Bigg Boss: ಬಿಗ್ ಬಾಸ್ ಮನೆಯಲ್ಲಿ ಈಗ ಕಾರ್ತಿಕ್ ವಿಲ್ಲನ್! ಯಾರಿಗೂ ಬೇಡವಾದ ಕಾರ್ತಿಕ್!

0 13

Bigg Boss: ಬಿಗ್ ಬಾಸ್ ಮನೆಯಲ್ಲಿ ಈಗ 15ನೇ ವಾರ ಶುರುವಾಗಿದೆ. ನಿನ್ನೆ ಯಾವುದೇ ಎಲಿಮಿನೇಷನ್ ನಡೆದಿಲ್ಲ, ಮನೆಯಲ್ಲಿರುವ 8 ಸ್ಪರ್ಧಿಗಳ ಪೈಕಿ ಯಾರು ಕೂಡ ಎಲಿಮಿನೇಟ್ ಆಗಿಲ್ಲ. ಎಲ್ಲರೂ 15ನೇ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು 2 ವಾರಗಳಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈಗಾಗಲೇ ಫಿನಾಲೆಗೆ ಒಬ್ಬ ಸ್ಪರ್ಧಿ ಎಂಟ್ರಿ ಕೊಟ್ಟಿದ್ದು ಆಕೆ ಸಂಗೀತ ಆಗಿದ್ದಾರೆ. ಇನ್ನು 7 ಜನರ ಫಿನಾಲೆ ಭವಿಷ್ಯ ಈ ವರ್ಷ ನಿರ್ಧಾರ ಆಗಲಿದೆ.

ಈ ದಿನ ಮನೆಯ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಆ ಟಾಸ್ಕ್ ನ ಮೂಲಕ ಆಯಾ ಸ್ಪರ್ಧಿಗೆ ಯಾರು ಬೇಡವೋ ಅವರ ಫೋಟೋವನ್ನು ಬೆಂಕಿಗೆ ಹಾಕಿ, ಅವರ ಮೇಲೆ ಯಾಕೆ ಕೋಪ ಎಂದು ತಿಳಿಸಬೇಕು. ಈ ಟಾಸ್ಕ್ ನಲ್ಲಿ ಕಾರ್ತಿಕ್ ಅವರ ಬೆಸ್ಟ್ ಫ್ರೆಂಡ್ಸ್ ಆಗಿದ್ದ ಸಂಗೀತ ಹಾಗೂ ತನಿಷಾ ಇಬ್ಬರು ಕೂಡ ಕಾರ್ತಿಕ್ ಫೋಟೋವನ್ನು ಬೆಂಕಿಗೆ ಹಾಕಿದ್ದಾರೆ.

ತನಿಷಾ ಅವರು ಬಹಳ ಕೋಪದಲ್ಲಿ ಈ ರೀತಿ ಮಾಡಿದ್ದು, “ಕಾರ್ತಿಕ್, ಹೇಳುವಂಥ ಮಾತನ್ನ ಉಳಿಸಿಕೊಳ್ಳೋಕೆ ಆಗಲ್ಲ. ಹಾರ್ಟ್ ಗೆ ಚುಚ್ಚಿದ್ರೆ ನಾನು ಡೈರೆಕ್ಟ್ ಆಗಿ ಬೆಂಕಿಗೆ ಹಾಕ್ತಿನಿ. ಸುಟ್ಟು ಪುಡಿಪುಡಿ ಮಾಡಿ ಆ ಬೂದಿನು ಸಿಗದೆ ಇರೋಷ್ಟು ಕ್ರೂರಿ ಆಗ್ಬಿಡ್ತೀನಿ..” ಎಂದು ಹೇಳಿ ಕಾರ್ತಿಕ್ ಫೋಟೋವನ್ನು ಬೆಂಕಿಗೆ ಹಾಕಿದ್ದಾರೆ ತನಿಷಾ. ಇನ್ನು ತುಕಾಲಿ ಸಂತೋಷ್ ಅವರು ಕೂಡ ಕಾರ್ತಿಕ್ ಅವರ ಫೋಟೋವನ್ನೇ ಬೆಂಕಿಗೆ ಹಾಕಿದ್ದಾರೆ.

ಈ ಒಂದು ತಿರುವು ಬಿಗ್ ಬಾಸ್ ಮನೆಯಲ್ಲಿ ಬೇರೆ ರೀತಿಯೇ ಆಗಿದ್ದು, ಕಳೆದ ಕೆಲವು ದಿನಗಳಿಂದ ಕಾರ್ತಿಕ್ ಅವರು ಬಹಳ ನೆಗಟಿವ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಮೊದಲು ಸಂಗೀತ ಅವರೊಡನೆ ಇದ್ದು, ಸಂಗೀತ ಅವರ ಬಗ್ಗೆಯೇ ಇನ್ನೊಬ್ಬರ ಜೊತೆಗೆ ಮಾತನಾಡಿ, ನಂತರ ನಮ್ರತಾ ಅವರೊಡನೆ ಸ್ನೇಹ ಬೆಳೆಸಿ. ಈಗ ತನಿಷಾ ಅವರಿಗು ಕೂಡ ಇಷ್ಟವಾಗದ ಹಾಗೆ ಆಗಿದ್ದಾರೆ. ಒಟ್ಟಿನಲ್ಲಿ ಕಾರ್ತಿಕ್ ಈಗ ತಮ್ಮ ಆಟದ ಹಳಿ ತಪ್ಪಿ, ಯಾರಿಗೂ ಬೇಡದ ಹಾಗೆ ಆಗಿದ್ದಾರೆ.

Leave A Reply

Your email address will not be published.