Bigg Boss: ವೀಕೆಂಡ್ ಬಂತು ಎಂದರೆ ಬಿಗ್ ಬಾಸ್ ಮನೆಯಲ್ಲಿ ಸಂತೋಷ್ ಆತಂಕ ಎರಡು ಇರುತ್ತದೆ. ಕಿಚ್ಚ ಸುದೀಪ್ ಅವರು ಮನೆಯ ಸ್ಪರ್ಧಿಗಳೊಡನೆ ಮಾತನಾಡಿ, ಸರಿತಪ್ಪುಗಳನ್ನು ತಿಳಿಸಿ ಕೊಡುತ್ತಾರೆ. ಹಾಗೆಯೇ ಸ್ಪರ್ಧಿಗಳ ಜೊತೆಗೆ ಸಾಕಷ್ಟು ತಮಾಷೆಯನ್ನು ಕೂಡ ಮಾಡುತ್ತಾರೆ. ಇದೆಲ್ಲವೂ ಸಂತೋಷ ತರುವಂಥ ವಿಷಯವಾದರೆ, ದುಃಖದ ವಿಚಾರ ವೀಕೆಂಡ್ ಎಪಿಸೋಡ್ ನಲ್ಲಿ ಎಲಿಮಿನೇಷನ್ ಇರುತ್ತದೆ.
ಪ್ರತಿ ಭಾನುವಾರ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬರುತ್ತಾರೆ. ಪ್ರತಿ ವಾರ ಮನೆಯಿಂದ ಹೊರಹೋಗುವುದು ಯಾರು ಎನ್ನುವ ಕೂತೂಹಲ ಜನರಲ್ಲಿ ಮತ್ತು ಮನೆಯ ಸ್ಪರ್ಧಿಗಳಲ್ಲಿ ಇರುತ್ತದೆ. ಅದೇ ರೀತಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದವರು ಯಾರು ಎನ್ನುವ ಕುತೂಹಲದ ಜೊತೆಗೆ ಹೊರಬಂದಿದ್ದು ಯಾರು ಎಂದು ಕೂಡ ಗೊತ್ತಾಗಿದೆ. 7ನೇ ವಾರದಲ್ಲಿ ಡಬಲ್ ಎಲಿಮಿನೇಷನ್ ನಡೆಯುತ್ತಿದೆ.
ನಿನ್ನೆಯ ಸಂಚಿಕೆಯಲ್ಲಿ ಕನ್ನಡ ರಾಪರ್ ಎಂದು ಹೇಳಿ ಬಂದಿದ್ದ ಇಶಾನಿ ಅವರು ಎಲಿಮಿನೇಟ್ ಆಗಿದ್ದಾರೆ. ಬಿಗ್ ಮನೆಯಲ್ಲಿ ಇಶಾನಿ ಸದ್ದು ಮಾಡಲೇ ಇಲ್ಲ, ಮೈಕಲ್ ಜೊತೆಗೆ ಕೆಲವು ದಿನಗಳ ಕಾಲ ಲವ್ ಎಂದು ಓಡಾಡಿದರು ಸಹ, ಹೇಳಿಕೊಳ್ಳುವಂಥ ಮನರಂಜನೆಯನ್ನೇನು ಕೊಡಲಿಲ್ಲ. ಜೊತೆಗೆ ಇವರು ಮಾಡುತ್ತಿದ್ದ ಜಗಳಗಳಿಗೂ ಅರ್ಥವಿರಲಿಲ್ಲ. ಹಾಗಾಗಿ ಇಶಾನಿ ಮನೆಯಿಂದ ಹೊರಬಂದಿರುವುದು ಆಶ್ಚರ್ಯವೇನು ಅಲ್ಲ.
ಮನೆಯಿಂದ ಹೊರಬಂದಿರುವ ಮತ್ತೊಬ್ಬ ಸ್ಪರ್ಧಿ ಯಾರು ಎನ್ನುವ ಪ್ರಶ್ನೆಗೂ ಈಗ ಉತ್ತರ ಸಿಕ್ಕಿದ್ದು, ಮನೆಯಿಂದ ಹೊರಬಂದಿರುವ ಎರಡನೇ ಸ್ಪರ್ಧಿ ಭಾಗ್ಯಶ್ರೀ ಎಂದು ಹೇಳಲಾಗುತ್ತಿದೆ. ಹೌದು, ಈ ವಾರ ಹೊರಬಂದಿರೋದು ಭಾಗ್ಯಶ್ರೀ ಎಂದು ಕಿಚ್ಚನ ಪಂಚಾಯಿತಿ ಎಪಿಸೋಡ್ ಬರುವ ಮೊದಲೇ ಸುದ್ದಿ ವೈರಲ್ ಆಗಿದೆ. ಭಾಗ್ಯಶ್ರೀ ಅವರು ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಪ್ರದರ್ಶನ ನೀಡಿರಲಿಲ್ಲ. ಟಾಸ್ಕ್ ಗಳಲ್ಲೂ ಉತ್ತಮವಾಗಿ ಪರ್ಫಾರ್ಮ್ ಮಾಡಿರಲಿಲ್ಲ.
ಹೆಚ್ಚಾಗಿ ಅಳುತ್ತಾ ಅಥವಾ ಯಾರಾದರೂ ತಮಗೆ ನೋವು ಕೊಟ್ಟಿದ್ದಾರೆ ಎಂದೇ ಮಾತನಾಡುತ್ತಿದ್ದರು. ಈ ಮೊದಲೇ ಇವರು ಎಲಿಮಿನೇಟ್ ಆಗಬೇಕಿತ್ತು, ಆದರೆ ಸೇವ್ ಆಗಿ ಉಳಿದುಕೊಂಡಿದ್ದರು. ಈ ವಾರ ಕೊನೆಗೂ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಇಂದಿನ ಕಿಚ್ಚನ ಪಂಚಾಯಿತಿ ಎಪಿಸೋಡ್ ನಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.