Bigg Boss: ಬಿಗ್ ಬಾಸ್ ಶೋನ ಈ ಸೀಸನ್ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ ಎಂದರೆ ತಪ್ಪಲ್ಲ. ಸ್ಪರ್ಧಿಗಳು ಒಂದಲ್ಲಾ ಒಂದು ಕಾರಣದಿಂದ ವಿವಾದಗಳಿಗೆ ಸಿಲುಕಿಕೊಳ್ಳುತ್ತಿದ್ದಾರೆ. ಮೊದಲಿಗೆ ನಟ ವಿನಯ್ ಮಹಿಳೆಯರಿಗೆ ಮರಿಯಾದೆ ಕೊಡುತ್ತಿಲ್ಲ ಎನ್ನುವ ಕಾರಣಕ್ಕೆ ಸುದ್ದಿಯಾಗಿದ್ದರು. ಇದೊಂದು ದೊಡ್ಡ ವಿವಾದವೇ ಆಗಿತ್ತು. ಬಳಿಕ ವರ್ತೂರ್ ಸಂತೋಷ್ ಅವರು ವಿವಾದಕ್ಕೆ ಸಿಲುಕಿಕೊಂಡರು.
ಹುಲಿ ಉಗುರು ಇರುವ ಪೆಂಡೆಂಟ್ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ವರ್ತೂರ್ ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ, ಅರೆಸ್ಟ್ ಮಾಡಲಾಗಿತ್ತು. ಒಂದು ವಾರಗಳ ಕಾಲ ವರ್ತೂರ್ ಸಂತೋಷ್ ಅವರು ಜೈಲು ವಾಸ ಮಾಡಿ, ಬೇಲ್ ಸಿಕ್ಕ ನಂತರ ಮತ್ತೆ ಬಿಗ್ ಬಾಸ್ ಮನೆಗೆ ಬಂದರು. ಈ ಕಥೆ ಆದ ನಂತರ ಇದೀಗ ಬಿಗ್ ಬಾಸ್ ನ ಮತ್ತೊಬ್ಬ ಸ್ಪರ್ಧಿಯ ವಿರುದ್ಧ ದೂರು ದಾಖಲಾಗಿದೆ.
ಈ ಬಾರಿ ದೂರು ದಾಖಲಾಗಿರುವುದು ನಟಿ ತನಿಷಾ ಕುಪ್ಪಂಡ ಅವರ ವಿರುದ್ಧ, ಹೌದು, ಭೋವಿ ಸಮುದಾಯಕ್ಕೆ ಅವಮಾನ ಆಗುವ ಹಾಗೆ ತನಿಶಾ ಅವರು ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ತನಿಶಾ ಅವರ ವಿರುದ್ಧ ದೂರು ನೀಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಮನೆಯಲ್ಲಿ ಇನ್ನಿತರ ಸ್ಪರ್ಧಿಗಳ ಜೊತೆಗೆ ಮಾತನಾಡುವಾಗ ತನಿಷಾ ಅವರು ಬಳಕೆ ಮಾಡಿರುವ ಒಂದು ಪದ ಇದೀಗ ವಿವಾದಕ್ಕೆ ಕಾರಣವಾಗಿದೆ.
ಕುಂಬಳಗೋಡು ಪೊಲೀಸ್ ಸ್ಟೇಶನ್ ನಲ್ಲಿ ತನಿಷಾ ಅವರ ವಿರುದ್ಧ ದೂರು ದಾಖಲಾಗಿದೆ ಎಂದು ಹೇಳಲಾಗುತ್ತಿದ್ದು, ತನಿಷಾ ಅವರು ಉಪಯೋಗಿಸಿದ ಅದೊಂದು ಪದ ಅವಹೇಳನಕಾರಿಯಾಗಿದೆ ಎಂದು ದೂರು ನೀಡಲಾಗಿದೆ. ಅಖಿಲ ಕರ್ನಾಟಕ ಭೋವಿ ಸಮಾಜದ ರಾಜ್ಯಾಧ್ಯಕ್ಷೆ ಆಗಿರುವ ಪಿ ಪದ್ಮಾ ಅವರು ತನಿಷಾ ಅವರ ವಿರುದ್ಧ ದೂರು ನೀಡಿದ್ದಾರೆ. ಇದೀಗ ಬಿಗ್ ಬಾಸ್ ನ ಮತ್ತೊಬ್ಬ ಸ್ಪರ್ಧಿ ತೊಂದರೆಗೆ ಸಿಲುಕಿದ್ದಾರೆ.
ತನಿಷಾ ಅವರ ವಿರುದ್ಧ ದೂರು ದಾಖಲಾಗಿರುವುದು ನಿಜ, ಆದರೆ ಎಫ್.ಐ.ಆರ್ ದಾಖಲಾಗುತ್ತಾ, ತನಿಷಾ ಅವರನ್ನು ಅರೆಸ್ಟ್ ಮಾಡುತ್ತಾರಾ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಈ ವಿಚಾರದಲ್ಲಿ ಯಾವ ರೀತಿ ಬದಲಾವಣೆ ಆಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.