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಒಂದು ಕ್ರೇನ್ ಮಾದರಿಯ ವಸ್ತುವನ್ನು ಬಿಗ್ ಬಾಸ್ ಮನೆಯಲ್ಲಿ ಇರಿಸಲಾಗಿದ್ದು, ಅದರ ಮೇಲೆ ಒಬ್ಬೊಬ್ಬರಾಗಿ ಸ್ಪರ್ಧಿಗಳು ನಿಂತ ಮೇಲೆ ಅದು ಕೆಳಗೆ ಹೋಗಿ ಮೇಲೆ ಬರುತ್ತದೆ. ಮೇಲೆ ಬಂದಾಗ ಯಾವ ಸ್ಪರ್ಧಿ ಕಾಣುವುದಿಲ್ಲವೋ ಅವರು ಎಲಿಮಿನೇಟ್ ಆದರು ಎಂದರ್ಥ ಎಂದು ಬಿಗ್ ಬಾಸ್ ಹೇಳಿದ್ದಾರೆ.

ಈಗ ಹೊರ ಬಂದಿರುವ ಸುದ್ದಿಗಳ ಪ್ರಕಾರ ಈ ಕ್ರೇನ್ ಟ್ವಿಸ್ಟ್ ನಂತರ, ಸದ್ಯ ಬಿಗ್ ಬಾಸ್ ಮನೆಯಲ್ಲಿ ಇದ್ದಂತಹ ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದಿವ್ಯ ಉರುಡುಗ ಹಾಗೂ ದೀಪಿಕಾ ದಾಸ್ ಅವರ ಪೈಕಿ ಆರ್ಯವರ್ಧನ್ ಗುರೂಜಿ ಅವರು ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಇಂದಿನ ಎಪಿಸೋಡ್​ನಲ್ಲಿ ಅಧಿಕೃತವಾಗಿ ತಿಳಿಯಲಿದೆ ಎನ್ನಲಾಗಿದೆ. ಓಟಿಟಿ ಇಂದ ಟಿವಿ ಬಿಗ್ ಬಾಸ್ ಗೆ ಎಂಟ್ರಿ ನೀಡಿದ್ದ ಆರ್ಯವರ್ಧನ್ ಗುರೂಜಿ (Aryavardhan Guruji) ಅವರ ಆಟಕ್ಕೆ ಈಗ ಬ್ರೇಕ್ ಬಿದ್ದಿದೆ ಎನ್ನಲಾಗುತ್ತಿದೆ.

Get real time updates directly on you device, subscribe now.

Leave a comment