Bigg Boss: ಯೂಟರ್ನ್ ಹೊಡೆದ ಬಿಗ್ ಬಾಸ್! ಡಬಲ್ ಎಲಿಮಿನೇಷನ್ ನಡೆದೇ ಇಲ್ಲ! ಹಾಗಿದ್ರೆ ಮೈಕಲ್ ಕಥೆ ಏನಾಯ್ತು?

Written by Pooja Siddaraj

Published on:

Bigg Boss: ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯವಾಗಿದೆ. ನಿನ್ನೆ ವಾರ ಡಬಲ್ ಎಲಿಮಿನೇಷನ್ ಆಗುತ್ತದೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಡಬಲ್ ಎಲಿಮಿನೇಷನ್ ಅದ ಘಟನೆ ಕೂಡ ಬೇರೆ ರೀತಿಯೇ ಇತ್ತು.
ಹೌದು, 11ನೇ ವಾರದ ಶುರುವಿನಲ್ಲಿ 6 ಜನ ಸದಸ್ಯರು ನಾಮಿನೇಟ್ ಆಗಿದ್ದರು. ಸಂಗೀತ, ಪ್ರತಾಪ್, ಸಿರಿ, ಮೈಕಲ್, ಅವಿನಾಶ್ ಹಾಗೂ ವರ್ತೂರ್ ಸಂತೋಷ್ ನಾಮಿನೇಟ್ ಆಗಿದ್ದರು.

ಕಳೆದ ವಾರ ವೀಕೆಂಡ್ ಎಪಿಸೋಡ್ ನಲ್ಲಿ ಸುದೀಪ್ ಅವರು ಕೂಡ ಬಂದಿಲ್ಲ. ಕೆಸಿಸಿ ಮ್ಯಾಚ್ ಇರುವ ಕಾರಣ ಈ ವಾರ ಸುದೀಪ್ ಅವರ ಬದಲಾಗಿ ಶನಿವಾರ ನ್ಯಾಯಾಲಯದಲ್ಲಿ ಪಂಚಾಯಿತಿ ಮಾಡಲು ಬಿಗ್ ಬಾಸ್ ಕನ್ನಡ ಸೀಸನ್3 ವಿನ್ನರ್ ಶ್ರುತಿ ಅವರು ಬಂದಿದ್ದರು. ಇನ್ನು ಭಾನುವಾರದ ಸಂಚಿಕೆಯಲ್ಲಿ ಮಾಜಿ ಸ್ಪರ್ಧಿಗಳಾದ ಶೈನ್ ಶೆಟ್ಟಿ ಅವರು ಹಾಗೂ ಶುಭಾ ಪೂಂಜಾ ಅವರು ಇಬ್ಬರು ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.

ಇವರಿಬ್ಬರು ಬಂದು ಸ್ಪರ್ಧಿಗಳಿಗೆ ಕೆಲವು ಫನ್ ಟಾಸ್ಕ್ ಆಡಿಸಿ, 3 ಸ್ಪರ್ಧಿಗಳನ್ನು ಸೇವ್ ಮಾಡಿದರು. ಕೊನೆಯಲ್ಲಿ ಉಳಿದಿದ್ದು ಮೈಕಲ್ ಹಾಗೂ ಅವಿನಾಶ್. ಇವರಿಬ್ಬರನ್ನು ಕಾರ್ ಒಳಗೆ ಕೂರಿಸಿ, ಯಾವ ಕಾರ್ ಹೊರ ಹೋಗುತ್ತದೆ ಅವರು ಎಲಿಮಿನೇಟ್, ಅಲ್ಲಿಯೇ ಉಳಿಯುವ ಕಾರ್ ನಲ್ಲಿರುವ ಸ್ಪರ್ಧಿ ಸೇವ್ ಆದ ಹಾಗೆ ಎಂದು ಹೇಳಿದ್ದರು ಬಿಗ್ ಬಾಸ್. ಆದರೆ ಎರಡು ಕಾರ್ ಗಳು ಕೂಡ ಇದ್ದಕ್ಕಿದ್ದ ಹಾಗೆ ಹೊರಹೋದವು.

ಎಲ್ಲರೂ ಸಹ ಡಬಲ್ ಎಲಿಮಿನೇಶನ್ ಆಗಿರಬಹುದು ಎಂದೇ ಅಂದುಕೊಂಡಿದ್ದರು. ಆದರೆ ಬಿಗ್ ಬಾಸ್ ಒಂದು ಬಿಗ್ ಟ್ವಿಸ್ಟ್ ನೀಡಿದ್ದಾರೆ. ಮನೆಯಿಂದ ಹೊರ ಹೋಗಿರುವುದು ಅವಿನಾಶ್ ಅವರು ಮಾತ್ರ, ಭಾನುವಾರದ ಎಪಿಸೋಡ್ ಮುಗಿದು ಸ್ವಲ್ಪ ಸಮಯ ಕಳೆದ ನಂತರ ಮೈಕಲ್ ಅವರು ಮನೆಗೆ ವಾಪಸ್ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Comment