Bigg Boss: ಬಿಗ್ ಬಾಸ್ ಮನೆಗೆ ಒಂದೇ ಸಾರಿ ಎರಡೆರಡು ವೈಲ್ಡ್ ಕಾರ್ಡ್ ಎಂಟ್ರಿ! ಈ ಸಾರಿ ಬರ್ತಿರೋ ಸ್ಪರ್ಧಿಗಳು ಯಾರು ಗೊತ್ತಾ?

0 1

Bigg Boss: ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿ 7 ವಾರ ಕಳೆದಿದೆ, ನಿನ್ನೆಯಷ್ಟೇ 50 ಎಪಿಸೋಡ್ ಗಳನ್ನು ಕಂಪ್ಲೀಟ್ ಮಾಡಿದ ಸ್ಪೆಷಲ್ ಎಪಿಸೋಡ್ ನಡೆದಿದೆ. ಜೊತೆಗೆ ಕಳೆದ ವಾರ ಕ್ವಿಜ್ ಗೆದ್ದ ಬಾಯ್ಸ್ ಗೆ ಕಿಚ್ಚನ ಕಡೆಯಿಂದ ಸ್ಪೆಷಲ್ ಗಿಫ್ಟ್ ಕೂಡ ಸಿಕ್ಕಿದೆ. ಇಂದು ಬೆಳಗ್ಗೆ ಬೆಳೆಗ್ಗೆಯೇ ಇಂದಿನ ಎಪಿಸೋಡ್ ನ ಪ್ರೋಮೋ ಬಿಟ್ಟಿದ್ದು, ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಗೆ ಎಂಟ್ರಿ ಕೊಡಲಿದ್ದಾರೆ. ಇಂದಿನ ಸಂಚಿಕೆ ಇನ್ನು ವಿಶೇಷ.

ಹೌದು, ಬಿಗ್ ಬಾಸ್ ಮನೆ ಎಂದರೆ ದಿನಕ್ಕೆ ಹೊಸ ಸರ್ಪ್ರೈಸ್ ಗಳು ಇದ್ದೆ ಇರುತ್ತದೆ. ಟಾಸ್ಕ್ ವಿಚಾರ ಆಗಲಿ, ರೂಲ್ಸ್ ವಿಚಾರ ಆಗಲಿ ಬಿಗ್ ಬಾಸ್ ಕಡೆಯಿಂದ ಮನೆಯ ಸ್ಪರ್ಧಿಗಳಿಗೆ ಸರ್ಪ್ರೈಸ್ ಗಳು, ಶಾಕ್ ಗಳು ಸಿಗುತ್ತಲೇ ಇರುತ್ತದೆ. ಅದೇ ರೀತಿ ಈಗ ಬಿಗ್ ಬಾಸ್ ಅರ್ಧ ಜರ್ನಿ ಮುಗಿದಿರುವ ವೇಳೆ ಸ್ಪರ್ಧಿಗಳಿಗೆ ಸರ್ಪ್ರೈಸ್ ಮತ್ತು ಶಾಕ್ ಎರಡು ಸಿಕ್ಕಿದೆ ಎಂದರೆ ತಪ್ಪಲ್ಲ.

ಇಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಬಿಗ್ ಬಾಸ್ ಮನೆಗೆ ಇಬ್ಬರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಿದ್ದಾರೆ. ಪ್ರೋಮೋದಲ್ಲಿ ಅವರ ಮುಖವನ್ನು ಇನ್ನು ತೋರಿಸಿಲ್ಲ, ಇಂದಿನ ಎಪಿಸೋಡ್ ನಲ್ಲಿ ಹೊಸ ಸ್ಪರ್ಧಿಗಳು ಯಾರು ಎನ್ನುವುದು ರಿವೀಲ್ ಆಗಲಿದೆ.. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಹೊಸ ಸ್ಪರ್ಧಿಗಳು ಯಾರು ಎನ್ನುವುದು ರಿವೀಲ್ ಆಗಿದೆ.

ಹೌದು, ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಿರುವ ಸ್ಪರ್ಧಿಗಳು ಯಾರು ಎನ್ನುವ ವಿಷಯ ರಿವೀಲ್ ಆಗಿದ್ದು, ಒಬ್ಬರು ಮಾಡೆಲ್ ಪವಿ ಪೂವಯ್ಯ, ಇವರು ಮೂಲತಃ ಮಡಿಕೇರಿಯ ಹುಡುಗಿ ಆಗಿದ್ದು. ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿದ್ದಾರೆ, ಇವರು ಮಾಡೆಲ್ ಆಗಿ ಬಣ್ಣದ ಜಗತ್ತಿನಲ್ಲಿ ಸಕ್ರಿಯವಾಗಿದ್ದಾರೆ. ಇದೀಗ ಇವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ.

ಇನ್ನು ಮತ್ತೊಬ್ಬ ಹೊಸ ಸ್ಪರ್ಧಿ ಉದಯ್ ಸೂರ್ಯ. ಇವರು ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1ರ ಸ್ಪರ್ಧಿ. ಜೊತೆಗೆ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಕಲಾವಿದ ಉದಯ್ ಸೂರ್ಯ. ಇವರು ಕೂಡ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಂದಿದ್ದಾರೆ. ಇನ್ನುಮುಂದೆ ಸ್ಪರ್ಧಿಗಳಿಗೆ ಹೊಸ ಕಾಂಪಿಟೇಶನ್ ಇರಲಿದ್ದು, ಹೊಸ ಸ್ಪರ್ಧಿಗಳ ಹವಾ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.