Bigg Boss: ಬಿಗ್ ಬಾಸ್ ಶೋ ಅಂದ್ರೆ ಬಿಗ್ ಬಾಸ್ ಕೊಡುವ ವಿಭಿನ್ನವಾದ ಟಾಸ್ಕ್ ಗಳಿಂದಲೇ ಹೆಚ್ಚು ಜನರ ಗಮನ ಸೆಳೆಯುತ್ತದೆ. ಕೆಲವೊಮ್ಮೆ ಗ್ರೂಪ್ ಮಾಡಿ ಟಾಸ್ಕ್ ಕೊಡುವ ಬಿಗ್ ಬಾಸ್ ಇನ್ನು ಕೆಲವೊಮ್ಮೆ ಪ್ರತಿ ಸ್ಪರ್ಧಿಗೆ ವಿಭಿನ್ನವಾಗಿ ಅಥವಾ ವಿಶೇಷವಾಗಿ ಟಾಸ್ಕ್ ನೀಡುತ್ತಾರೆ. ಇದು ಕೆಲವೊಮ್ಮೆ ಮನೆಯ ಇತರ ಸ್ಪರ್ಧಿಗಳಿಗೆ ಟೆನ್ಷನ್ ಶಸ್ ಕೊಡಬಹುದು.
ಇದೇ ಕಾರಣಕ್ಕೆ ಬಿಗ್ ಬಾಸ್ ಇಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಪ್ರಸ್ತುತ ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಇಂಥದ್ದೇ ಒಂದು ಟ್ವಿಸ್ಟ್ ಸಿಕ್ಕಿದೆ. ಇಂದಿನ ಎಪಿಸೋಡ್ ಪ್ರೊಮೋವನ್ನು ಕಲರ್ಸ್ ಕನ್ನಡ ಚಾನೆಲ್ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದು, ಇದರಲ್ಲಿ ಗುರೂಜಿ ನರೇಂದ್ರ ಬಾಬು ಶರ್ಮಾ ಅವರು ಬಿಗ್ ಬಾಸ್ ಮನೆಗೆ ಬಂದಿರುವುದನ್ನು ನೋಡಬಹುದು. ಗುರೂಜಿ ಅವರನ್ನು ನೋಡಿ ಮನೆಯ ಸ್ಪರ್ಧಿಗಳು ಶಾಕ್ ಆಗಿದ್ದಾರೆ..
ನರೇಂದ್ರ ಬಾಬು ಶರ್ಮಾ ಅವರಿಗೆ ಬಿಗ್ ಬಾಸ್ ಹೊಸದಲ್ಲಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 1ರಲ್ಲಿ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿ ಆಗಿದ್ದರು. ಫಿನಾಲೆವರೆಗು ಬಿಗ್ ಬಾಸ್ ಶೋನಲ್ಲಿ ಉಳಿದುಕೊಂಡು ಒಳ್ಳೆಯ ಮನರಂಜನೆ ನೀಡಿದ್ದರು ಗುರೂಜಿ. ಇವರು ಬಿಗ್ ಬಾಸ್ ಇಂದ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಇಂದಿಗೂ ಕೂಡ ಕಾರ್ಯಕ್ರಮಗಳಲ್ಲಿ ಜ್ಯೋತಿಷ್ಯ ನುಡಿಯುತ್ತಾರೆ.
ಇವರ ಮುಂಡಾಮೋಚ್ತು ಎನ್ನುವ ಡೈಲಾಗ್ ಮತ್ತು ಜನರಿಗೆ ಇವರು ಬಯ್ಯುವುದರಿಂದ ಹೆಚ್ಚು ಜನರಿಂದ ಟ್ರೋಲ್ ಗು ಒಳಗಾಗಿದ್ದಾರೆ. ಇವರ ಡೈಲಾಗ್ ಗಳು ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್ ಕೂಡ ಆಗಿವೆ. ಹೀಗೆ ಭಾರಿ ಜನಪ್ರಿಯತೆಯನ್ನು ಪಡೆದಿರುವ ಗುರೂಜಿ ಇದೀಗ ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.
ಪ್ರೊಮೋದಲ್ಲಿ ಎಲ್ಲರೂ ಕೂಡ ನರೇಂದ್ರ ಬಾಬು ಶರ್ಮಾ ಅವರನ್ನು ಶಾಕ್ ಆಗಿದ್ದಾರೆ. ಕೆಲವರು ಗುರೂಜಿ ಯಾಕೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ ಎಂದು ಹೇಳಿ ತಲೆಕೆಡಿಸಿಕೊಂಡಿದ್ದಾರೆ, ಇನ್ನು ಗುರೂಜಿ ಹೇಳುವ ಮಾತುಗಳನ್ನು ಕೇಳಿ ಮನೆಯ ಸ್ಪರ್ಧಿಗಳು ಎಂಜಾಯ್ ಕೂಡ ಮಾಡಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಗೆ ಬಂದಿರುವ ಗುರೂಜಿ ಹೊಸ ಹವಾ ಎಬ್ಬಿಸಿದ್ದು, ಏನಾಗುತ್ತದೆ ಎಂದು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ.