Bigg Boss: ಡಬಲ್ ಎಲಿಮಿನೇಷನ್ ನಲ್ಲಿ ಹೊರಬಂದ ಇಶಾನಿ ಮತ್ತು ಭಾಗ್ಯಶ್ರೀ ಅವರಿಗೆ ಸಿಕ್ಕ ಸಂಭಾವನೆ ಎಷ್ಟು?

Written by Pooja Siddaraj

Published on:

Bigg Boss: ಬಿಗ್ ಬಾಸ್ ನಲ್ಲಿ ಡಬಲ್ ಎಲಿಮಿನೇಷನ್ ಆಗಿದೆ, ಈ ವಾರ ಭಾಗ್ಯಶ್ರೀ ಮತ್ತು ಇಶಾನಿ ಇಬ್ಬರು ಎಲಿಮಿನೇಷನ್ ಆಗಿದ್ದಾರೆ. ಪ್ರತಿ ವಾರ ಎಲಿಮಿನೇಷನ್ ಎನ್ನುವುದು ಕಾಮನ್, ಪ್ರತಿ ವಾರ ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದಾರೆ. ಆದರೆ ಈ ವಾರ ಡಬಲ್ ಎಲಿಮಿನೇಷನ್ ಆಗಿದೆ. ಡಬಲ್ ಎಲಿಮಿನೇಶನ್ ಆಗಿದ್ದರ ಹಿಂದೆ ಕೂಡ ಒಂದು ಕಾರಣ ಇದೆ.

ಕಳೆದ ವಾರ ಎಲಿಮಿನೇಟ್ ಆಗಿದ್ದು ನೀತು ಆದರೆ ವರ್ತೂರ್ ಸಂತೋಷ್ ಅವರು ಬಿಗ್ ಬಾಸ್ ಮನೆಯಿಂದ ಹೊರಹೋಗ್ತೀನಿ ಅಂತ ಹಠ ಹಿಡಿದಿದ್ದರು. ಅವರಿಗೆ 34 ಲಕ್ಷ ಜನರ ವೋಟ್ ಬಿದ್ದಿದೆ ಎಂದು ಹೇಳಿದರು ಕೂಡ ಸಂತೋಷ್ ಅವರು ಹಠ ಮಾಡಿದ್ದಾಗ, ಸುದೀಪ್ ಅವರು ತಾವು ಜನರ ವಿರುದ್ಧ ಹೋಗುವುದಿಲ್ಲ ಎಂದು ಹೇಳಿ, ಅಂದು ಶೋ ಇಂದಲೇ ಹೊರಹೋಗಿದ್ದರು. ಬಳಿಕ ವರ್ತೂರ್ ಸಂತೋಷ್ ಅವರ ತಾಯಿ ಮನೆಗೆ ಬಂದು ಸಮಾಧಾನ ಮಾಡಿದ ನಂತರ ಮನೆಯಲ್ಲೇ ಇರುವುದಕ್ಕೆ ಒಪ್ಪಿಕೊಂಡರು ಸಂತೋಷ್.

ಹೀಗೆ ಒಂದು ವಾರ ಎಲಿಮಿನೇಶನ್ ನಡೆಯದ ಕಾರಣ, ಈ ವಾರ ಡಬಲ್ ಎಲಿಮಿನೇಷನ್ ನಡೆಯಿತು. ಈ ವೀಕೆಂಡ್ ನಲ್ಲಿ ಶನಿವಾರದ ಸಂಚಿಕೆಯಲ್ಲೇ ಇಶಾನಿ ಅವರನ್ನು ಮನೆಯಿಂದ ಹೊರಗೆ ಕರೆದಿದ್ದರು ಕಿಚ್ಚ ಸುದೀಪ್. ಭಾನುವಾರದ ಎಲಿಮಿನೇಷನ್ ನಲ್ಲಿ ಭಾಗ್ಯಾಶ್ರಿ ಅವರು ಎಲಿಮಿನೇಟ್ ಆಗಿದ್ದರು. ಇವರಿಬ್ಬರು ಈ ವಾರ ಡಬಲ್ ಎಲಿಮಿನೇಷನ್ ಇಂದ ಹೊರಬಂದಿದ್ದು, ಇವರಿಗೆ ಸಿಕ್ಕಿರುವ ಸಂಭಾವನೆ ಎಶ್ಟು ಎಂದು ಚರ್ಚೆ ಶುರುವಾಗಿದೆ.

ಪ್ರಸ್ತುತ ಸಿಕ್ಕಿರುವ ಮಾಹಿತಿಯ ಅನುಸಾರ ಬಿಗ್ ಬಾಸ್ ಮನೆಯಲ್ಲಿ ಭಾಗ್ಯಶ್ರೀ ಅವರಿಗೆ ಒಂದು ವಾರಕ್ಕೆ 75,000 ರೂಪಾಯಿ ಸಂಭಾವನೆ ನಿಗದಿ ಆಗಿತ್ತು ಎಂದು ಹೇಳಲಾಗುತ್ತಿದೆ. ಒಂದು ವಾರಕ್ಕೆ 75 ಸಾವಿರದ ಹಾಗೆ 6 ವಾರಗಳಿಗೆ 3.50 ಲಕ್ಷ ರೂಪಾಯಿ ಸಂಭಾವನೆ ಭಾಗ್ಯಶ್ರೀ ಅವರಿಗೆ ಸಿಕ್ಕಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.

ಇನ್ನು ಇಶಾನಿ ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಎಂದರೆ, ಇವರಿಗೆ ವಾರಕ್ಕೆ 1 ಲಕ್ಷ ರೂಪಾಯಿಯ ಹಾಗೆ ಸಂಭಾವನೆ ನಿಗದಿಯಾಗಿತ್ತು ಎಂದು ಹೇಳಲಾಗುತ್ತಿದೆ. ವಾರಕ್ಕೆ 1ಲಕ್ಷದ ಹಾಗೆ 6 ವಾರಕ್ಕೆ 6 ಲಕ್ಷ ರೂಪಾಯಿ ಸಂಭಾವನೆ ನಿಗದಿಯಾಗಿತ್ತು, ಪ್ರಸ್ತುತ ಇವರಿಗು ಅಷ್ಟೇ ಸಂಭಾವನೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಡಬಲ್ ಎಲಿಮಿನೇಷನ್ ನಲ್ಲಿ ಹೊರಬಂದಿರುವ ಸ್ಪರ್ಧಿಗಳಿಗೆ ಸಿಕ್ಕಿರುವ ಒಟ್ಟಾರೆ ಹಣ ಇಷ್ಟಾಗಿದೆ.

Leave a Comment