Bigg Boss: ಬಿಗ್ ಬಾಸ್ ಮನೆಯಲ್ಲಿ ಯಕ್ಕಾ, ರಾಜ ರಾಣಿ ಆಟ, ಪಟ್ಟ ಸಿಕ್ಕಿದ್ದು ಯಾರಿಗೆ?

Written by Pooja Siddaraj

Published on:

Bigg Boss: ಈ ಸೀಸನ್ ನಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ವಿಭಿನ್ನವಾದ ಟಾಸ್ಕ್ ನೀಡುತ್ತಿದ್ದಾರೆ. ಒಂದೊಂದ್ ಟಾಸ್ಕ್ ಗಳು ಕೂಡ ಬೇರೆ ರೀತಿಯಲ್ಲಿ ವಿಭಿನ್ನವಾಗಿ ಮೂಡಿಬರುತ್ತಿದೆ. ಸ್ಪರ್ಧಿಗಳ ಮನಸ್ಥಿತಿಯನ್ನು ತಿಳಿಸುತ್ತಿದೆ ಎಂದರೆ ತಪ್ಪಲ್ಲ. 100 ದಿನಗಳ ಈ ಆಟದಲ್ಲಿ ಯಾವ ಸ್ಪರ್ಧಿಯ ಮನಸ್ಥಿತಿ ಯಾವಾಗ ಹೇಗಿರುತ್ತದೆ ಎನ್ನುವುದನ್ನು ಊಹಿಸುವುದು ಕೂಡ ಕಷ್ಟವೇ. ಇಂದು ಇದ್ದ ಅಭಿಪ್ರಾಯ ನಾಳೆ ಬೇರೆಯೇ ಆಗಬಹುದು.

ಇಂದು ಸ್ನೇಹಿತರಾಗಿ ಇದ್ದವರು, ನಾಳೆ ಶತ್ರುವು ಆಗಬಹುದು. ಇಂಥ ವಿಭಿನ್ನ ಮನಸ್ಥಿತಿಯನ್ನು ತಿಳಿಸುವ ಸಲುವಾಗಿಯೇ ಬಿಗ್ ಬಾಸ್ ಕೆಲವು ಟಾಸ್ಕ್ ಗಳನ್ನು ನೀಡುತ್ತಾರೆ ಎಂದರೆ ತಪ್ಪಲ್ಲ. ನಿನ್ನೆ ಬಿಗ್ ಬಾಸ್ ಒಂದು ವಿಭಿನ್ನವಾದ ಟಾಸ್ಕ್ ನೀಡಿದ್ದರು. ಅದು ಎಕ್ಕಾ, ರಾಜ, ರಾಣಿ, ಜೋಕರ್ ಟಾಸ್ಕ್. ಈ ಟಾಸ್ಕ್ ನ ಅನುಸಾರ ಮನೆಯ ಸ್ಪರ್ಧಿಗಳು ಅಲ್ಲಿರುವವರ ಪೈಕಿ ಎಕ್ಕಾ, ರಾಜ, ರಾಣಿ ಮತ್ತು ಜೋಕರ್ ಯಾರು ಎನ್ನುವುದನ್ನು ತಿಳಿಸಬೇಕು. ಆಯ್ಕೆಗೆ ಕಾರಣ ಏನು ಎನ್ನುವುದನ್ನು ಕೂಡ ತಿಳಿಸಬೇಕು.

ಮನೆಯವರ ಆಯ್ಕೆಯ ಅನುಸಾರ ಜೋಕರ್ ಎಂದು ಭಾಗ್ಯಶ್ರೀ ಅವರನ್ನು ಆಯ್ಕೆ ಮಾಡಲಾಗಿದೆ, ತನಿಷಾ ಅವರನ್ನು ರಾಣಿ ಎಂದು ಆಯ್ಕೆ ಮಾಡಲಾಗಿದೆ, ವಿನಯ್ ಅವರನ್ನು ರಾಜ ಎಂದು ಆಯ್ಕೆ ಮಾಡಲಾಗಿದೆ, ಪ್ರತಾಪ್ ಅವರನ್ನು ಎಕ್ಕಾ ಎಂದು ಆಯ್ಕೆ ಮಾಡಲಾಗಿದೆ. ತನಿಷಾ ಅವರು ಜೋರು ಎಂದು ಅನ್ನಿಸಿದರು ಕೂಡ ಮಕ್ನೆಯ ಸ್ಪರ್ಧಿಗಳಿಗೆ ಅವರ ನೇರ ನಡೆ ಮತ್ತು ನಿರ್ಧಾರಗಳಿಂದ ರಾಣಿಯ ಹಾಗೆ ಕಂಡಿದ್ದಾರೆ. ಇನ್ನು ವಿನಯ್ ಅವರ ಮೇಲೆ ಸ್ವಲ್ಪ ಅಸಮಾಧಾನ ಇದ್ದರು ಅವರನ್ನು ರಾಜ ಎಂದು ಆಯ್ಕೆ ಮಾಡಲಾಗಿದೆ.

ಪ್ರತಾಪ್ ಅವರ ಚಾಕಚಕ್ಯತೆ ಮತ್ತು ಇನ್ನಿತರ ಕಾರಣಕ್ಕೆ ಅವರನ್ನು ಎಕ್ಕಾ ಎಂದು ಆಯ್ಕೆ ಮಾಡಲಾಗಿದೆ. ಈ ಆಯ್ಕೆಗಳು ಮುಗಿದ ನಂತರ ಆಯ್ಕೆಯಾದವರು ಸಹ ಮಾತಾನಾಡಿದ್ದು, ಭಾಗ್ಯಶ್ರೀ ಅವರು ಕೆಲವು ವಿಚಾರಗಳಲ್ಲಿ ತಮಾಷೆ ಮಾಡುವುದು ತಮಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ. ಇನ್ನು ತನಿಶಾ ಅವರು ತಮ್ಮನ್ನು ರಾಣಿ ಎಂದು ಆಯ್ಕೆ ಮಾಡಿದ ಮನೆಯ ಸದಸ್ಯರಿಗೆ ಹಾರ್ಟ್ ಕೊಟ್ಟು, ಧನ್ಯವಾದ ಹೇಳಿದ್ದಾರೆ. ವಿನಯ್ ಅವರು ಸಹ ಎಲ್ಲರಿಗೂ ಧನ್ಯವಾದ ತಿಳಿಸಿ, ಈ ಪಟ್ಟವನ್ನು ಒಪ್ಪಿಕೊಳ್ಳೋಕೆ ಭಯವಿದೆ, ಇಲ್ಲಿ ಬೇರೆಯವರಿಗೂ ರಾಜ ಆಗಬಹುದು ಎಂದು ಅನ್ನಿಸುತ್ತದೆ, ಚಾಲೆಂಜ್ ಇರಲಿ ಎಂದಿದ್ದಾರೆ ವಿನಯ್.

ಇನ್ನು ಪ್ರತಾಪ್ ಅವರು ಮಾತನಾಡಿ, ಇನ್ನುಮುಂದೆ ಡ್ರೋನ್ ಹಾರುತ್ತದೆ ಎಂದು ಹೇಳಿದ್ದಾರೆ. ಪ್ರತಾಪ್ ಅವರ ಮಾತಿಗೆ ಮನೆಮಂದಿ ಚಿಯರ್ ಮಾಡಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ನೀಡಿದ ಈ ಟಾಸ್ಕ್ ಇಂದ ಸಾಕಷ್ಟು ಮಾತುಗಳು, ವಿಚಾರಗಳು ಗೊತ್ತಾಗಿದೆ. ಇದರಿಂದ ಮನೆಯ ಸದಸ್ಯರ ಅಭಿಪ್ರಾಯಗಳು ಕೂಡ ತಿಳಿದುಬಂದಿದೆ. ಈ ಪಟ್ಟವನ್ನು ಸ್ಪರ್ಧಿಗಳು ಉಳಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.

Leave a Comment