Bigg Boss: 13ನೇ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿ ಇವರೇ

0 12

Bigg Boss: ಬಿಗ್ ಬಾಸ್ ಮನೆಯಲ್ಲಿ ಈಗ ಸ್ಪರ್ಧಿಗಳು 13ನೇ ವಾರದ ಆಟವನ್ನು ಮುಗಿಸಿದ್ದಾರೆ. ಹೊಸ ವರ್ಷದ ಮನೆಯ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ಸಂಗೀತ ಶೃಂಗೇರಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಸಂಗೀತ ಕಳೆದ 3 ವಾರಗಳಿಂದ ಮಹಿಳೆಯರೇ ಮನೆಯ ಕ್ಯಾಪ್ಟನ್ ಆಗಿರುವುದು ಮತ್ತೊಂದು ವಿಶೇಷ ಆಗಿದೆ. ಇನ್ನು ಈ ವಾರ ಮನೆಯಿಂದ ಹೊರಬಂದಿರುವ ಸ್ಪರ್ಧಿ ಯಾರು ಎಂದು ಕೂಡ ರಿವೀಲ್ ಆಗಿದೆ.

ಈ ವಾರ ಮನೆಯಲ್ಲಿ ಕೊಟ್ಟಿದ್ದ ಟಾಸ್ಕ್ ನಲ್ಲಿ ಎಲ್ಲರ ಈಗೋ ಹೆಚ್ಚಾಗಿ ಕಾಣಿಸಿತು ಎಂದು ನಿನ್ನೆಯ ಕಿಚ್ಚನ ಪಂಚಾಯಿತಿ ಸಂಚಿಕೆವಲ್ಲಿ ಸುದೀಪ್ ಅವರು ಮೈಕಲ್, ವಿನಯ್, ನಮ್ರತಾ ಹಾಗೂ ತುಕಾಲಿ ಸಂತೋಷ್ ಅವರಿಗೆ ಕ್ಲಾಸ್ ತೆಗೆದುಕೊಂಡರು. ನಿನ್ನೆ ಸುದೀಪ್ ಅವರು ಸಿಕ್ಕಾಪಟ್ಟೆ ಕೋಪಗೊಂಡಿದ್ದರು. ಇನ್ನು ಈ ವಾರ ನಾಮಿನೇಟ್ ಆಗಿರುವ ಎಲ್ಲರು ಕೂಡ ಹುಡುಗರೇ ಆಗಿದ್ದಾರೆ..

ತುಕಾಲಿ ಸಂತೋಷ್, ಕಾರ್ತಿಕ್, ಮೈಕಲ್, ವಿನಯ್ ಹಾಗೂ ಪ್ರಯಪ್ ನಾಮಿನೇಟ್ ಆಗಿದ್ದು, ನಿನ್ನೆಯ ಸಂಚಿಕೆಯಲ್ಲಿ ಸುದೀಪ್ ಅವರು ಕಾರ್ತಿಕ್ ಅವರನ್ನು ಮೊದಲು ಸೇವ್ ಮಾಡಿದರು. ಇನ್ನು ಈ ವಾರ ಮನೆಯಿಂದ ಎಲಿಮಿನೇಟ್ ಆಗಿರುವ ಸ್ಫರ್ಧಿ ಯಾರು ಎನ್ನುವ ಕುತೂಹಲ ಇದ್ದು, ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ 13ನೇ ವಾರ ಮೈಕಲ್ ಅವರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ.

ಹೌದು, ಕಳೆದ ಕೆಲವು ವಾರಗಳಿಂದ ಮೈಕಲ್ ಅವರ ವರ್ತನೆ ಯಾರಿಗೂ ಕೂಡ ಇಷ್ಟ ಆಗುತ್ತಿರಲಿಲ್ಲ, ಮನೆಯ ಹೊರಗಿರುವ ವೀಕ್ಷಕರಿಗೆ ಸಹ ಮೈಕಲ್ ಅವರು ಅಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ಅನ್ನಿಸಿತ್ತು, ಅವರ ವರ್ತನೆ ಸಹ ಹಾಗೆ ಇತ್ತು, ಈ ಎಲ್ಲಾ ಕಾರಣಗಳಿಂದ ಮೈಕಲ್ ಅವರು ಈ ವಾರ ಎಲಿಮಿನೇಟ್ ಆಗಿದ್ದಾರೆ.

Leave A Reply

Your email address will not be published.