Bigg Boss: 11ನೇ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದ ಅವಿನಾಶ್!

Written by Pooja Siddaraj

Published on:

Bigg Boss: ಬಿಗ್ ಬಾಸ್ ಮನೆಯಲ್ಲಿ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯವಾಗಿದೆ. ಈ ವಾರ ಡಬಲ್ ಎಲಿಮಿನೇಷನ್ ಆಗುತ್ತದೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದಾರೆ. ಡಬಲ್ ಎಲಿಮಿನೇಷನ್ ಆಗುತ್ತದೆ ಎಂದು ಅನ್ನಿಸಿದ್ದರು ಸಹ, ಎಲಿಮಿನೇಟ್ ಆಗಿರುವ ಇಬ್ಬರು ಸದಸ್ಯರು ಯಾರು ಎಂದು ಇನ್ನು ಗೊತ್ತಿಲ್ಲ, ಆದರೆ ಒಬ್ಬರು ಮಾತ್ರ ಅವಿನಾಶ್ ಎಂದು ಹೇಳಲಾಗುತ್ತಿದೆ.

ಹೌದು, 11ನೇ ವಾರದ ಶುರುವಿನಲ್ಲಿ 6 ಜನ ಸದಸ್ಯರು ನಾಮಿನೇಟ್ ಆಗಿದ್ದರು. ಸಂಗೀತ, ಪ್ರತಾಪ್, ಸಿರಿ, ಮೈಕಲ್, ಅವಿನಾಶ್ ಹಾಗೂ ವರ್ತೂರ್ ಸಂತೋಷ್ ನಾಮಿನೇಟ್ ಆಗಿದ್ದರು. ಈ ವಾರ ವೀಕೆಂಡ್ ಎಪಿಸೋಡ್ ನಲ್ಲಿ ಸುದೀಪ್ ಅವರು ಕೂಡ ಬಂದಿಲ್ಲ. ಕೆಸಿಸಿ ಮ್ಯಾಚ್ ಇರುವ ಕಾರಣ ಈ ವಾರ ಸುದೀಪ್ ಅವರ ಬದಲಾಗಿ ಶನಿವಾರ ನ್ಯಾಯಾಲಯದಲ್ಲಿ ಪಂಚಾಯಿತಿ ಮಾಡಲು ಬಿಗ್ ಬಾಸ್ ಕನ್ನಡ ಸೀಸನ್3 ವಿನ್ನರ್ ಶ್ರುತಿ ಅವರು ಬಂದಿದ್ದರು.

ಇನ್ನು ಭಾನುವಾರದ ಸಂಚಿಕೆಯಲ್ಲಿ ಮಾಜಿ ಸ್ಪರ್ಧಿಗಳಾದ ಶೈನ್ ಶೆಟ್ಟಿ ಅವರು ಹಾಗೂ ಶುಭಾ ಪೂಂಜಾ ಅವರು ಇಬ್ಬರು ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇವರಿಬ್ಬರು ಬಂದು ಸ್ಪರ್ಧಿಗಳಿಗೆ ಕೆಲವು ಫನ್ ಟಾಸ್ಕ್ ಆಡಿಸಿ, ಎಲಿಮಿನೇಷನ್ ಪ್ರಕ್ರಿಯೆ ಮುಗಿಸಿದ್ದಾರೆ. ಮನೆಯಿಂದ ಈ ವಾರ ಅವಿನಾಶ ಅವರು ಎಲಿಮಿನೇಟ್ ಆಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಡಬಲ್ ಎಲಿಮಿನೇಷನ್ ಆಗಿದ್ಯಾ ಎನ್ನುವುದು ಇಂದು ಸಂಜೆ ಎಪಿಸೋಡ್ ನೋಡಿದಾಗ ಗೊತ್ತಾಗಲಿದೆ.

Leave a Comment